ಮತದಾನ ಜಾಗೃತಿ ಮೂಡಿಸುತ್ತಿರುವ ಪೊಲೀಸ್ ಸಿಬ್ಬಂದಿ ಮಗ : ಮತ ಮಾರಾಟ ಮಾಡದಂತೆ ಕರೆ

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಬಾಲಕ ಪ್ರೀತಂಕುಮಾರ್ ಹಳ್ಳಿ ಹಳ್ಳಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ. ಗ್ರಾಮೀಣ ಭಾಗಗಳಲ್ಲಿ ತೆರಳಿ ಕರಪತ್ರ ನೀಡಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಗ್ರಾಮಸ್ಥರಿಗೆ ತಿಳಿಸುತ್ತಿದ್ದಾನೆ. 

ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಾಲಕ

ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬಾಲಕ

  • Share this:
ಕಾರವಾರ(ಡಿಸೆಂಬರ್​. 25): ಈಗಾಗಲೇ ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಮುಗಿದಿದೆ. ಎರಡನೇ ಹಂತದ ಚುನಾವಣೆಯಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ತೀವ್ರ ಕಸರತ್ತು ನಡೆಸಿದ್ದಾರೆ. ಈ‌ ನಡುವೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಪೊಲೀಸ್ ಸಿಬ್ಬಂದಿ ಮಗನೋರ್ವ ಮತದಾನ ಜಾಗೃತಿ ಕೈಗೊಂಡಿದ್ದಾನೆ. ಪ್ರೀತಂ ಎನ್ನುವ ಬಾಲಕ ಕಳೆದ ಕೆಲ ದಿನಗಳಿಂದ ಹಳ್ಳಿ ಹಳ್ಳಿಗಳಿಗೆ ತಿರುಗಿ ಮತದಾನ ಜಾಗೃತಿ ಮೂಡಿಸುತ್ತಿದ್ದಾನೆ. ಕರಪತ್ರ ನೀಡುತ್ತಾ ಕಡ್ಡಾಯವಾಗಿ ಮತದಾನ ಮಾಡಿ ಎಂದು ಸಂದೇಶ ಸಾರುತ್ತಿದ್ದಾನೆ. ಇಲ್ಲಿನ ಟಿಬೇಟಿಯನ್ ಕ್ಯಾಂಪ್ ನಲ್ಲಿ ಪೊಲೀಸ್ ಇಲಾಖೆಯಲ್ಲಿ ಹವಾಲ್ದಾರ ಆಗಿರುವ ಕಾಶಿನಾಥ್ ಕುಳೆನೂರು ಎಂಬುವವರ ಮಗ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಬಾಲಕ ಪ್ರೀತಂಕುಮಾರ್ ಹಳ್ಳಿ ಹಳ್ಳಿಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ. ಗ್ರಾಮೀಣ ಭಾಗಗಳಲ್ಲಿ ತೆರಳಿ ಕರಪತ್ರ ನೀಡಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಗ್ರಾಮಸ್ಥರಿಗೆ ತಿಳಿಸುತ್ತಿದ್ದಾನೆ. 

ಒಂದು ಕಡೆ ಅಭ್ಯರ್ಥಿಗಳು ತಮಗೆ ಮತ ನೀಡಿ ಎಂದು ಕೇಳುತ್ತಿದ್ದರೇ ಈ ಬಾಲಕ ಮಾತ್ರ ಉತ್ತಮ ಅಭ್ಯರ್ಥಿಗೆ ಮತ ನೀಡಿ ಎಂದು ತಿಳಿಸಿ ಹೇಳುತ್ತಿದ್ದಾನೆ. ಕಳೆದೆರಡು ದಿನಗಳಿಂದ ಈತ ತಮ್ಮಾನಕೊಪ್ಪ, ಕುಸೂರ ಗ್ರಾಮಗಳಲ್ಲಿ ಮನೆಮನೆಗಳಿಗೆ ತೆರಳಿ, ಜನರಿಗೆ ಮತದಾನದ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡುತ್ತಿದ್ದಾನೆ.

ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಬಗ್ಗೆ ಓದಿ ತಿಳಿದುಕೊಂಡಿದ್ದೇನೆ. ಹಳ್ಳಿಗಳು ಉದ್ಧಾರವಾದರೆ ದೇಶ ಉದ್ಧಾರ ಆಗುತ್ತದೆ ಎಂದುಕೊಂಡು, ನಾನು ಕಲಿತಿರುವುದನ್ನು ಜನರಿಗೆ ತಿಳಿಸುತ್ತಿದ್ದಾನೆ. ಬಾಬಾಸಾಹೇಬ್ ಅಂಬೇಡ್ಕರ್ ಹಾಗು ಮಹಾತ್ಮ ಗಾಂಧಿ ಅವರ ಸಂದೇಶದ ಹೊಂದಿರುವ ಕರಪತ್ರವನ್ನ ಕೈಯಲ್ಲಿಯೇ ಬರೆದು ಜನರಿಗೆ ನೀಡುತ್ತಿದ್ದಾನೆ. ಈತನ ಕಾರ್ಯಕ್ಕೆ ಪಾಲಕರು ಪ್ರೋತ್ಸಾಹಿಸುತ್ತಿದ್ದಾರೆ. ಅಲ್ಲದೇ ತಾಲೂಕಿನ ಜನರು ಕೂಡ ಬಾಲಕನ ಈ ಮಾದರಿ ಕಾರ್ಯಕ್ಕೆ  ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : Organic Farming: ಪೊಲೀಸ್ ವಸತಿ ಗೃಹದ‌ ಸುತ್ತಮುತ್ತ ಸಾವಯುವ ಕೃಷಿ : ಬೈಲಹೊಂಗಲ ಎಎಸ್​​ಪಿಯಿಂದ ಮಾದರಿ ಕೆಲಸ

ಈತ ಕನ್ನಡ ಮಾತ್ರವಲ್ಲದೇ ಹಿಂದಿ, ಇಂಗ್ಲಿಷ್ ಭಾಷೆಯಲ್ಲೂ ಕೂಡ ಭಾಷಣ ಮಾಡುತ್ತಿದ್ದಾನೆ. ಚಿಕ್ಕ ವಯಸ್ಸಿನಲ್ಲಿ ಈತನಿಗಿರುವ ಉತ್ಸಾಹ ಕಂಡು ಮುಂಡಗೋಡ ತಹಶೀಲ್ದಾರ್ ಭೇಷ್ ಅಂದಿದ್ದಾರೆ. ಕೋವಿಡ್ 19 ನಡುವೆ  ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿರುವುದರಿಂದ ಜನತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸಿಯೇ ಮತದಾನ ಮಾಡಬೇಕು. ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಿದರೇ ಗ್ರಾಮದ ಉದ್ದಾರ ಕೂಡ ಆಗುತ್ತೆ ಎಂದು ಹೇಳುತ್ತಿದ್ದಾನೆ.

ಒಂದು ಕಡೆ ಚುನಾವಣೆಗೆ ನಿಂತ ಅಭ್ಯರ್ಥಿಗಳು ಮತ ಬೇಟೆಯಲ್ಲಿ ತೊಡಗಿದ್ದರೇ, ಈ ಬಾಲಕ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಜನತೆಗೆ ಮನವರಿಕೆ ಮಾಡುತ್ತಿರುವುದು ಮಾದರಿಯಾಗಿದೆ. ಒಟ್ಟಾರೆ ಹೀಗೆ ಈ ಬಾಲಕ ಮತದಾನ ಜಾಗೃತಿಯತ್ತ ಗಮನ‌ಹರಿಸುತ್ತಿದ್ದು, ಹೋದ ಕಡೆ ಪ್ರಾಮಾಣಿಕ ಮತದಾನದ ಬಗ್ಗೆ ಪ್ರಮಾಣವಚನ ಪಡೆಯುತ್ತಿದ್ದಾನೆ.
Published by:G Hareeshkumar
First published: