• Home
  • »
  • News
  • »
  • state
  • »
  • SDPI ಕಚೇರಿ ಸೇರಿ 5 ಕಡೆ ದಾಳಿ; PFI ನಿಷೇಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್

SDPI ಕಚೇರಿ ಸೇರಿ 5 ಕಡೆ ದಾಳಿ; PFI ನಿಷೇಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್

ಎಸ್​ಡಿಪಿಐ

ಎಸ್​ಡಿಪಿಐ

ಪಾಂಡೇಶ್ವರ ಪೊಲೀಸ್ ಠಾಣಾ ಅಧಿಕಾರಿಗಳು ಕಚೇರಿಗೆ ಹಾಕಿದ್ದ ಬೀಗ ಒಡೆಯಲು ಹರಸಾಹಸ ಪಟ್ಟಿದ್ದಾರೆ. ಕಬ್ಬಿಣದ ಕಟ್ಟರ್ ಮೂಲಕ ಬೀಗ ಒಡೆದು ಕಛೇರಿಗೆ ನುಗ್ಗಿದ ಪೊಲೀಸರು ಪರಿಶೀಲನೆ ಬಳಿಕ ಪಿಎಫ್ಐ ಕಚೇರಿಗೆ ಬೀಗ ಹಾಕಿ ಸೀಲ್ ಮಾಡಿದ್ದಾರೆ.

  • Share this:

ಶಿವಮೊಗ್ಗದ (Shivamogga) ಎಸ್​​ಡಿಪಿಐ ಕಚೇರಿ(SDPI Office) ಸೇರಿದಂತೆ 5 ಕಡೆಗಳಲ್ಲಿ ಪೊಲೀಸರು (Police) ಹಾಗೂ ತಹಶೀಲ್ದಾರ್ ಐವರು ಕಾರ್ಯಕರ್ತರ ಮನೆ ಮೇಲೆ ದಾಳಿ ಮಾಡಿದ್ದಾರೆ. ಮೊಬೈಲ್ ಸೇರಿದಂತೆ, ಹಲವು ದಾಖಲಾತಿಗಳು ವಶಪಡಿಸಿಕೊಂಡಿದ್ದಾರೆ. ನಗರದ ಬೈಪಾಸ್ ರಸ್ತೆಯಲ್ಲಿರುವ ಎಸ್​ಡಿಪಿಐ ಕಚೇರಿ ಬೀಗ ಒಡೆದು ಒಳಗೆ ನುಗ್ಗಿದ ಅಧಿಕಾರಿಗಳು, ಕಚೇರಿಯಲ್ಲಿದ್ದ ಕೆಲವು ಪಾಂಪ್ಲೆಟ್ ವಶಕ್ಕೆ ಪಡೆದು ವಾಪಸ್​ ಆಗಿದ್ದಾರೆ. ಬುಧವಾರ ತಡರಾತ್ರಿ ನಡೆದ ಪೊಲೀಸರು ಉಡುಪಿ (Udupi) ಜಿಲ್ಲೆಯ ವಿವಿಧೆಡೆ ಪಿಎಫ್ಐ (PFI) ಮತ್ತು ಎಸ್​ಡಿಪಿಐ ಸಂಘಟನೆಗೆ ಸೇರಿದ ಹಲವು ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಮತ್ತು ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಉಡುಪಿ ಜಿಲ್ಲೆಯಲ್ಲಿ PFI ನ ಯಾವುದೇ ಕಚೇರಿ ಇಲ್ಲ. ಹಾಗಾಗಿ SDPI ಕಚೇರಿಯಲ್ಲಿಯೇ PFI ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದರು. ಈ ಹಿನ್ನೆಲೆ SDPI ಕಚೇರಿಯಲ್ಲಿಯೇ ಇವರ ಚಟುವಟಿಕೆಗಳು ನಡೆಯುತ್ತಿದ್ದವು.


ಈ ಹಿನ್ನೆಲೆ ಉಡುಪಿಯ ಪಂದುಬೆಟ್ಟು ಮಸೀದಿ ಬಳಿಯ ಕಟ್ಟಡ, ಹೂಡೆ, ಗಂಗೊಳ್ಳಿ ಕಚೇರಿ ಮೇಲೆ ದಾಳಿ ನಡೆದಿದೆ. ಎಸ್​ಡಿಪಿಐ ನಾಯಕರಾದ ಬಶೀರ್ ಮತ್ತು ನಜೀರ್ ಮನೆ ಮೇಲೆ ದಾಳಿ ನಡೆಸಿದ್ದರು. ಬೀಗ ಹಾಕಿದ ಹಿನ್ನೆಲೆ ಪೊಲೀಸರು ವಾಪಸ್ ಆಗಿದ್ದಾರೆ.


ಪಿಎಫ್ಐ ಕಚೇರಿಗೆ ಬೀಗ ಹಾಕಿ ಸೀಲ್


ಮಂಗಳೂರಿನ ನೆಲ್ಲಿಕಾಯಿ ರಸ್ತೆಯ ಪಿಎಫ್ಐ ಕಚೇರಿಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಪಾಂಡೇಶ್ವರ ಪೊಲೀಸ್ ಠಾಣಾ ಅಧಿಕಾರಿಗಳು ಕಚೇರಿಗೆ ಹಾಕಿದ್ದ ಬೀಗ ಒಡೆಯಲು ಹರಸಾಹಸ ಪಟ್ಟಿದ್ದಾರೆ. ಕಬ್ಬಿಣದ ಕಟ್ಟರ್ ಮೂಲಕ ಬೀಗ ಒಡೆದು ಕಛೇರಿಗೆ ನುಗ್ಗಿದ ಪೊಲೀಸರು ಪರಿಶೀಲನೆ ಬಳಿಕ ಪಿಎಫ್ಐ ಕಚೇರಿಗೆ ಬೀಗ ಹಾಕಿ ಸೀಲ್ ಮಾಡಿದ್ದಾರೆ.


ಕೋಲಾರ ತಹಶೀಲ್ದಾರ್ ನಾಗರಾಜ್ ಹಾಗೂ ಡಿವೈಎಸ್ ಪಿ ಮುರಳಿಧರ್ ಜಂಟಿಯಾಗಿ ನಿನ್ನೆ SDPI ಕಚೇರಿ ಬೀಗ ಒಡೆದು  ಪರಿಶೀಲನೆ ನಡೆಸಿದ್ರು. ಕಚೇರಿ ಮಹಜರು ಮಾಡಿದ ನಂತರ ಕಚೇರಿಗೆ ಬೀಗ‌ ಹಾಕಲಾಗಿದೆ. ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿನ PFI ಕಚೇರಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಶಹಜಾನ್ ಉನ್ನೀಸಾ ಎಂಬುವರ ಮನೆಯಲ್ಲಿದ್ದ ಬಾಡಿಗೆ ಕಟ್ಟಡದಲ್ಲಿ ಪರಿಶೀಲನೆ ಮಾಡಿದ್ರು


ರಾಜ್ಯದಲ್ಲಿ ಹೈ ಅಲರ್ಟ್


ಕೇಂದ್ರ ಸರ್ಕಾರ ಪಿಎಫ್​​ಐ ನಿಷೇಧಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಪೊಲೀಸರು ನಿನ್ನೆಯಿಂದಲೇ ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದು, ರಾತ್ರಿ ಹೊತ್ತಿನ ಗಸ್ತನ್ನ ಹೆಚ್ಚು ಮಾಡಿದ್ದಾರೆ. ಅಲ್ಲದೇ ಟಾರ್ಗೆಟ್ ಆಗಿದ್ದ ಹಿಂದೂ ಮುಖಂಡರ ಮನೆಗಳಿಗೆ ಭದ್ರತೆ ಹೆಚ್ಚು ಮಾಡಿದ್ದಾರೆ. ಪಿಎಫ್​​ಐ ನಿಷೇಧ ಸಂಬಂಧ ಯಾವುದೇ ಪ್ರತಿಭಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.


ಇದನ್ನೂ ಓದಿ;  PFI Ban: ಪಿಎಫ್​ಐಗೆ ಹರಿದು ಬರುತ್ತಿದ್ದ ಹಣಕ್ಕೆ ಅಪ್ಪ, ಅಮ್ಮನೇ ಇರಲಿಲ್ಲ; 120 ಕೋಟಿಗೂ ಅಧಿಕ ಹಣ ಸಂದಾಯ?


ಅಧಿಸೂಚನೆಯನ್ನ ಅಂಗೀಕರಿಸಿ ಅದೇಶ


ಕೇಂದ್ರ ಸರ್ಕಾರದಿಂದ ಪಿಎಫ್ ಐ ಹಾಗೂ ಅಂಗ ಸಂಸ್ಥೆಗಳ ನಿಷೇಧ ಹಿನ್ನೆಲೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅಧಿಸೂಚನೆಯನ್ನ ಅಂಗೀಕರಿಸಿ ಅದೇಶ ಹೊರಡಿಸಿದೆ. ರಾಜ್ಯ ಸರ್ಕಾರದಿಂದ ಎಲ್ಲ ಎಂಟು ಸಂಘಟನೆಗಳ ನಿಷೇಧವನ್ನು ಅಂಗೀಕರಿಸಿ ಅದೇಶಿಸಿದೆ.


ಇದಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳಲು ಪೊಲೀಸ್ ಆಯುಕ್ತರಿಗೆ ಜಿಲ್ಲಾ ಎಸ್​ಪಿಗಳಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಿಗೆ ಅಧಿಕಾರ ನೀಡಿ ಅದೇಶ ಹೊರಡಿಸಿದೆ.


ನಿಷೇಧಕ್ಕೆ ಒಳಪಟ್ಟ ಸಂಘಟನೆಯ, ಕಚೇರಿಗಳನ್ನು ಸೀಜ್ ಮಾಡುವುದು, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ಕಾನೂನು ಕ್ರಮ ಕೈಗೊಳ್ಳುವ ಜವಾಬ್ದಾರಿ, ರಾಜ್ಯ ಸರಕಾರಗಳು ನಿರ್ವಹಿಸಲಿವೆ.


ಇದನ್ನೂ ಓದಿ:  PFI Ban: ಪಿಎಫ್‌ಐ ಒಂದೇ ಅಲ್ಲ, ಈ ಹಿಂದೆ ಹಲವು ಸಂಘಟನೆಗಳಿಗೆ ತಟ್ಟಿವೆ ಬ್ಯಾನ್ ಬಿಸಿ! ಕಾರಣ ಮಾತ್ರ ಅದೊಂದೇ!


ಕೇಂದ್ರದ ನಿರ್ದೇಶನದಂತೆ, ರಾಜ್ಯ ಸರಕಾರ, ಮುಂದಿನ ಪ್ರಕ್ರಿಯೆಗಳ ಸಮರ್ಪಕ ಅನುಷ್ಠಾನಕ್ಕೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಅಧಿಕಾರ ನೀಡಿ ಸುತ್ತೋಲೆ ಹೊರಡಿಸಿದೆ.


ಸೆಪ್ಟೆಂಬರ್ ಕ್ರಾಂತಿ ಎಂದು ಬಣ್ಣನೆ


ಪಿಎಫ್​ಐ ನಿಷೇಧದವನ್ನ ಎಡಿಜಿಪಿ ಅಲೋಕ್ ಕುಮಾರ್ ಸೆಪ್ಟೆಂಬರ್ ಕ್ರಾಂತಿ ಎಂದು ಬಣ್ಣಿಸಿದ್ದಾರೆ. ನಿನ್ನೆ ಈ ಬಗ್ಗೆ ಟ್ವೀಟ್ ಮಾಡಿದ ಅಲೋಕ್ ಕುಮಾರ್ ಸೆಪ್ಟೆಂಬರ್ 26, 2001ರಂದು ಸಿಮಿಯನ್ನ ನಿಷೇಧ ಮಾಡಲಾಗಿತ್ತು. ಸೆಪ್ಟೆಂಬರ್ 28, 2022ರಂದು ಪಿಎಫ್ಐ ನಿಷೇಧ ಮಾಡಲಾಗಿದೆ ಎಂದು ಟ್ವೀಟ್​​ನಲ್ಲಿ ಮಾಹಿತಿ ನೀಡಿದ್ರು. ಸಾಮಾನ್ಯ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ.. ನಾವು ಕಾನೂನುಬಾಹಿರ ಚಟುವಟಿಕೆಗಳನ್ನು ನಾವು ಸಹಿಸೋದಿಲ್ಲ ಎಂದಿದ್ದಾರೆ.

Published by:Mahmadrafik K
First published: