ನುಡಿದಂತೆ ಬಳ್ಳಾರಿಗೆ ಬಂದಿದ್ದೇನೆ, ಎಲ್ಲಿ ನಿನ್ನ ಖಡ್ಗ: ಸೋಮಶೇಖರ್​ ರೆಡ್ಡಿ ಮನೆ ಮುಂದೆ ಜಮೀರ್ ಅಬ್ಬರ, ಬೆನ್ನಲ್ಲೇ ವಶಕ್ಕೆ

ಜಮೀರ್​ ಮತ್ತವರ ಬೆಂಬಲಿಗರು, ರೆಡ್ಡಿ ನಿವಾಸಕ್ಕೆ ಮೆರವಣಿಗೆ ಮೂಲಕ ಲಗ್ಗೆ ಹಾಕಲು ಸಜ್ಜಾಗಿದ್ದರು. ಅನುಮತಿಯಿಲ್ಲದೇ ಮೆರವಣಿಗೆಗೆ ಸಜ್ಜಾದ ಹಿನ್ನೆಲೆ ಜಮೀರ್​ ಸೇರಿದಂತೆ 30ಕ್ಕೂ ಹೆಚ್ಚು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

news18-kannada
Updated:January 13, 2020, 12:10 PM IST
ನುಡಿದಂತೆ ಬಳ್ಳಾರಿಗೆ ಬಂದಿದ್ದೇನೆ, ಎಲ್ಲಿ ನಿನ್ನ ಖಡ್ಗ: ಸೋಮಶೇಖರ್​ ರೆಡ್ಡಿ ಮನೆ ಮುಂದೆ ಜಮೀರ್ ಅಬ್ಬರ, ಬೆನ್ನಲ್ಲೇ ವಶಕ್ಕೆ
ಜಮೀರ್​ ಅಹಮದ್​
  • Share this:
ಬಳ್ಳಾರಿ (ಜ.13): ಹಿಂದು - ಮುಸ್ಲಿಂ ಸಮುದಾಯದ ಕೋಮು ಸೌಹಾರ್ದತೆ ಕದಡುವಂತ ಹೇಳಿಕೆಯನ್ನು ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ ಕೆಲ ದಿನಗಳ ಹಿಂದೆ ನೀಡಿದ್ದರು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಜತೆಗೆ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ಕೆಂಡಾಮಂಡಲರಾಗಿದ್ದರು. ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಜಮೀರ್​, ಬಳ್ಳಾರಿಗೇ ಬರುತ್ತೇನೆ, ಅದೇನು ಮಾಡ್ತೀರೋ ಮಾಡಿ ಎಂದು ಗುಡುಗಿದ್ದರು. ಇದೀಗ ಹೇಳಿದಂತೆ ಜಮೀರ್​ ಸೋಮಶೇಖರ್​ ಮನೆಗೆ ಬೆಂಬಲಿಗರೊಂದಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ ಅನುಮತಿ ಪಡೆಯದೇ ಪ್ರತಿಭಟನೆಗೆ ಮುಂದಾದ ಕಾರಣಕ್ಕೆ ಜಮೀರ್​ ಮತ್ತವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

"ಹಿಂದೂಗಳು ಉಫ್​ ಎಂದು ಊದಿದರೆ ಮುಸಲ್ಮಾನರೆಲ್ಲಾ ಹಾರಿ ಹೋಗ್ತಾರೆ ಎಂದಿದ್ದರಲ್ಲ. ನಿಮ್ಮ ಊರಿಗೆ ಬರುತ್ತೇವೆ. ಮೊದಲು ನನ್ನನ್ನು ಉಫ್​ ಎಂದು ಊದಿ ಏನಾಗುತ್ತದೆ ನೋಡುತ್ತೇನೆ," ಎಂದು ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಗೆ ಜಮೀರ್​ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಇಂದು ಬಳ್ಳಾರಿಗೆ ಭೇಟಿ ನೀಡಿದ್ದಾರೆ.

ಜಮೀರ್​ ಆಗಮನದ ಹಿನ್ನೆಲೆ ಇಂದು ಸೋಮಶೇಖರ ರೆಡ್ಡಿ ಮನೆಸುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ನೀಡಲಾಗಿತ್ತು. ಜಮೀರ್​ರನ್ನು ಬೆಂಬಲಿಸಿ ಬೆಂಗಳೂರು, ಚನ್ನಪಟ್ಟಣ, ಕಲಬುರಗಿ ಸೇರಿದಂತೆ ರಾಜ್ಯದ ಹಲವೆಡೆಯಿಂದ ಕಾರ್ಯಕರ್ತರು ಕೂಡ ಆಗಮಿಸಿದ್ದರು.

ಜಮೀರ್​  ಮತ್ತವರ ಬೆಂಬಲಿಗರು, ರೆಡ್ಡಿ ನಿವಾಸಕ್ಕೆ ಮೆರವಣಿಗೆ ಮೂಲಕ ಲಗ್ಗೆ ಹಾಕಲು ಸಜ್ಜಾಗಿದ್ದರು. ಅನುಮತಿಯಿಲ್ಲದೇ ಮೆರವಣಿಗೆಗೆ ಸಜ್ಜಾದ ಹಿನ್ನೆಲೆ ಜಮೀರ್​ ಸೇರಿದಂತೆ 30ಕ್ಕೂ ಹೆಚ್ಚು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಅನುಮತಿ ಕೇಳಿದ್ದೆ ಕೊಟ್ಟಿಲ್ಲ. ಯಾವುದೇ ಶಾಂತಿಭಂಗ ಮಾಡಲು ನಾವು ಬಂದಿಲ್ಲ. ಉಫ್​ ಅಂತ ಊದಿದ್ರೆ ನೀವೆಲ್ಲಾ ಹಾರಿ ಹೋಗ್ತೀರಿ ಎಂದಿದ್ದರು. ನಮ್ಮ ವಿರುದ್ಧ ಖಡ್ಗ ತೆಗೆಯುತ್ತೇವೆ ಎಂದಿದ್ದರಲ್ಲ. ಬಳ್ಳಾರಿಗೆ ಬಂದಿದ್ದೇನೆ ಎಲ್ಲಪ್ಪಾ ನಿನ್​​​​​​​ ಖಡ್ಗ ಎಂದು ಜಮೀರ್​ ವ್ಯಂಗ್ಯವಾಡಿದರು.

ಇದನ್ನು ಓದಿ: ಸಂಪುಟ ವಿಸ್ತರಣೆ ಕಗ್ಗಂಟು: ಅಮಿತ್ ಶಾ ಭೇಟಿಗೆ ಸಿಎಂ ಬಿಎಸ್​ವೈ ನಾಳೆ ದೆಹಲಿಗೆ?

ಇದು ಶಾಂತಿಭಂಗವಲ್ಲ, ಪ್ರತಿಭಟನೆ ಮಾತ್ರ. ಪೊಲೀಸರು ಎಂದರೆ ಬಹಳ ಗೌರವ ಇದೆ. ಬಳ್ಳಾರಿ ಎಸ್ಪಿ ಜೊತೆ ಮಾತನಾಡುತ್ತಿದ್ದೇನೆ. ಪೊಲೀಸರು ನನ್ನನ್ನ ಅರೆಸ್ಟ್​​ ಮಾಡಲಿ. ಗುಂಡು ಹೊಡೆದು ಸಾಯಿಸಲಿ ಬಿಡಿ. ಯಾರು ಬೇಡ ಅಂತಾರೆ. ಮೊನ್ನೆ ಗೋಲಿಬಾರ್​​​ನಲ್ಲಿ ಇಬ್ಬರನ್ನ ಸಾಯಿಸಿದ್ದಾರೆ. ಈಗ ನನ್ನನ್ನು ಸಾಯಿಸಲಿ ಬಿಡಿ ಎಂದು  ಪೊಲೀಸರ ವರ್ತನೆ ವಿರುದ್ಧ ಜಮೀರ್​ ಹರಿಹಾಯ್ದರು.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ