ಮಂಗಳೂರು ಬಾಂಬ್​ ಕೇಸ್​​: ಆದಿತ್ಯ ರಾವ್ ವ್ಯವಹರಿಸಿದ್ದ ಸ್ಥಳಗಳಲ್ಲಿ ತನಿಖೆ ಮುಂದುವರಿಸಿದ ಪೊಲೀಸರು

ಎರಡು ದಿನಗಳ ಹಿಂದೆ ಪೊಲೀಸರ ವಶದಲ್ಲಿದ್ದ ಆರೋಪಿ ಆದಿತ್ಯರಾವ್​​ನನ್ನು ಸೈಬರ್​​​ ಪೊಲೀಸ್​​ ಕಸ್ಟಡಿಗೆ ನೀಡಲಾಗಿತ್ತು. ಈಗಾಗಲೇ ತನಿಖೆ ಆರಂಭಿಸಿರುವ ಸೈಬರ್​​ ಪೊಲೀಸರು ಆದಿತ್ಯರಾವ್​​ನನ್ನು ಇನ್ನೂ ಮಹಜರಿಗೆ ಕರೆದುಕೊಂಡು ಹೋಗಿಲ್ಲ. ಆದರೆ, ಆದಿತ್ಯರಾವ್​​​ ಕಂಪ್ಯೂಟರ್ ಬಳಸಿ ಹೇಗೆ ಆನ್‌ಲೈನ್‌ನಲ್ಲಿ ಸ್ಫೋಟಕ ತಯಾರಿಕೆ ಬಗ್ಗೆ ಜಾಲಾಡಿದ್ದ ಎಂಬುದರ ಸುತ್ತ ತನಿಖೆ ಮಾಡುತ್ತಿದ್ದರು.

ಆದಿತ್ಯ ರಾವ್​

ಆದಿತ್ಯ ರಾವ್​

  • Share this:
    ಮಂಗಳೂರು(ಜ.29): ಮಂಗಳೂರು ವಿಮಾನ ನಿಲ್ದಾಣ ಬಾಂಬ್​​ ಪತ್ತೆ ಪ್ರಕರಣ ಸಂಬಂಧ ಪೊಲೀಸರ ತನಿಖೆ ಮುಂದುವರಿದಿದೆ. ಆದಿತ್ಯರಾವ್​​ ವಾಸವಾಗಿದ್ದ ಬಾಡಿಗೆ ಮನೆ ಮತ್ತು ಆತನ ಬಾಂಬ್​​ ತಯಾರಿಕೆಗೆ ಸಂಬಂಧಿಸಿದ ವಸ್ತುಗಳ ಖರೀದಿ ಮಾಡಿದ್ದ ಹಾರ್ಡ್‌ವೇರ್ ಅಂಗಡಿಯಲ್ಲೂ ಪೊಲೀಸರು ತನಿಖೆ ನಡೆಸಿದ್ಧಾರೆ. ಹಾಗೆಯೇ ತಾನು ಲಾಕರ್​​ ಹೊಂದಿದ್ದ ಬ್ಯಾಂಕ್​​ಗೆ ಭೇಟಿ ನೀಡಿ ಪೊಲೀಸರು ಪರಿಶೀಲಿಸಿದ್ಧಾರೆ. ನಗರದ ಬೆಂದೂರ್‌ ಬೆಥನಿ ಕಾನ್ವೆಂಟ್ ಹಿಂಭಾಗದಲ್ಲಿ ಬಾಡಿಗೆ ಕೊಠಡಿಯೊಂದರಲ್ಲಿ ಆದಿತ್ಯರಾವ್ ವಾಸವಾಗಿದ್ದ. ಇಲ್ಲಿಗೆ ಆದಿತ್ಯರಾವ್​​ ಜತೆಗೆ ಭೇಟಿಕೊಟ್ಟ ಎಸಿಪಿ ಕೆ.ಯು.ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡ ತೀವ್ರ ಶೋಧಕಾರ್ಯ ನಡೆಸಿದೆ. ಅಲ್ಲದೇ ತನಿಖೆ ವೇಳೆ ಸಿಕ್ಕ ಕಡತಗಳು ಪೊಲೀಸರು ವಶಕ್ಕೆ ಪಡೆದಿದ್ಧಾರೆ.

    ಎರಡು ದಿನಗಳ ಹಿಂದೆ ಪೊಲೀಸರ ವಶದಲ್ಲಿದ್ದ ಆರೋಪಿ ಆದಿತ್ಯರಾವ್​​ನನ್ನು ಸೈಬರ್​​​ ಪೊಲೀಸ್​​ ಕಸ್ಟಡಿಗೆ ನೀಡಲಾಗಿತ್ತು. ಈಗಾಗಲೇ ತನಿಖೆ ಆರಂಭಿಸಿರುವ ಸೈಬರ್​​ ಪೊಲೀಸರು ಆದಿತ್ಯರಾವ್​​ನನ್ನು ಇನ್ನೂ ಮಹಜರಿಗೆ ಕರೆದುಕೊಂಡು ಹೋಗಿಲ್ಲ. ಆದರೆ, ಆದಿತ್ಯರಾವ್​​​ ಕಂಪ್ಯೂಟರ್ ಬಳಸಿ ಹೇಗೆ ಆನ್‌ಲೈನ್‌ನಲ್ಲಿ ಸ್ಫೋಟಕ ತಯಾರಿಕೆ ಬಗ್ಗೆ ಜಾಲಾಡಿದ್ದ ಎಂಬುದರ ಸುತ್ತ ತನಿಖೆ ಮಾಡುತ್ತಿದ್ದರು. ಆನ್‌ಲೈನ್ ಮೂಲಕ ಸ್ಫೋಟಕ ಸಾಮಗ್ರಿಗಳನ್ನು ಖರೀದಿಸಲು ಯಾರಿಗೆ ಇಮೇಲ್​​​ ಕಳುಹಿಸಿದ್ದ ಎಂಬ ಬಗ್ಗೆಯೂ ಸೈಬರ್ ಪೊಲೀಸರು ವಿಸ್ತೃತವಾಗಿ ವಿಚಾರಣೆ ನಡೆಸಿದ್ದರು.

    ಇತ್ತೀಚೆಗೆ ಮಂಗಳೂರು(ಜ.23) ನ್ಯಾಯಲಯವೂ ಆರೋಪಿ ಆದಿತ್ಯರಾವ್​​ನನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಕರೆತಂದ ಪೊಲೀಸರು ಆದಿತ್ಯರಾವ್​​ನನ್ನು ಇಲ್ಲಿನ ಪ್ರಥಮ ದರ್ಜೆ 6ನೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ 10 ದಿನಗಳ ಪೊಲೀಸರ ವಶಕ್ಕೆ ಒಪ್ಪಿಸಿ ನ್ಯಾಯಾಧೀಶ ಕೆ.ಎನ್. ಕಿಶೋರ್ ಕುಮಾರ್​ ಆದೇಶ ಹೊರಡಿಸಿದ್ದರು.

    ಇದನ್ನೂ ಓದಿ: ಮಂಗಳೂರು ಬಾಂಬ್​ ಪತ್ತೆ ಪ್ರಕರಣ: ಸೈಬರ್ ಪೊಲೀಸ್​​​​ ವಶಕ್ಕೆ ಆರೋಪಿ ಆದಿತ್ಯರಾವ್

    ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ಏರ್​​ಪೋರ್ಟ್​ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದು ಕಂಡು ಬಂದಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳದವರು ಆ ಬಾಂಬನ್ನು ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಹೋಗಿ, ಸ್ಫೋಟಿಸಲಾಗಿತ್ತು. ಇದರಿಂದಾಗಿ ಭಾರೀ ಅಪಾಯವೊಂದು ತಪ್ಪಿತ್ತು.

    ಉಡುಪಿ ಜಿಲ್ಲೆಯ ಮಣಿಪಾಲದವನಾದ ಆದಿತ್ಯ ರಾವ್ 2018ರಲ್ಲಿ ಬೆಂಗಳೂರಿನಲ್ಲಿ ಬಂಧಿತನಾಗಿದ್ದ. ಬೆಂಗಳೂರು ವಿಮಾನ ನಿಲ್ದಾಣಕ್ಕೂ ಹುಸಿಬಾಂಬ್ ಕರೆ ಮಾಡಿದ್ದ ಆದಿತ್ಯ ರಾವ್​ನನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ 6 ತಿಂಗಳು ಜೈಲು ಶಿಕ್ಷೆ ಕೂಡ ವಿಧಿಸಲಾಗಿತ್ತು. ಮಂಗಳೂರಲ್ಲಿ ಕೃತ್ಯ ನಡೆದ ದಿನವೂ ಮತ್ತೆ ಮಂಗಳೂರು ಏರ್​ಪೋರ್ಟ್​ಗೆ ಕರೆ ಮಾಡಿ ಬಾಂಬ್ ಇಟ್ಟಿರುವ ಬೆದರಿಕೆಯೊಡ್ಡಿದ್ದ. ನನ್ನನ್ನು ಜೈಲುಪಾಲು ಮಾಡಿದ್ದಕ್ಕೆ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದೇನೆ ಎಂದಿದ್ದ ಆದಿತ್ಯ ರಾವ್ ಮಂಗಳೂರು ವಿಮಾನ ನಿಲ್ದಾಣದಲ್ಲಿ 3 ಕಡೆ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ.
    First published: