Power Star Puneeth Rajkumar; ಕಂಠೀರವ ಸ್ಟುಡಿಯೋ ಬಳಿ ಅಭಿಮಾನಿಗಳ ನೂಕು ನುಗ್ಗಲು; ಪೊಲೀಸರಿಂದ ಲಾಠಿ ಚಾರ್ಜ್

ನೆಚ್ಚಿನ ನಟ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಆಗಮಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಸ್ಟೇಡಿಯಂನತ್ತ ಅಭಿಮಾನಿಗಳು (Appu Fans) ಹರಿದು ಬರುತ್ತಿದ್ದಾರೆ.  

Police

Police

  • Share this:
ಬೆಂಗಳೂರು: ತಮ್ಮ ನೆಚ್ಚಿನ ನಟ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಬಳಿ ಆಗಮಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಸ್ಟೇಡಿಯಂನತ್ತ ಅಭಿಮಾನಿಗಳು (Appu Fans) ಹರಿದು ಬರುತ್ತಿದ್ದಾರೆ.  ಪರಿಸ್ಥಿತಿ ನಿಯಂತ್ರಣಗೊಳಿಸಲು ಸ್ಥಳದಲ್ಲಿ ಲಘು ಲಾಠಿ ಪ್ರಹಾರ ಸಹ ನಡೆಸಲಾಯ್ತು. ಸಂಜೆ ವೇಳೆಗೆ ಪುನೀತ್ ರಾಜ್ ಕುಮಾರ್ ಶವ ಆಗಮಿಸುತ್ತಿದ್ದಂತೆ ಸ್ಟುಡಿಯೋನತ್ತ  ಆಗಮಿಸುತ್ತಿರುವ ಜನರು ಬ್ಯಾರಿಕೇಡ್ ತಳ್ಳಿ ಒಳ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಬ್ಯಾರಿಕೇಡ್ ಹಿಡಿದು ಪೊಲೀಸರು (Police) ನಿಂತು ಅಭಿಮಾನಿಗಳನ್ನು ನಿಯಂತ್ರಿಸುತ್ತಿದ್ದಾರೆ.

ಪೊಲೀಸ್ ಪೇದೆ ಕಾಲು ಮುರಿತ

ಅಭಿಮಾನಿಗಳನ್ನು ತಡೆಯುವ ಸಮಯದಲ್ಲಿ ಮಡಿವಾಳ ಠಾಣೆಯ ಪೊಲೀಸ್ ಪೇದೆ ಗಣೇಶ್ ನಾಯಕ್ ಎಂಬವರು ಕಾಲು ಮುರಿತಗೊಂಡಿದೆ. ಗಣೇಶ್ ನಾಯಕ್ ಅವರನ್ನು ಮಲ್ಯ ಸಿಗ್ನಲ್ ಗೇಟ್ ಬಳಿ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು. ಕೂಡಲೇ ಗಣೇಶ್ ನಾಯಕ್ ಅವರನ್ನು ಮಲ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:  Power Star Puneeth Rajkumar; 6 ವರ್ಷದವರಿದ್ದಾಗ ಸ್ಟಾರ್ ನಟಿಯನ್ನು ಮದ್ವೆ ಆಗೋದಾಗಿ ಹೇಳಿದ್ರು ಪುನೀತ್ ರಾಜ್‍ಕುಮಾರ್

ರಾತ್ರಿಯೆಲ್ಲ ಅಂತಿಮ ದರ್ಶನಕ್ಕೆ ವ್ಯವಸ್ಥೆ

ರಾತ್ರಿಯೆಲ್ಲಾ ಅಭಿಮಾನಿಗಳಿಗೆ ಪುನೀತ್ ಪಾರ್ಥಿವ ಶರೀರಕ್ಕೆ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ಸುಮಾರು ಏಳು ಸಾವಿರ ಪೊಲೀಸರು ಬೆಂಗಳೂರಿನಲ್ಲಿ ಡೀಪ್ಲಾಯ್ಮೆಂಟ್ ಆಗಿದ್ದಾರೆ. ಎಲ್ಲ ವಲಯದ ಡಿಸಿಪಿಗಳು ಎಸಿಪಿಗಳ ಸ್ಥಳದಲ್ಲಿದ್ದಾರೆ.  KSRP, CRPF ಎಲ್ಲರನ್ನೂ ಇಲ್ಲಿ ಕರೆಸಿಕೊಂಡಿದ್ದೇವೆ.  ಈಗಾಗಲೇ ನಾಳೆ ವ್ಯವಸ್ಥೆಯನ್ನು ಕೂಡ ಇವತ್ತು ಮುಂಜಾಗ್ರತ ಕ್ರಮವಾಗಿ ಮಾಡಿಕೊಂಡಿದ್ದೇವೆ. ಇನ್ನು ಅಂತಿಮಯಾತ್ರೆ ಬಗ್ಗೆ ಕುಟುಂಬದವರು ಹೇಗೆ ಹೇಳುತ್ತಾರೆ ಹಾಗೆ ಮಾಡುತ್ತವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನ್ಯೂಸ್ 18ಗೆ ಹೇಳಿದ್ದಾರೆ.

ಅಪ್ಪು ದರ್ಶನ ಪಡೆದ ಗಣ್ಯರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದರು. ದರ್ಶನ ಪಡೆದ ಬಳಿಕ ಕೆಲ ಸಮಯ ಅಲ್ಲಿಯೇ ಕುಳಿತ ಮುಖ್ಯಮಂತ್ರಿಗಳು, ಶಿವರಾಜಕುಮಾರ್ ಅವರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಸಚಿವರಾದ ಅಶ್ವತ್ಥ ನಾರಾಯಣ ಮತ್ತು ಆರ್. ಅಶೋಕ್ ಸಹ ಇದ್ದರು. ಇದಕ್ಕೂ ಮೊದಲು ಸಚಿವರಾದ ಬೈರತಿ ಬಸವರಾಜ್, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್ ದರ್ಶನ ಪಡೆದುಕೊಂಡಿದ್ದರು.

ಇದನ್ನೂ ಓದಿ:  ದೊಡ್ಮನೆಯ ಕಿರಿಯ ಮಗನೇ ಕಣ್ಮರೆ.. ಎತ್ತಿ ಆಡಿಸಿದ್ದ ಅಣ್ಣಂದಿರು-ಅಕ್ಕಂದಿರಿಗೆ ಮುಗಿಯದ ಶೋಕ

ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ

ಅಂತ್ಯಕ್ರಿಯೆ ನಡೆಸಲು ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿ ಜಾಗ ಗುರುತಿಸಲಾಗಿದೆ. ಪುನೀತ್ ಅವರ ಮಗಳು ವಿದೇಶದಲ್ಲಿದ್ದು, ಭಾನುವಾರ ಆಗಮಿಸಲಿದ್ದಾರೆ. ಭಾನುವಾರ ಪುನೀತ್ ಅಂತ್ಯಕ್ರಿಯೆ ನಡೆಯಲಿದೆ ಎಂದು ದೊಡ್ಮನೆ ಕುಟುಂಬ ಮಾಹಿತಿ ನೀಡಿದೆ.

ಚಾಮರಾಜನಗರದಲ್ಲಿ ಅಭಿಮಾನಿ ಸಾವು

29 ವರ್ಷದ ಮುನಿಯಪ್ಪ ಮೃತ ಪುನೀತ್ ರಾಜ್ ಕುಮಾರ್ ಅಭಿಮಾನಿ. ಯುವರತ್ನನ ಅಪ್ಪಟ ಅಭಿಮಾನಿಯಾಗಿದ್ದ ಮುನಿಯಪ್ಪ ಕೊರೊನಾ ಲಾಕ್ ಡೌನ್ ಹಿನ್ನೆಲೆ ಗ್ರಾಮಕ್ಕೆ ಬಂದು ನೆಲೆಸಿದ್ದರು. ಗ್ರಾಮಕ್ಕೆ ಬಂದಿದ್ದರೂ ಸಮಯ ಸಿಕ್ಕಾಗೆಲ್ಲ ಬೆಂಗಳೂರಿಗೆ ತೆರಳಿ ಪುನೀತ್ ಅವರನ್ನು ಭೇಟಿಯಾಗುತ್ತಿದ್ದರು. ಮುನಿಯಪ್ಪ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದು, ನಾಳೆ ಮರೂರು  ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  Puneeth Rajkumar RIP: ಕೊನೆ ಘಳಿಗೆಯಲ್ಲಿ ಅಪ್ಪಾಜಿಯನ್ನು ಕನವರಿಸಿದ್ದ ಅಪ್ಪು.. ತಂದೆ-ತಾಯಿಯನ್ನು ಸೇರಿಕೊಂಡ ‘ರಾಜಕುಮಾರ’

ಇಂದು ಆಗಿದ್ದೇನು?

ಸ್ಯಾಂಡಲ್​ವುಡ್​ನ ನಟ ಸಾರ್ವಭೌಮ, ಪವರ್​ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳಿಗೆ ಮಾತ್ರ ಪ್ರೀತಿಯ ಅಪ್ಪು. 46 ವರ್ಷದ ನಟನಿಗೆ ಇಂದು ಮುಂಜಾನೆ ವ್ಯಾಯಾಮ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಬೆಳಿಗ್ಗೆ 11:30ಕ್ಕೆ ಪುನೀತ್​ ಅವರಿಗೆ ಹೃದಯಾಘಾತವಾಗಿದ್ದು, ಮೊದಲು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ನಂತರ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Published by:Mahmadrafik K
First published: