ಕಪ್ಪು ಬಾವುಟ ಪ್ರದರ್ಶಿಸಿ, ಬಸ್ ಸಂಚಾರ​ ತಡೆಗೆ ಮುಂದಾದ ವಾಟಾಳ್​ ನಾಗರಾಜ್​ ಪೊಲೀಸರ ವಶಕ್ಕೆ

ಪೊಲೀಸರ ಆದೇಶವನ್ನು ಮೀರಿ ಪ್ರತಿಭಟನೆಗೆ ಮುಂದಾದ ವಾಟಾಳ್​ ನಾಗರಾಜ್​ ಮೆಜೆಸ್ಟಿಕ್​ನಲ್ಲಿ  ಕೇಂದ್ರ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು. ಅಲ್ಲದೇ ಬಸ್​ ನಿಲ್ದಾಣದಲ್ಲಿ ಬಸ್​ ಸಂಚಾರಕ್ಕೆ ತಡೆಯೊಡ್ಡಲು ಪ್ರಯತ್ನಿಸಿದರು. ಈ ಹಿನ್ನೆಲೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. 

news18-kannada
Updated:January 8, 2020, 1:26 PM IST
ಕಪ್ಪು ಬಾವುಟ ಪ್ರದರ್ಶಿಸಿ, ಬಸ್ ಸಂಚಾರ​ ತಡೆಗೆ ಮುಂದಾದ ವಾಟಾಳ್​ ನಾಗರಾಜ್​ ಪೊಲೀಸರ ವಶಕ್ಕೆ
ವಾಟಾಳ್​ ನಾಗರಾಜ್​
  • Share this:
ಬೆಂಗಳೂರು (ಜ.8): ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರದ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ, ಬಸ್​ ತಡೆಗೆ ಮುಂದಾದ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗಾರಾಜ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ವಿವಿಧ ಬೇಡಿಕೆಗೆ ಆಗ್ರಹಿಸಿ ದೇಶವ್ಯಾಪಿ ಕರೆ ನೀಡಿರುವ ಬಂದ್​ಗೆ ರಾಜ್ಯದಲ್ಲಿ ಸರ್ಕಾರ ಬೆಂಬಲ ವ್ಯಕ್ತಪಡಿಸಿಲ್ಲ. ಅಲ್ಲದೇ ಬಂದ್​ ಸಂಬಂಧ ಯಾವುದೇ ಜಾಥಾ, ಮೆರವಣಿಗೆಯನ್ನು ನಡೆಸಬಾರದು. ಮುಷ್ಕರ ನಡೆಸಲು ಅನುಮತಿ ಇದೆ. ಆದರೆ,  ಜನ ಜೀವನಕ್ಕೆ ತೊಂದರೆಯುಂಟು ಮಾಡಿದರೆ ಕ್ರಮಕ್ಕೆ ಮುಂದಾಗುವುದಾಗಿ ಪೊಲೀಸ್​ ಕಮಿಷನರ್​ ತಿಳಿಸಿದ್ದರು.

ಪೊಲೀಸರ ಆದೇಶವನ್ನು ಮೀರಿ ಪ್ರತಿಭಟನೆಗೆ ಮುಂದಾದ ವಾಟಾಳ್​ ನಾಗರಾಜ್​ ಮೆಜೆಸ್ಟಿಕ್​ನಲ್ಲಿ  ಕೇಂದ್ರ ಸರ್ಕಾರದ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು. ಅಲ್ಲದೇ ಬಸ್​ ನಿಲ್ದಾಣದಲ್ಲಿ ಬಸ್​ ಸಂಚಾರಕ್ಕೆ ತಡೆಯೊಡ್ಡಲು ಪ್ರಯತ್ನಿಸಿದರು. ಈ ಹಿನ್ನೆಲೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಬಂದ್​ ಹಿನ್ನೆಲೆ ಟೌನ್ ಹಾಲ್ ಬಳಿ ಇರುವ ಕೆನರಾ ಬ್ಯಾಂಕ್ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇನ್ನು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಿಂದ ಚಂದಾಪುರ ವೃತ್ತದವರೆಗೆ ಮೆರವಣಿಗೆ ನೂರಾರು ಕಾರ್ಯಕರ್ತರು ಕೆಂಪು ಬಾವುಟ ಹಿಡಿದು ಪ್ರತಿಭಟನಾ ಜಾಥಾ ನಡೆಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.  ಪೀಣ್ಯ ಟು ಜಾಲಹಳ್ಳಿ ಕ್ರಾಸ್​ವರೆಗೆ ಪ್ರತಿಭಟನಾಕಾರರು ಜಾಥಾ  ನಡೆಸಿದ್ದು, ಜಾಲಹಳ್ಳಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಇದನ್ನು ಓದಿ: ಭಾರತ್​ ಬಂದ್​: ಎಂದಿನಂತೆ ಜನಜೀವನ, ಸಚಿವರಿಲ್ಲದೆ ಬಣಗುಡುತ್ತಿರುವ ವಿಧಾನಸೌಧ; ವಿಶ್ರಾಂತಿಯಲ್ಲಿ ಸಿಎಂ ಬಿಎಸ್​ವೈ

ಇನ್ನುಳಿದಂತೆ ಬಹುತೇಕ ಕಡೆ ಜನಜೀವನ ಸಾಮಾನ್ಯವಾಗಿದ್ದು, ಶಾಲಾ-ಕಾಲೇಜುಗಳು ನಡೆಯುತ್ತಿದ್ದು, ಸಾರಿಗೆ ಸೌಲಭ್ಯಗಳು ಕೂಡ ಎಂದಿನಂತೆ ಇದೆ.
 
First published: January 8, 2020, 1:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading