HOME » NEWS » State » POLICE SHOULD SHOOT HIM DEAD WHEN THEY CATCH HIM GANGSTER MOTHER ASK TO POLICE RMD

ನನ್ನ ಮಗನನ್ನು ಗುಂಡಿಕ್ಕಿ ಕೊಂದುಬಿಡಿ; ಪೊಲೀಸರ ಬಳಿ ಗ್ಯಾಂಗ್​ಸ್ಟರ್ ತಾಯಿ ಮನವಿ

ಉತ್ತರ ಪ್ರದೇಶದಲ್ಲಿ 8 ಪೊಲೀಸರನ್ನು ಹತ್ಯೆ ಮಾಡಿದ ನಂತರ ವಿಕಾಸ್ ಡೂಬೆಯನ್ನು ಕೊಲ್ಲಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಇದಕ್ಕೆ ವಿಕಾಸ್ ತಾಯಿ ಸರಳಾ ದೇವಿ ಕೂಡ ಧ್ವನಿಗೂಡಿಸಿದ್ದಾರೆ.

news18-kannada
Updated:July 4, 2020, 9:08 AM IST
ನನ್ನ ಮಗನನ್ನು ಗುಂಡಿಕ್ಕಿ ಕೊಂದುಬಿಡಿ; ಪೊಲೀಸರ ಬಳಿ ಗ್ಯಾಂಗ್​ಸ್ಟರ್ ತಾಯಿ ಮನವಿ
ವಿಕಾಸ್​ ಡೂಬೆ
  • Share this:
ಕಾನ್ಪುರ (ಜು.4): 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಿದ್ದ ಗ್ಯಾಂಗ್​ಸ್ಟರ್ ವಿಕಾಸ್ ಡೂಬೆಯನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಂಧಿಸಲು ಹೋದಾಗ 8 ಜನ ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ವಿಕಾಸ್ ತಾಯಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗನನ್ನು ಗುಂಡಿಕ್ಕಿ ಕೊಂದು ಬಿಡಿ ಎಂದಿದ್ದಾರೆ.

ಕಾನ್ಪುರದ ಬಿಕ್ರಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಗ್ಯಾಂಗ್​ಸ್ಟರ್ ವಿಕಾಸ್ ಡೂಬೆಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಪೊಲೀಸರು ವಿಕಾಸ್ ಅಡಗಿ ಕೂತಿದ್ದ ಮನೆ ತಲುಪುತ್ತಿದ್ದಂತೆ ಟೆರೇಸ್ ಮೇಲಿನಿಂದ 8-10 ಜನರು ಗುಂಡಿನ ದಾಳಿ ನಡೆಸಿದ್ದರು. ಶಿವರಾಜ್ಪುರ ಪೊಲೀಸ್ ಠಾಣಾಧಿಕಾರಿ ಮಹೇಶ್ ಯಾದವ್, ಸಬ್ ಇನ್ಸ್ಪೆಕ್ಟರ್, ಐದು ಕಾನ್ಸ್ಟೇಬಲ್ ಹಾಗೂ ಮತ್ತೋರ್ವ ಸ್ಥಳದಲ್ಲೇ ಮೃತಪಟ್ಟಿದ್ದರು.

ಈ ಘಟನೆ ನಂತರ ವಿಕಾಸ್ ಡೂಬೆಯನ್ನು ಹತ್ಯೆ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿತ್ತು. ಇದಕ್ಕೆ ವಿಕಾಸ್ ತಾಯಿ ಸರಳಾ ದೇವಿ ಕೂಡ ಧ್ವನಿಗೂಡಿಸಿದ್ದಾರೆ. “ನನ್ನ ಮಗ ಪೊಲೀಸರಿಗೆ ಶರಣಾಗಬೇಕು. ಇಲ್ಲದಿದ್ದರೆ ಆತನನ್ನು ಗುಂಡಿಕ್ಕಿ ಕೊಂದು ಬಿಡಲಿ. ಆತ ಮಾಡಿದ್ದು ತುಂಬಾನೇ ದೊಡ್ಡ ತಪ್ಪು. ಒಂದೊಮ್ಮೆ ಆತ ಶರಣಾದರೂ ಆತನಿಗೆ ಕೋರ್ಟ್ ಮೆಟ್ಟಿಲು ಹತ್ತಲು ಅವಕಾಶವನ್ನೇ ನೀಡಬಾರದು. ಅದಕ್ಕೂ ಮೊದಲೇ ಕೊಲ್ಲಬೇಕು,” ಎಂದಿದ್ದಾರೆ.

ವಿಕಾಸ್ ವಿರುದ್ಧ ಸುಮಾರು 60ಕ್ಕೂ ಹೆಚ್ಚು ಪ್ರಕರಣಗಳಿವೆ. ಉತ್ತರ ಪ್ರದೇಶದಲ್ಲಿ ರಾಜನಾಥ್ ಸಿಂಗ್ ಸರ್ಕಾರವಿದ್ದಾಗ ಮಂತ್ರಿ ಆಗಿದ್ದ ಸಂತೋಷ್ ಶುಕ್ಲಾ ಸೇರಿ ಸಾಕಷ್ಟು ಜನರನ್ನು ಹತ್ಯೆ ಮಾಡಿದ ಕೇಸ್ನಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ.
Published by: Rajesh Duggumane
First published: July 4, 2020, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading