Clarence School: ಬೈಬಲ್ ಹೇರಿಕೆಯ ಆರೋಪ; ಶಾಲೆಗೆ ಸ್ಥಳೀಯ ಪೊಲೀಸರಿಂದ ಭದ್ರತೆ
ಶಾಲೆಯ ಪಠ್ಯದಲ್ಲಿ ಬೈಬಲ್ ಕೂಡ ಒಂದು ಭಾಗ ಆಗಿರುತ್ತೆ ಅಂತ ಹೇಳಲಾಗಿರುತ್ತದೆ. ಯಾರೋ ಬೇಕು ಅಂತಲೇ ಈ ರೀತಿ ವಿವಾದ ಮಾಡ್ತಿದ್ದಾರೆ. ಇಲ್ಲಿಯ ಯಾವ ಹಿಂದೂ ಮಕ್ಕಳು ವಿರೋಧ ಮಾಡ್ತಿಲ್ಲ . ಈಗ ನಡೆಯುತ್ತಿರುವ ಬೆಂಕಿಗೆ ಕೆಲವರು ತುಪ್ಪ ಸುರಿಯುತ್ತಿದ್ದಾರೆ ಅಷ್ಟೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು (Bengaluru) ನಗರದ ಕ್ಲಾರೆನ್ಸ್ ಹೈಸ್ಕೂಲ್ (Clarence School) ಮಕ್ಕಳಿಗೆ ಬ್ಯಾಗ್ ನಲ್ಲಿ ಬೈಬಲ್ (Bible) ಕಡ್ಡಾಯ ಮಾಡಿರುವ ಆರೋಪಗಳು ಕೇಳಿ ಬಂದಿದೆ. ಶುಕ್ರವಾರ ಸಂಜೆ ಈ ಸಂಬಂಧ ಕೆಲ ಹಿಂದೂ ಸಂಘಟನೆಗಳು (Hindu Organization) ಆರೋಪ ಮಾಡಿದ್ದವು. ಶನಿವಾರ ಮತ್ತು ಭಾನುವಾರ ಶಾಲೆಗೆ ರಜೆ ಇತ್ತು. ಇಂದು ಹಿಂದೂ ಸಂಘಟನೆಗಳು ಶಾಲೆ ಮುಂಭಾಗ ಪ್ರತಿಭಟನೆ (Protest) ನಡೆಸುವ ಅನುಮಾನಗಳು ವ್ಯಕ್ತವಾದ ಹಿನ್ನೆಲೆ ಪುಲಕೇಶಿನಗರ ಠಾಣೆಯ ಪೊಲೀಸರಿಂದ (Pulakeshi nagara Police Station) ಕ್ಲಾರೆನ್ಸ್ ಹೈಸ್ಕೂಲ್ ಗೆ ಭದ್ರತೆ ನೀಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಯ ಮುಂಭಾಗವೇ ಪೊಲೀಸರ ಹೊಯ್ಸಳ ವಾಹನ ನಿಂತಿದೆ. ಇತ್ತ ಈ ಕುರಿತು ಪ್ರತಿಕ್ರಿಯೆ ನೀಡಲು ಶಾಲಾ ಆಡಳಿತ ಮಂಡಳಿ ನಿರಾಕರಿಸಿದೆ. ಕ್ಲಾರೆನ್ಸ್ ಹೈಸ್ಕೂಲ್ ನ ಪ್ರಿನ್ಸಿಪಾಲ್ ಜರೀ ಜಾರ್ಜ್ ಮ್ಯಾಥ್ಯೂ ಬೈಬಲ್ ಹೇರಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.
ಶಾಲೆಯ ಪರವಾಗಿ ಪೋಷಕರು ಬ್ಯಾಟ್
ಇಂದು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಡಲು ಬಂದ ಕೆಲ ಕ್ರಿಶ್ಚಿಯನ್ ಪೋಷಕರು ಬೈಬಲ್ ಬ್ಯಾಗ್ ನಲ್ಲಿ ತರುವ ಕುರಿತ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. 8 ರಿಂದ 10ನೇ ತರಗತಿಯ ಮಕ್ಕಳು ಇಲ್ಲಿ ವ್ಯಾಸಾಂಗ ಮಾಡ್ತಿದ್ದಾರೆ. 600ಕ್ಕೂ ಹೆಚ್ಚು ಮಕ್ಕಳ ಈ ಶಾಲೆಯಲ್ಲಿ ಓದುತ್ತಿದ್ದಾರೆ. ಒತ್ತಡ ಏನೂ ಹಾಕ್ತಿಲ್ಲ, ಈ ಬಗ್ಗೆ ಮೊದಲೇ ಹೇಳಿರ್ತಾರೆ ಎಂದು ಕೆಲ ಪೋಷಕರು ಶಾಲೆಯ ಪರ ಬ್ಯಾಟಿಂಗ್ ಬೀಸಿದ್ದಾರೆ.
ಬೆಂಕಿಗೆ ತುಪ್ಪ ಸುರೀತಿದ್ದಾರೆ ಅಷ್ಟೇ
ಶಾಲೆಯ ಪಠ್ಯದಲ್ಲಿ ಬೈಬಲ್ ಕೂಡ ಒಂದು ಭಾಗ ಆಗಿರುತ್ತೆ ಅಂತ ಹೇಳಲಾಗಿರುತ್ತದೆ. ಯಾರೋ ಬೇಕು ಅಂತಲೇ ಈ ರೀತಿ ವಿವಾದ ಮಾಡ್ತಿದ್ದಾರೆ. ಇಲ್ಲಿಯ ಯಾವ ಹಿಂದೂ ಮಕ್ಕಳು ವಿರೋಧ ಮಾಡ್ತಿಲ್ಲ . ಈಗ ನಡೆಯುತ್ತಿರುವ ಬೆಂಕಿಗೆ ಕೆಲವರು ತುಪ್ಪ ಸುರಿಯುತ್ತಿದ್ದಾರೆ ಅಷ್ಟೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು ನಗರದಲ್ಲಿ ಕ್ಲಾರೆನ್ಸ್ ಹೈಸ್ಕೂಲ್ ನಲ್ಲಿ ಹಿಂದೂ ಮಕ್ಕಳಿಗೆ ಬಲವಂತವಾಗಿ ಬೈಬಲ್ ಓದಿಸಲಾಗುತ್ತಿದೆ. ಈ ಬಗ್ಗೆ ಶಾಲೆಯ ಬ್ರೌಶರ್ ನಲ್ಲಿಯೂ ಮಾಹಿತಿ ನೀಡಲಾಗಿದೆ. ಬಹುತೇಕ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಈ ನಿಯಮಗಳನ್ನು ಅನುಸರಿಸುತ್ತಿವೆ. ಆದ್ದರಿಂದ ಸರ್ಕಾರ ಈ ಸಂಬಂಧ ಕ್ರಮಕೈಗೊಳ್ಳಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ಇದೀಗ ದೂರು ಬಂದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಾಲೆಯಲ್ಲಿ ಯಾವುದೇ ಧರ್ಮದ ಬಗ್ಗೆ ಬೋಧನೆ ಮಾಡುವಂತಿಲ್ಲ. ಪಠ್ಯದ ಒಂದು ಭಾಗವಾಗಿ ಭೋದನೆ ಮಾಡಬಹುದು. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.
ಮುಂದಿನ ವರ್ಷದಿಂದ ನೈತಿಕ ಶಿಕ್ಷಣ
ನೈತಿಕ ಶಿಕ್ಷಣವನ್ನು ಮುಂದಿನ ವರ್ಷ ಪಠ್ಯಕ್ಕೆ ಸೇರಿಸುತ್ತೇವೆ. ನೈತಿಕ ಶಿಕ್ಷಣದಲ್ಲಿ ಪಂಚತಂತ್ರ, ರಾಮಾಯಣ, ಮಹಾಭಾರತ, ಭಗವದ್ಗೀತೆ ಎಲ್ಲವೂ ಒಂದು ಭಾಗವಾಗಬಹುದು. ಈ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ತರುತ್ತೇವೆ. ಯಾವುದೇ ಧರ್ಮಕ್ಕೆ ಸೀಮಿತ ಮಾಡಲ್ಲಯಾವ ಧರ್ಮದಲ್ಲಿ ಒಳ್ಳೆಯದಿದೆ ಎಲ್ಲವನ್ನು ತಿಳಿಸ್ತೇವೆ. ಹೆಚ್ಚು ಯಾವ ಮಕ್ಕಳು ಬರ್ತಾರೆ. ಅದನ್ನೇ ಹೆಚ್ಚಿನ ಪ್ರಮಾಣದಲ್ಲಿ ಇರಿಸುತ್ತೇವೆ ಎಂದು ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಟಿಪ್ಪು ಬಗ್ಗೆ ಶಾಸಕರಾದ ಅಪ್ಪಚ್ಚು ರಂಜನ್ ಅವರ ಡಿಮ್ಯಾಂಡ್ ಇದೆ. ಟಿಪ್ಪು ಪಾಠವನ್ನ ಕೈಬಿಡಿ ಎಂದು ಹೇಳಿದ್ದಾರೆ. ಕೈಬಿಡದೇ ಹೋದರೆ ಅವರ ಎಲ್ಲ ಮುಖ ತೋರಿಸಿ ಎಂದು ಹೇಳಿದ್ದಾರೆ. ಕೂರ್ಗ್ ದೌರ್ಜನ್ಯದ ಬಗ್ಗೆ ತಿಳಿಸಿ ಎಂದಿದ್ದಾರೆ. ಕನ್ನಡ ವಿರೋಧಿತನವನ್ನ ತೋರಿಸಿ ಎಂದಿದ್ದಾರೆನಾವು ಪಠ್ಯದಲ್ಲಿ ಕೆಲವು ಅಂಶಗಳನ್ನ ತೆಗೆದಿದ್ದೇವೆ. ಆದರೆ ಟಿಪ್ಪು ಪಾಠವನ್ನ ನಾವು ತೆಗೆದಿಲ್ಲ ಎಂದು ಸ್ಪಷ್ಟಪಡಿಸಿದರು.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ