• Home
  • »
  • News
  • »
  • state
  • »
  • Bengaluru: ಹಣಕ್ಕಾಗಿ ಸಿಕ್ಕ ಸಿಕ್ಕವರ ಕಿಡ್ನಾಪ್ ಅಂಡ್ ರಾಬರಿ; ಹಾವಳಿ ಕೃಷ್ಣ ಅಂಡ್ ಟೀಂಗಾಗಿ ಪೊಲೀಸರ ಶೋಧ

Bengaluru: ಹಣಕ್ಕಾಗಿ ಸಿಕ್ಕ ಸಿಕ್ಕವರ ಕಿಡ್ನಾಪ್ ಅಂಡ್ ರಾಬರಿ; ಹಾವಳಿ ಕೃಷ್ಣ ಅಂಡ್ ಟೀಂಗಾಗಿ ಪೊಲೀಸರ ಶೋಧ

ಕಳ್ಳ ಕೃಷ್ಣ ಅಲಿಯಾಸ್ ಹಾವಳಿ ಕೃಷ್ಣ

ಕಳ್ಳ ಕೃಷ್ಣ ಅಲಿಯಾಸ್ ಹಾವಳಿ ಕೃಷ್ಣ

ಹಣಕ್ಕಾಗಿ ಸಿಕ್ಕ ಸಿಕ್ಕವರ ಕಿಡ್ನಾಪ್ ಅಂಡ್ ರಾಬರಿ. ಕಳ್ಳ ಕೃಷ್ಣ ಅಲಿಯಾಸ್ ಹಾವಳಿ ಕೃಷ್ಣ ಅಂಡ್ ಟೀಮ್ ಗಾಗಿ ಪೊಲೀಸರ ಶೋಧ. ಸರಣಿ ಡಕಾಯಿತಿ ನಡೆಸುತ್ತಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಕಳ್ಳಕೃಷ್ಣ ಅಂಡ್ ಗ್ಯಾಂಗ್

  • News18 Kannada
  • Last Updated :
  • Bangalore, India
  • Share this:

ಕಳ್ಳ ಕೃಷ್ಣ ಅಲಿಯಾಸ್ ಹಾವಳಿ ಕೃಷ್ಣನ ಕಿಡ್ನಾಪ್ ಕಹಾನಿಗಳು (Kidnap Cases) ರಣರೋಚಕವಾಗಿವೆ. ವೃತ್ತಿಯಲ್ಲಿ ಆಟೋ ಚಾಲಕನಾದ (Auto Driver) ಕಳ್ಳ ಕೃಷ್ಣ ಮಾಡೋದು ಮಾತ್ರ ಕಿಡ್ನಾಪ್ ಅಂಡ್ ರಾಬರಿ (Robbery). ಎರಡು ವರ್ಷಗಳ ಹಿಂದೆ ಪೊಲೀಸರ ಗುಂಡೇಟು ತಿಂದು ಒಂದು ಕಾಲು ಕಳೆದುಕೊಂಡಿದ್ದರೂ ಕೃಷ್ಣನ ಹಾವಳಿ ಇಂದಿಗೂ ನಿಂತಿಲ್ಲ. ಸಿಂಗಲ್ ಲೆಗ್ ಇದ್ರೂ ಗಾಂಜಾ ಹುಡುಗರ ಪಟಾಲಂ ಕಟ್ಟಿಕೊಂಡು ಬೆಂಗಳೂರು ಹೊರವಲಯದಲ್ಲಿ ಕಳ್ಳ ಕೃಷ್ಣ ಹಾವಳಿ ಶುರುವಿಟ್ಟುಕೊಂಡಿದ್ದು, ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದಾನೆ.


ಇದೇ ತಿಂಗಳು 14ನೇ ತಾರೀಖು ಕ್ಯಾಂಟರ್ ಚಾಲಕ ಚೇತನ್ ಎಂಬಾತನನ್ನು ಕಿಡ್ನಾಪ್ ಮಾಡಿದ್ದ ಕಳ್ಳ ಕೃಷ್ಣ ಅಂಡ್ ಗ್ಯಾಂಗ್ 10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿತ್ತು. ಆದ್ರೆ ಅದೃಷ್ಟವಷಾತ್ ಕ್ಯಾಂಟರ್ ಚಾಲಕ ಅಸಾಮಿಗಳಿಂದ ಬಚಾವ್ ಆಗಿದ್ದಾರೆ.


ಕ್ಯಾಂಟರ್ ಚಾಲಕನ ಅಪಹರಣ


ಅಂದು ರಾತ್ರಿ ಸುಮಾರು 11 ಗಂಟೆಗೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ಗ್ರಾಮದ ಬೈಬಲ್ ಶಾಲೆಯ ಬಳಿ ಆಟೋದಲ್ಲಿ ಬಂದ ಕಳ್ಳ ಕೃಷ್ಣ ಮತ್ತು ಅಜಯ್ ಅಂಡ್ ಟೀಮ್ ಕ್ಯಾಂಟರ್ ಚಾಲಕ ಚೇತನ್ ಎಂಬವರನ್ನು ಅಪಹರಣ ಮಾಡಿದ್ದಾರೆ.


ಬನ್ನೇರುಘಟ್ಟ ಸಮೀಪದ ಪೆಪ್ಸಿಕೋ ಕಂಪನಿಯಲ್ಲಿ ಚಾಲಕನಾಗಿದ್ದ ಚೇತನ್ ಕಂಪನಿಯಿಂದ ಮೈಸೂರಿಗೆ ಲೋಡ್ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸಕಲವಾರ ಬಳಿ ಹೊಂಚು ಹಾಕಿ ಕುಳಿತ್ತಿದ್ದ ಕೃಷ್ಣನ ಗ್ಯಾಂಗ್ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಆಟೋ ಮೂಲಕ ಡಿಕ್ಕಿ ಹೊಡೆಸಿ ಕಿರಿಕ್ ಮಾಡಿದೆ. ರಸ್ತೆಯಲ್ಲಿಯೇ ಕ್ಯಾಂಟರ್ ಚಾಲಕ ಚೇತನ್ ಮೇಲೆ ಹಲ್ಲೆ ನಡೆಸಿದೆ. ನೆರವಿಗೆ ಬಂದ ಕ್ಯಾಂಟರ್ ಚಾಲಕ ವರುಣ್ ಮೇಲೆಯೂ ಹಲ್ಲೆಗೆ ಯತ್ನಿಸಲಾಗಿದೆ.


ಕೈಕಾಲು ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ


ಭಯಗೊಂಡ ವರುಣ್ ತಪ್ಪಿಸಿಕೊಂಡಿದ್ದು, ಕ್ಯಾಂಟರ್ ಚಾಲಕ ಚೇತನ್ ಅವರನ್ನು ಅಪಹರಣ ಮಾಡಿದ್ದಾರೆ. ನಂತರ ಬ್ಯಾಟರಾಯನದೊಡ್ಡಿ ಟಿಕೆ ಫಾಲ್ಸ್ ಬಳಿ ಕರೆದೊಯ್ದ ನಿರ್ಜನ ಪ್ರದೇಶದಲ್ಲಿ ಕೈಕಾಲು ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.


ಕ್ಯಾಂಟರ್ ಮಾಲೀಕನಿಗೆ ಪೋನ್ ಮಾಡಿ 10 ಲಕ್ಷ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಕೊನೆಗೆ ಎರಡು ಲಕ್ಷ ತಂದುಕೊಟ್ರೆ ಬಿಡುತ್ತೇವೆಂದು ಹೇಳಿದ್ದ ಕಿಡ್ನಾಪರ್ಸ್ ಅದೇ ಜಾಗದಲ್ಲಿ ಗಾಂಜಾ ಹಾಗೂ ಎಣ್ಣೆ ಪಾರ್ಟಿ ಮಾಡಿದ್ದಾರೆ.


ಒಂದು ದಿನ ನಿರ್ಜನ ಪ್ರದೇಶದಲ್ಲಿ ಬಂಧನದಲ್ಲಿಟ್ಟು ಹಲ್ಲೆ ನಡೆಸಿದ ಕಿರಾತಕರು ಮೊಬೈಲ್ ರಾಬರಿ ಮಾಡಲು ಹೋದಾಗ ಚೇತನ್ ತಪ್ಪಿಸಿಕೊಂಡು ಬಂದಿದ್ದಾನೆ.


ಲಗೇಜ್ ಟೆಂಪೋ ಚಾಲಕನಿಂದ ಹಣ ಹಾಕಿಸಿಕೊಂಡ್ರು


ಇನ್ನೂ ಕಿಡ್ನಾಪ್ ಮಾಡಿದ್ದ ರಾಬರಿ ಗ್ಯಾಂಗ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರೆ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿ ಬಳಿ ಮತ್ತೆ 16ನೇ ತಾರೀಖಿನಂದು ಲಗೇಜ್ ಟೆಂಪೋ ಚಾಲಕ ಅಲ್ಲಾಭಕ್ಷ್ ಎಂಬವರನ್ನು ಅಡ್ಡಗಟ್ಟಿ ರಾಬರಿ ಮಾಡಿದ್ದಾರೆ.
ಮೊಬೈಲ್ ಪೋನ್ ನಲ್ಲಿದ್ದ 35 ಸಾವಿರ ಹಣ ಹಾಕಿಸಿಕೊಂಡ ಗ್ಯಾಂಗ್ ವಿಷಯ ಪೋಲೀಸರಿಗೆ ತಿಳಿಸಿದ್ರೆ ಕೊಲೆ ಮಾಡೋದಾಗಿ ಹೇಳಿ ಎಸ್ಕೇಪ್ ಆಗಿದೆ. ಸಿಕ್ಕ ಸಿಕ್ಕ ಕಡೆ ಹಲ್ಲೆ ನಡೆಸಿ ರಾಬರಿ ಮಾಡುತ್ತಿರುವ ಕಳ್ಳ ಕೃಷ್ಣನ ಗ್ಯಾಂಗ್ ಬನ್ನೇರುಘಟ್ಟ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪದೇ ಪದೇ ಅಮಾಯಕರನ್ನು ರಾಬರಿ ಕಿಡ್ನಾಪ್ ಮಾಡುತ್ತಿದೆ.


ಇದನ್ನೂ ಓದಿ: Crime News: ಮನೆಯಲ್ಲಿ ಹೋಮ ಮಾಡ್ತಿರುವಾಗಲೇ ಕೈಚಳಕ ತೋರಿದ ಕಳ್ಳ; ಚಾಲಕಿ ಕಳ್ಳನ ಕೃತ್ಯ ಮೊಬೈಲ್​​ನಲ್ಲಿ ಸೆರೆ


ಹಾರೋಹಳ್ಳಿ ವ್ಯಾಪ್ತಿಯಲ್ಲೂ ಕೃಷ್ಣನ ಹಾವಳಿ


ಇದರ ನಡುವೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17ನೇ ತಾರೀಖು ಟ್ರಾಕ್ಟರ್ ಚಾಲಕನನ್ನು ಥಳಿಸಿ ಐವತ್ತು ಸಾವಿರ ಹಣ ಮತ್ತು ಮೂರು ಮೊಬೈಲ್ ಹಾಗೂ ಬೈಕ್ ಕಸಿದು ಪರಾರಿಯಾಗಿರುವ ಕಳ್ಳ ಕೃಷ್ಣ ಅಂಡ್ ಗ್ಯಾಂಗ್ ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಆಟೋ ಚಾಲಕನನ್ನು ಕಿಡ್ನಾಪ್ ಮಾಡಿ ಲಕ್ಷ ಲಕ್ಷ ಹಣ ಪೀಕಿದೆ ಎನ್ನಲಾಗಿದೆ.


ಬನ್ನೇರುಘಟ್ಟ ಸುತ್ತಮುತ್ತಲಿನ ಕಡೆಗಳಲ್ಲಿ ಪದೇ ಪದೇ ರಾಬರಿ, ಕಿಡ್ನಾಪ್ನಂತಹ ಕೃತ್ಯ ಮಾಡುತ್ತಿದ್ರೂ ಪೊಲೀಸರ ಕೈಗೆ ಸಿಗದೇ ನಟೋರಿಯಸ್ ಕಳ್ಳ ಕೃಷ್ಣ ಅಲಿಯಾಸ್ ಹಾವಳಿ ಕೃಷ್ಣ ತನ್ನ ಚಾಳಿ ಮುಂದುವರಿಸಿದ್ದಾನೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು