ಗಡಿ ಚೆಕ್‍ಪೋಸ್ಟ್​​ನಲ್ಲಿ ವಸೂಲಿ ಧಂಧೆಗೆ ಎಸ್ಪಿ ಬ್ರೇಕ್ : ಇದು ನ್ಯೂಸ್ 18 ಕನ್ನಡ ವರದಿ ಇಂಪ್ಯಾಕ್ಟ್​

news18
Updated:August 30, 2018, 8:59 PM IST
ಗಡಿ ಚೆಕ್‍ಪೋಸ್ಟ್​​ನಲ್ಲಿ ವಸೂಲಿ ಧಂಧೆಗೆ ಎಸ್ಪಿ ಬ್ರೇಕ್ : ಇದು ನ್ಯೂಸ್ 18 ಕನ್ನಡ ವರದಿ ಇಂಪ್ಯಾಕ್ಟ್​
news18
Updated: August 30, 2018, 8:59 PM IST
- ರಘುರಾಜ್, ನ್ಯೂಸ್ 18ಕನ್ನಡ

ಕೋಲಾರ ( ಆಗಸ್ಟ್ 30) : ಗಡಿಯಲ್ಲಿ ನಿಗಾ ಇಡೋಕೆ ಅಂತ ಅಲ್ಲಿ ಆರಕ್ಷಕ ಸಿಬ್ಬಂದಿ ಸಮೇತ ಚೆಕ್‍ಪೋಸ್ಟ್ ತೆರೆಯಲಾಗಿತ್ತು, ಆದ್ರೆ ಅಂತರಾಜ್ಯ ಗಡಿಯಲ್ಲಿದ್ದ ಚೆಕ್‍ಪೋಸ್ಟ್ ಘಟಕವನ್ನ ರೋಲ್‍ಕಾಲ್ ಕೇಂದ್ರ ಮಾಡಿಕೊಂಡಿದ್ರು ಪೊಲೀಸ್ ಸಿಬ್ಬಂದಿ, ನ್ಯೂಸ್ 18 ಕನ್ನಡ ವರದಿ ನಂತರ ಎಚ್ಚೆತ್ತ ಪೊಲೀಸ್ ಇಲಾಖೆ ಹಣ ವಸೂಲಿ ಮಾಡಿದ ಕೇಂದ್ರ ಸಿಬ್ಬಂದಿ, ಹಾಗು ಚೆಕ್‍ಪೋಸ್ಟ್ ತೆರವು ಮಾಡಿ, ತನಿಖೆಗೆ ಆದೇಶ ಮಾಡಿದ್ದಾರೆ.

ಚಿನ್ನದನಾಡು ಕೋಲಾರ ಜಿಲ್ಲೆಯ ಗಡಿಕಾಯುವ ರಾಯಲ್ಪಾಡು ಗಡಿ ಚೆಕ್‍ಪೋಸ್ಟ್, ಚೆಕ್‍ಪೋಸ್ಟ್ ಎಂದ್ರೆ ಸಾಮಾನ್ಯವಾಗಿ ಅಂತರಾಜ್ಯ ಭಾಗದಲ್ಲಿ ನಡೆಯೋ ಅಕ್ರಮಗಳನ್ನ ತಡೆಯೋಕೆ ಹಾಕುವ ಒಂದು ತನಿಖಾ ಕೇಂದ್ರ, ಆದ್ರೆ ಶ್ರೀನಿವಾಸಪುರದ ಈ ರಾಯಲ್ಪಾಡು ಪೊಲೀಸ್ ಠಾಣೆಯ ಚೆಕ್‍ಪೋಸ್ಟ್ ಡೇನೈಟ್ ರೋಲ್‍ಕಾಲ್ ಕೇಂದ್ರವನ್ನಾಗಿ ಸಿಬ್ಬಂದಿ ಬದಲಾಯಿಸಿದ್ದಾರೆ, ಕಳೆದ 5 ವರ್ಷದಿಂದ ನಿರಂತರವಾಗಿ ಇಲ್ಲಿ ಹಗಲು ರಾತ್ರಿ ಕೆಲಸ ಮಾಡ್ತಿರೋ ಸಿಬ್ಬಂದಿ ವಾಹನಗಳ ಬಳಿ ಹಣ ಪೀಕ್ತಿದ್ದಾರೆ, ರಾಯಲ್ಪಾಡು ಪೊಲೀಸರ ಈ ಹಗಲು ರಾತ್ರಿ ವಸೂಲಿ ಧಂದೆ ನ್ಯೂಸ್ 18 ಕನ್ನಡ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆಯಾಗಿದ್ದು, ಪೊಲೀಸರ ಡೇನೈಟ್ ವಸೂಲಿ ಧಂದೆ ಜಗತ್ ಜಾಹೀರಾಗಿದೆ,

ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆ ಮತ್ತು ಆಂದ್ರ ರಾಜ್ಯದ ಅನಂತಪುರ ಜಿಲ್ಲೆಗಳ ಮಾರ್ಗದ ರಾಜ್ಯ ಹೆದ್ದಾರಿ 82 ಅತಿ ಸೂಕ್ಷ್ಮವಾದ ಹೆದ್ದಾರಿಯಾಗಿದ್ದು, ಸ್ಮಗಲ್ ಗೂಡ್ಸ್ ಈ ಮಾರ್ಗವಾಗಿಯೇ ರಾಜಧಾನಿ ಬೆಂಗಳೂರಿಗೆ ರವಾನೆಯಾಗುತ್ತೆ, ಅಷ್ಟೇ ಅಲ್ಲದೇ, ರಕ್ತ ಚಂದನ, ಪ್ರಾಣಿಗಳ ಬೆಲೆಬಾಳುವ ಚರ್ಮ, ಗಾಂಜಾ, ಸೇರಿದಂತೆ ಮತ್ತು ಪದಾರ್ಥಗಳು ಇಲ್ಲಿಂದಲೇ ಸಾಗಾಣೆ ಮಾಡುವ ಅನುಮಾನಗಳು ಸಾಕಷ್ಟಿದೆ.,

ಅದಕ್ಕಾಗಿಯೇ ಅಂತರಾಜ್ಯ ಗಡಿಯಲ್ಲಿ ಚೆಕ್‍ಪೋಸ್ಟ್ ಸ್ತಾಪಿಸಿದ್ದು, ಪೊಲೀಸ್ರು ತಮ್ಮ ಕರ್ತವ್ಯ ಮರೆತು, ವಾಹನ ತಪಾಸಣೆ ಮಾಡದೆ, ಕೇವಲ ವಸೂಲಿ ಧಂದೆಯಲ್ಲಿ ತೊಡಗಿ ಕರ್ತವ್ಯಕ್ಕೆ ದ್ರೋಹ ಬಗೆದಿದ್ದಾರೆ. ನ್ಯೂಸ್ 18 ಕನ್ನಡ ವರದಿ ನಂತರ ಎಚ್ಚೆತ್ತುಕೊಂಡಿರುವ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಕ್ರಮಕ್ಕೆ ಮುಂದಾಗಿದೆ, ಚೆಕ್‍ಪೋಸ್ಟ್‍ನಲ್ಲಿ ಧಂದೆ ನಡೆಯುತ್ತಿದ್ದ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ಪಿ ರೋಹಿಣಿ ಕಟೋಚ್ ಕೂಡಲೇ ಚೆಕ್‍ಪೋಸ್ಟ್ ಬಂದ್ ಮಾಡುವಂತೆ ಸೂಚಿಸಿದ್ದಾರೆ, ಅಲ್ಲದೇ ಡೇ ನೈಟ್ ವಸೂಲಿಯಲ್ಲಿ ತೊಡಗಿದ್ದ ಪೇದೆಗಳ ಅಮಾನತು ಮಾಡಲು ವರದಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ,

ಇನ್ನು ಚೆಕ್‍ಪೋಸ್ಟ್ ವಸೂಲಿ ಕೇಂದ್ರದಲ್ಲಿದ್ದ ಪೇದೆಗಳ ವಿರುದ್ದ ಕೋಲಾರ ಪೊಲೀಸ್ ಇಲಾಖೆಯೇನೊ ಕ್ರಮ ತೆಗೆದುಕೊಳ್ಳುವುದರಲ್ಲಿ ಸಂದೇಹವಿಲ್ಲ, ಆದರೆ ಪೇದೆಗಳ ಈ ಬ್ರಹ್ಮಾಂಡ ವಸೂಲಿ ದಂಧೆಗೆ ಹಿರಿಯ ಅಧಿಕಾರಿಗಳ ಸಹಕಾರ ಇಲ್ಲದೆ ಇಷ್ಟು ದೈರ್ಯವಾಗಿ ವಸೂಲಿ ಮಾಡಲು ಸಾಧ್ಯವೆ ಇಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ, ಹಾಗಾಗಿಯೇ ರಾಯಲ್ಪಾಡು ಪಿಎಸ್​ಐ ನಟರಾಜ್ ಸೇರಿದಂತೆ ಶ್ರೀನಿವಾಸಪುರ ಸರ್ಕಲ್ ಇನ್ಸ್ಙಪೆಕ್ಟರ್ ವಿರುದ್ದವೂ ತನಿಖೆ ನಡೆಸಿ ಕ್ರಮ ಜರುಗಿಸಬೇಕಿದೆ.

ಈ ಮಧ್ಯೆ ನ್ಯೂಸ್ 18 ಕನ್ನಡ ವಾಹಿನಿ ವರದಿಗೆ ಶ್ರೀನಿವಾಸಪುರ ಭಾಗದ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಸೂಲಿ ಕೇಂದ್ರದ ನೈಜ ಸ್ವರೂಪ ಬಯಲಿಗೆ ಎಳೆದಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.  ಸದ್ಯ ರಾಯಲ್ಪಾಡು ಗಡಿ ಚೆಕ್‍ಪೋಸ್ಟ್ ಬಂದ್ ಮಾಡಿರುವ ಎಸ್ಪಿ ರೋಹಿಣಿ ಕಟೋಚ್ ಮುಂದಿನ ವಾರವೇ ಪ್ಲಡ್‍ಲೈಟ್ ಅಳವಡಿಸಿ, ಸಿಸಿ ಕ್ಯಾಮರಾ ಸಹಿತ ಚೆಕ್‍ಪೋಸ್ಟ್ ತೆರೆಯಲಾಗುವುದು ಎಂಬ ಭರವಸೆ ನೀಡಿದ್ದಾರೆ.
Loading...

ಇದೇ ಶ್ರೀನಿವಾಸಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ರಮೇಶ್‍ಕುಮಾರ್ ಅವರು ಸದ್ಯ ವಿಧಾನಸಭೆಯ ಸ್ಪೀಕರ್ ಆಗಿದ್ದಾರೆ, ಆದರೆ ಅವರ ತವರಲ್ಲೇ ಹೀಗೆ ಪೋಲಿಸರ ಹಗಲು ಸುಲಿಗೆ ನಡೀತಿದೆ. ಇತ್ತ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗು ಸ್ಪೀಕರ್ ರಮೇಶ್‍ಕುಮಾರ್ ಅವರ ಗಮನಕ್ಕು ಬರದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...