'ನಗರ ನಕ್ಸಲೈಟ್ಸ್' ಗಿರೀಶ್​ ಕಾರ್ನಾಡ್​, ಪ್ರಕಾಶ್​ ರೈ ಮೇಲೆ ಸರ್ಕಾರವೇ ಕೇಸು ದಾಖಲಿಸಲಿ: ಮುತಾಲಿಕ್​ ಆಗ್ರಹ

news18
Updated:September 6, 2018, 6:39 PM IST
'ನಗರ ನಕ್ಸಲೈಟ್ಸ್' ಗಿರೀಶ್​ ಕಾರ್ನಾಡ್​, ಪ್ರಕಾಶ್​ ರೈ ಮೇಲೆ ಸರ್ಕಾರವೇ ಕೇಸು ದಾಖಲಿಸಲಿ: ಮುತಾಲಿಕ್​ ಆಗ್ರಹ
news18
Updated: September 6, 2018, 6:39 PM IST
- ನ್ಯೂಸ್​ 18 ಕನ್ನಡ

ಚಿಕ್ಕಮಗಳೂರು,(ಸೆ.06):  'ನಾನು ನಗರ ನಕ್ಸಲೈಟ್​' ಎಂದು ಬೋರ್ಡ್​ ಹಾಕಿಕೊಂಡು  ಸಂವಿಧಾನ ಬಾಹಿರ ಕೆಲಸ ಮಾಡಿದ ಗಿರೀಶ್​ ಕಾರ್ನಾಡ್​, ಪ್ರಕಾಶ್​ ರೈ ಹಾಗೂ ರಹಮತ್​ ತರೀಕೆರೆ ವಿರುದ್ಧ ಸರ್ಕಾರವೇ ಸ್ವಯಂ ಪ್ರೇರಿತ ದೂರು  ದಾಖಲಿಸಿ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಆಗ್ರಹಿಸಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್​ ಹತ್ಯೆಯಾಗಿ ಒಂದು ವರ್ಷವಾದ ಹಿನ್ನೆಲೆ ಬುಧವಾರ ಬೆಂಗಳೂರಿನಲ್ಲಿ  ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಗಿರೀಶ್​ ಕಾರ್ನಾಡ್​, ರಹಮತ್ ತರೀಕೆರೆ, ಪ್ರಕಾಶ್​ ರೈ ಮೊದಲಾದವರು 'ನಾನು ನಗರ ನಕ್ಸಲೈಟ್​' ಎಂಬ ಬೋರ್ಡ್​ ಹಾಕಿಕೊಂಡಿದ್ದರು.

ಈ ಘಟನೆ ಸಂಬಂಧ ಇಂದು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಪ್ರಮೋದ್​ ಮುತಾಲಿಕ್​, ನಕ್ಸಲ್​ ಎನ್ನುವುದು ನಿಷೇಧಿತ ಸಂಸ್ಥೆ. ಈ  ನಿಷೇಧಿತ ಸಂಸ್ಥೆ ಬಗ್ಗೆ ಮಾತನಾಡುವುದೇ ಅಪರಾಧ. ನಕ್ಸಲರನ್ನು ನಿಗ್ರಹಿಸುವುದಕ್ಕಾಗಿಯೇ ಚಿಕ್ಕಮಗಳೂರಿನಲ್ಲಿ ಒಂದು ವಿಶೇಷ ಪಡೆಯನ್ನು ನೇಮಿಸಲಾಗಿದೆ. ಹೀಗಿರುವಾಗ 'ನಾನು ನಗರದ ನಕ್ಸಲೈಟ್​' ಎಂದು ಬೋರ್ಡ್​ ಹಾಕಿಕೊಳ್ಳುವುದು ಅಪರಾಧ ಎಂದು ಹೇಳಿದರು.

ಇವರ ಈ ವರ್ತನೆ ಕಾಡಿನಲ್ಲಿರುವ ನಕ್ಸಲರಿಗೆ ಸಹಕಾರ ಮಾಡುತ್ತಿದ್ದಾರೆ. ಅವರಿಗೆ ಬೇಕಾದ ಆಹಾರ ಸಾಮಾಗ್ರಿಗಳು, ಶಸ್ತ್ರಾಸ್ತ್ರಗಳು ಹಾಗೂ ಇತರೆ ಸಾಮಾಗ್ರಿಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿಸುತ್ತದೆ. ಹೀಗಾಗಿ ಇವರ ವಿರುದ್ಧ ಸರ್ಕಾರವೇ ಸ್ವಯಂ ಪ್ರೇರಿತ ಕೇಸ್​ ದಾಖಲಿಸಬೇಕೆಂದು ಆಗ್ರಹ ಮಾಡಿದರು.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ