ರೆಸಾರ್ಟ್​ ಬಳಿ ಪ್ರತಿಭಟನೆ; ದಿಗ್ವಿಜಯ್​ ಸಿಂಗ್ ಸೇರಿ ಅನೇಕ ಕಾಂಗ್ರೆಸ್​ ನಾಯಕರು ವಶಕ್ಕೆ ಪಡೆದು ಬಿಡುಗಡೆ

ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಹಾಗೂ ನಾಲ್ವರು ಕಾಂಗ್ರೆಸ್​ ಶಾಸಕರು ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು. ಆಪರೇಷನ್​ ಕಮಲದ ವಿರುದ್ಧ ಅವರು ಪ್ರತಿಭಟನೆ ಕೂಡ ನಡೆಸಿದರು. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ.

news18-kannada
Updated:March 18, 2020, 10:49 AM IST
ರೆಸಾರ್ಟ್​ ಬಳಿ ಪ್ರತಿಭಟನೆ; ದಿಗ್ವಿಜಯ್​ ಸಿಂಗ್ ಸೇರಿ ಅನೇಕ ಕಾಂಗ್ರೆಸ್​ ನಾಯಕರು ವಶಕ್ಕೆ ಪಡೆದು ಬಿಡುಗಡೆ
ಬಂಧನಕ್ಕೊಳಗಾದ ದಿಗ್ವಿಜಯ್ ಸಿಂಗ್​
  • Share this:
ಬೆಂಗಳೂರು (ಮಾ.18): ಮಧ್ಯಪ್ರದೇಶದ ಅತೃಪ್ತ ಶಾಸಕರ ಭೇಟಿರಗೆ ಅವಕಾಶ ನೀಡದ್ದಕ್ಕೆ ರಮಡಾ ಹೊಟೇಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್ ಸಿಂಗ್​ ಸೇರಿ ಅನೇಕ ಕೈ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಅವರನ್ನು ಬಿಡುಗಡೆ ಮಾಡಲಾಯಿತು. 

ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಹಾಗೂ ನಾಲ್ವರು ಕಾಂಗ್ರೆಸ್​ ಶಾಸಕರು ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು. ಆಪರೇಷನ್​ ಕಮಲ ಮಾಡುವಾಗ ಬಿಜೆಪಿ ರಾಜ್ಯದ ಕೆಲ ಕಾಂಗ್ರೆಸ್​ ಶಾಸಕರನ್ನು ಮುಂಬೈ ಹೋಟೆಲ್​ನಲ್ಲಿ ಇರಿಸಿತ್ತು. ಈ ವೇಳೆ ಡಿ.ಕೆ. ಶಿವಕುಮಾರ್​ ಶಾಸಕರನ್ನು ಭೇಟಿ ಮಾಡಲು ತೆರಳಿದಾಗ ಅಲ್ಲಿನ ಪೊಲೀಸರು ಭೇಟಿಗೆ ಅವಕಾಶ ನೀಡಿರಲಿಲ್ಲ. ಈಗ ಇದೇ ಪರಿಸ್ಥಿತಿ ದಿಗ್ವಿಜಯ್​ ಸಿಂಗ್​ಗೂ ಬಂದೊದಗಿದೆ. ಶಾಸಕರನ್ನು ಭೇಟಿ ಮಾಡಲು ಅವರು ಪ್ರಯತ್ನಿಸಿದರಾದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.

ಹೀಗಾಗಿ, 500ಕ್ಕೂ ಅಧಿಕ ಕಾರ್ಯಕರ್ತರು ದಿಗ್ವಿಜಯ್​ ಸಿಂಗ್​ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಿದರು. “ಬಿಜೆಪಿ ಆಪರೇಷನ್ ಕಮಲ ನಡೆಸಿದೆ. ಸರ್ಕಾರ ನಡೆಸುವ ನೈತಿಕತೆ ಕಳೆದುಕೊಂಡಿದೆ’ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಕೈ ಶಾಸಕರಾದ ಭೈರತಿ ಸುರೇಶ್, ಕೃಷ್ಣ ಭೈರೇಗೌಡ, ರಿಜ್ವಾನ್ ಅರ್ಷದ್​, ಎನ್. ಹ್ಯಾರಿಸ್ ಭಾಗಿಯಾಗಿದ್ದರು.

ಇದನ್ನೂ ಓದಿ: ಕರ್ನಾಟಕದ ರೆಸಾರ್ಟ್​​​ನಲ್ಲಿ ಮಧ್ಯಪ್ರದೇಶದ ಕೈ ಶಾಸಕರು; ಡಿಕೆಶಿಯಂತೆಯೇ ಗೇಟ್ ಕಾಯುತ್ತಿರುವ ದಿಗ್ವಿಜಯ್ ಸಿಂಗ್

ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಮೃತಹಳ್ಳಿ ಪೊಲೀಸರು ದಿಗ್ವಿಜಯ್ ಸಿಂಗ್, ಮಾಜಿ ಸಚಿವ ಕೃಷ್ಣ ಬೈರೇಗೌಡ,  ಶಾಸಕರಾದ ಹ್ಯಾರಿಸ್, ರಿಜ್ವಾನ್ ಹರ್ಷದ್ ಸೇರಿ ಹಲವು ನಾಯಕರು ವಶಕ್ಕೆ ಪಡೆದಿದ್ದಾರೆ. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಮುಚ್ಚಳಿಕೆ ಬರೆಸಿಕೊಂಡು ಪೊಲೀಸರು ಇವರನ್ನು ಬಿಡುಗಡೆ ಮಾಡಿದ್ದಾರೆ.

ದೊಡ್ಡಬಳ್ಳಾಪುರ ರಸ್ತೆ ಬಂದ್:

ರಮಾಡ ರೆಸಾರ್ಟ್​ ದೊಡ್ಡಬಳ್ಳಾಪುರ ರಸ್ತೆ ಸಮೀಪವೇ ಇದೆ. ಹೀಗಾಗಿ ಭಾರೀ ಪ್ರತಿಭಟನೆಯಿಂದಾಗಿ ದೊಡ್ಡಬಳ್ಳಾಪುರ ರಸ್ತೆ ಸಂಪೂರ್ಣ ಬಂದ್​ ಆಗಿದೆ. ಇದರಿಂದಾಗಿ ಸುಮಾರು ಅರ್ಧ ಕಿಲೋಮೀಟರ್​ ವಾಹನಗಳು ನಿಂತಿದ್ದು ಕಂಡು ಬಂತು. ಇದರಿಂದ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಯಿತು.
First published:March 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading