Police suspend: ಪಾತಕಿಗೆ ಪ್ರೇಯಸಿ ಜೊತೆ ಸರಸಕ್ಕೆ ಅವಕಾಶ, 4 ಪೊಲೀಸರು ಸಸ್ಪೆಂಡ್!

ಪೊಲೀಸರು ಹದ್ದಿನಕಣ್ಣಿಟ್ಟುಕೊಂಡು ಅಪರಾಧಿನ ನ್ಯಾಯಾಲಯಕ್ಕೆ ಹಾಜರುಪಡಿಸ್ತಾರೆ. ಆದರೆ ಇಲ್ಲಿ ಸ್ವತಃ ಪೊಲೀಸರೇ ಅಪರಾಧಿಯೊಬ್ಬನ ಲವ್ವಿಡವ್ವಿಗೆ ಸಾಥ್ ಕೊಟ್ಟಿದ್ದಾರೆ. ಈಗ ಪಾತಕಿಯ ಸರಸಕ್ಕೆ ಸಾಥ್ ಕೊಟ್ಟ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ.

ಪ್ರೇಯಸಿ ಜೊತೆ ಸರಸವಾಡುತ್ತಿರುವಾಗಲೇ ಸಿಕ್ಕಿಬಿದ್ದಿದ್ದ ಪಾತಕಿ!

ಪ್ರೇಯಸಿ ಜೊತೆ ಸರಸವಾಡುತ್ತಿರುವಾಗಲೇ ಸಿಕ್ಕಿಬಿದ್ದಿದ್ದ ಪಾತಕಿ!

  • Share this:
ಯಾವುದೇ ಅಪರಾಧಿಯನ್ನು ನ್ಯಾಯಾಲಯಕ್ಕೆ (Court) ಹಾಜರು ಮಾಡುವಾಗ ಬಿಗಿ ಪೊಲೀಸ್ (Police) ಬಂದೋಬಸ್ತ್ ಇರುತ್ತೆ. ಅದರಲ್ಲೂ ಭೂಗತ ಪಾತಕಿಯಂದ್ರೆ ಕೇಳ್ಬೇಕಾ? ಪೊಲೀಸರು ಹದ್ದಿನಕಣ್ಣಿಟ್ಟುಕೊಂಡು ಅಪರಾಧಿನ ನ್ಯಾಯಾಲಯಕ್ಕೆ ಹಾಜರುಪಡಿಸ್ತಾರೆ. ಆದರೆ ಇಲ್ಲಿ ಸ್ವತಃ ಪೊಲೀಸರೇ ಅಪರಾಧಿಯೊಬ್ಬನ ಲವ್ವಿಡವ್ವಿಗೆ (Love story) ಸಾಥ್ ಕೊಟ್ಟಿದ್ದಾರೆ. ಅಪರಾಧಿಗೆ ತನ್ನ ಪ್ರೇಯಸಿಯೊಂದಿಗೆ (Lover) ಸರಸವಾಡಲು ಅವಕಾಶ ಕೊಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಾಗ್ತಿದ್ದಂತೆ ರೇಡ್ (Raid) ಮಾಡಿದ್ದಾರೆ. ಈ ವೇಳೆ ಪ್ರೇಯಸಿ ಜೊತೆ ಸರಸವಾಡುತ್ತಿರೋವಾಗಲೇ ಪಾತಕಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಅಪರಾಧಿ ಬಚ್ಚಾಖಾನ್ಗೆ ಪ್ರೇಯಸಿ ಜೊತೆ ಸರಸವಾಡಲು ಅನುಮತಿ ಕೊಟ್ಟ ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ಪಾತಕಿ ಬಚ್ಚಾಖಾನ್​ಗೆ  ಬೆಂಬಲಿಸಿದ ಪೊಲೀಸರನ್ನು ಅಮಾನತು (Suspend) ಮಾಡಿ ಆದೇಶ ಹೊರಡಿಸಲಾಗಿದೆ.

ಆರೋಪಿ ಬಚ್ಚಾಖಾನ್​ನನ್ನು ಲಾಡ್ಜ್‌ನಲ್ಲಿ ಪ್ರೇಯಸಿ ಜೊತೆ ಸರಸವಾಡಲು ಬಿಟ್ಟಿದ್ದ ಪೊಲೀಸರು ಇದೀಗ ಸಸ್ಪೆಂಡ್ ಆಗಿದ್ದಾರೆ. ಕೊಲೆ ಪ್ರಕರಣದ ವಿಚಾರಣೆಗೆ ಬಳ್ಳಾರಿ ಪೊಲೀಸರು ಪಾತಕಿ ಬಚ್ಚಾಖಾನ್​ನನ್ನು ಧಾರವಾಡ ನ್ಯಾಯಾಲಯಕ್ಕೆ ಕರೆತಂದಿದ್ದರು.

4 ಪೊಲೀಸ್ ಸಿಬ್ಬಂದಿಯ ಸಸ್ಪೆಂಡ್​ ಮಾಡಿ ಆದೇಶ

ಬಳ್ಳಾರಿಯ ಓರ್ವ ಹೆಡ್ ಕಾನ್​ಸ್ಟೇಬಲ್, ಮೂವರು ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಬಳ್ಳಾರಿ ಎಸ್ ಪಿ ಸೈದುಲು ಅದಾವತ್ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಬಳ್ಳಾರಿಯ ಹೆಡ್ ಕಾನ್ಸ್​ಸ್ಟೇಬಲ್ ಯೋಗೇಶಾಚಾರ್, ಪೇದೆಗಳಾದ ಎಸ್.ಶಶಿಕುಮಾರ್, ರವಿಕುಮಾರ್ ಹಾಗೂ ಸಂಗಮೇಶ ಎಂಬುವವರನ್ನು ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ: ಪ್ರೇಯಸಿಯೊಂದಿಗೆ ಸರಸವಾಡುತ್ತಿರುವಾಗಲೇ ಸಿಕ್ಕಿ ಬಿದ್ದ ಪಾತಕಿ, ಲವ್ವಿಡವ್ವಿಗೆ ಪೊಲೀಸರೇ ಸಾಥ್!

ಪೊಲೀಸರಿಂದಲೇ ಪಾತಕಿಯ ಲವ್ವಿಡವ್ವಿಗೆ ಸಾಥ್

ಪ್ರೇಯಸಿಯೊಂದಿಗೆ ಸರಸಕ್ಕೆ ಪೊಲೀಸರೇ ಅವಕಾಶ ಮಾಡಿಕೊಟ್ಟಿದ್ದರು. ಈ ಮಾಹಿತಿ ಗೊತ್ತಾಗಿ ನಿನ್ನೆ ರೇಡ್ ಮಾಡಲಾಗಿತ್ತು. ಮಾತ್ರವಲ್ಲ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಬಚ್ಚಾಖಾನ್​ಗೆ ಸಹಾಯ ಮಾಡಿದ್ದ ಮೈನೂದ್ದಿನ್ ಪಟೇಲ್, ಮೊಹ್ಮದ್ ಯೂನೂಸ್ ಹಾಗೂ ಫಜಲ್ ಕುಂದಗೋಳ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ಜೈಲು ಬದಲು ಲಾಡ್ಜ್​ಗೆ ಹೋಗಿದ್ದ ಪಾತಕಿ!

ಬಚ್ಚಾ ಖಾನ್​ನನ್ನು ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಐವರು ಪೊಲೀಸರು ಧಾರವಾಡದ ನ್ಯಾಯಾಲಯಕ್ಕೆ ಕರೆ ತಂದಿದ್ದರು. ಆದರೆ ವಿಚಾರಣೆ ಬಳಿಕ ಮರಳಿ ಬಳ್ಳಾರಿಗೆ ಹೋಗದೇ ಪೊಲೀಸರು ಧಾರವಾಡದ ಸತ್ತೂರು ಬಡಾವಣೆಯಲ್ಲಿರೋ ಪ್ರಕೃತಿ ರೆಸಿಡೆನ್ಸಿ ಲಾಡ್ಜ್​ಗೆ ಬಿಟ್ಟಿದ್ದರು.

ಸರಸವಾಡುವಾಗಲೇ ಸಿಕ್ಕಿಬಿದ್ದಿದ್ದ ಪಾತಕಿ

ಅಲ್ಲಿ ಅದಾಗಲೇ ಆತನ ಪ್ರೇಯಸಿ ಬಂದು ಕಾದು ಕುಳಿತಿದ್ದಳು. ಈ ವೇಳೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಲಾಬೂರಾಮ್ ಅವರಿಗೆ ಮಾಹಿತಿಯೊಂದು ಬಂದಿತ್ತು. ಮಾಹಿತಿ ಆಧರಿಸಿ ಆಯುಕ್ತರು ದಾಳಿ ಮಾಡಿದಾಗ ಬಚ್ಚಾಖಾನ್ ಪ್ರೇಯಸಿಯೊಂದಿಗೆ ಸರಸವಾಡುವಾಗಲೇ ಸಿಕ್ಕಿಬಿದ್ದಿದ್ದ.

ಬಚ್ಚಾ ಖಾನ್ ಹೇಳಿಕೇಳಿ ದೊಡ್ಡ ಭೂಗತ ಪಾತಕಿ. ಹಲವಾರು ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾದವನು. ಅಷ್ಟೇ ಅಲ್ಲ ಅನೇಕ ಪ್ರಕರಣಗಳಲ್ಲಿ ಜೈಲು ಶಿಕ್ಷೆಯೂ ಆಗಿದೆ. ಈಗಾಗಲೇ ಒಂದು ಕೇಸಿನಲ್ಲಂತೂ ಈತನಿಗೆ ಜೀವಾವಧಿ ಶಿಕ್ಷೆಯಾಗಿದೆ. ಇನ್ನೂ ಅನೇಕ ಪ್ರಕರಣಗಳ ವಿಚಾರಣೆಯೂ ನಡೆದಿದೆ.

ಇದನ್ನೂ ಓದಿ: ಸಿನಿಮಾ ನೋಡಿ ವಾಪಸ್​ ಆಗ್ತಿದ್ದಾಗ ನವದಂಪತಿಗೆ ಅಪಘಾತ, ಪತ್ನಿ ಸಾವು ಪತಿ ಗಂಭೀರ

ಸುಬ್ಬಾರೆಡ್ಡಿ ಕೊಲೆ ಕೇಸಿನ ಆರೋಪಿ

ಬಚ್ಚಾಖಾನ್ ಹಲವಾರು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ. ಬೆಂಗಳೂರಿನ ಬಿಲ್ಡರ್ ಸುಬ್ಬಾರೆಡ್ಡಿ ಕೊಲೆ ಕೇಸಿನಲ್ಲಿ ಎರಡನೇ ಆರೋಪಿಯಾಗಿದ್ದ ಬಚ್ಚಾಖಾನ್ ಅಪರಾಧಿ ಅಂತಾ ಸಾಬೀತಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಈ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.

ಜೈಲಿನಿಂದಲೇ ಅನೇಕ ಸುಪಾರಿ ತೆಗೆದುಕೊಳ್ಳುವ ಬಚ್ಚಾಖಾನ್ 2020 ಅಗಸ್ಟ್ 6 ರಂದು ಧಾರವಾಡದ ಕುಖ್ಯಾತ ರೌಡಿ ಫ್ರೂಟ್ ಇರ್ಫಾನ್​​ನನ್ನು ಹುಬ್ಬಳ್ಳಿಯಲ್ಲಿ ಹಾಡಹಗಲೇ ಕೊಲ್ಲಿಸಿದ್ದ. ಈ ಪ್ರಕರಣದ ವಿಚಾರಣೆ ನಡೆದಿದೆ.

ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಬಚ್ಚಾಖಾನ್

ಇನ್ನು 2009ರಲ್ಲಿ ಧಾರವಾಡದ ಕೇಂದ್ರ ಕಾರಾಗೃಹದ ಮೇಲೆ ಧಾರವಾಡ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿದಾಗ ಈತನ ಬಳಿ ಗಾಂಜಾ ಪತ್ತೆಯಾಗಿತ್ತು. ಇದೇ ವೇಳೆ ದಾಳಿ ಮಾಡಿದ್ದ ಪೊಲೀಸರ ಮೇಲೆ ಈತ ಹಲ್ಲೆಯನ್ನೂ ಮಾಡಿದ್ದ. ಇದರ ವಿಚಾರಣೆ ಇನ್ನೂ ನಡೆಯುತ್ತಿದೆ.
Published by:Thara Kemmara
First published: