ಪೊಲೀಸ್ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ರೇಪ್ ಆರೋಪಿ ಬಂಧಿಸಬೇಕು; ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ಗೆ ರೇಪ್ ಕೇಸ್ ತರಹದ ವಿಚಾರ ಬೇಕಿಲ್ಲ. ಹೀಗಾಗಿ ಉಪ ಚುನಾವಣೆಗಳಲ್ಲಿ ರೇಪ್ ಕೇಸ್ ಪ್ರಸ್ತಾಪ ಮಾಡಲಿಲ್ಲ. ಮುಂದಿನ ಚುನಾವಣೆಗಳಲ್ಲಿ ಈ ವಿಚಾರ ಪ್ರಸ್ತಾಪದ ಬಗ್ಗೆ ಮುಂದೆ ನೋಡುವ ಎಂದು ಡಿಕೆಶಿ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

  • Share this:
    ಬೆಂಗಳೂರು: ಅತ್ಯಾಚಾರ ಸಿಡಿ ಪ್ರಕರಣ ವಿಷಯ ವ್ಯಕ್ತಿಗಿಂತ ಕರ್ನಾಟಕ ಪೊಲೀಸರ ಗೌರವದ ವಿಷಯ. ಈ ರೀತಿ ಆದ್ರೆ ಮುಂದಿನ ದಿನಗಳಲ್ಲಿ ಯಾವ ಪೊಲೀಸ್ ಅಧಿಕಾರಿಗಳು ಕೆಲಸ ಮಾಡಲು ಸಾಧ್ಯವಾಗಲ್ಲ. ಇಂತಹ ಸರ್ಕಾರದಲ್ಲಿ ಈ ರೀತಿ ಆಗಿತ್ತು ಎಂದು ತಿಳಿಯುತ್ತೆ. ಇನ್ಮುಂದೆ ಯಾವುದೇ ದೂರು ಬಂದ್ರೆ ಈ ಪ್ರಕರಣ ಹೇಳುತ್ತಾರೆ. ಎಸ್​ಐಟಿ ತಂಡದಲ್ಲಿರುವ ಅಧಿಕಾರಿಗಳು ಇನ್ನು ಹತ್ತು, ಇಪ್ಪತ್ತು ವರ್ಷ ಕೆಲಸ ಮಾಡಬೇಕಾಗುತ್ತೆ. ನೀವು ಎಸ್ ಐ ಟಿ ಅಧಿಕಾರಿಗಳು ಕಾನೂನಿನ ಪ್ರಕಾರ ಕೆಲಸ ಮಾಡಬೇಕು. ರಾಜಕಾರಣಿಗಳು ಇಂದು ಬರ್ತಾರೆ, ನಾಳೆ ಹೋಗ್ತಾರೆ. ನೀವು ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

    ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ, ಈ ರೀತಿ ತನಿಖೆಯಾದರೆ ಮುಂದೆ ಏನಾಗಲಿದೆ ಎಂದು ಗೊತ್ತಿಲ್ವಾ? ಆ ಯುವತಿಗೆ ಯಾರ್ಯಾರೋ ಬಳಿ ಒತ್ತಡ ಹಾಕಿಸುತ್ತಿದ್ದಾರೆ. ಯುವತಿ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದು ರಾಮ ರಾಜ್ಯನಾ? ಅಥವಾ ರಾವಣ ರಾಜ್ಯನಾ? ಯುವತಿ ಪೋಷಕರು ಒತ್ತಡದಿಂದ ನನ್ನ ಮೇಲೆ ಏನೇನೋ ಮಾತಾಡಿದ್ದಾರೆ. ನನಗೆ ಆ ಬಗ್ಗೆ ಬೇಸರ ಇಲ್ಲ ಎಂದು ಹೇಳಿದರು.

    ರಮೇಶ್ ಜಾರಕಿಹೊಳಿ ಕೊರೋನಾ ಬಂತು ಅಂತ ಪಿಪಿಇ ಕಿಟ್ ಹಾಕಿಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದರು.  ಎಲ್ಲದರೂ ಸೋಂಕಿತರು ಪಿಪಿಇ ಕಿಟ್ ಹಾಕುತ್ತಾರೆನ್ರಿ. ನಾನು ಆಸ್ಪತ್ರೆಯಲ್ಲಿದ್ದೆ, ಸಿದ್ದರಾಮಯ್ಯ ಆಸ್ಪತ್ರೆಯಲ್ಲಿದ್ದರು. ನಾವು ಪಿಪಿಇ ಕಿಟ್ ಹಾಕಲಿಲ್ಲ. ಎಲ್ಲಿ ಕೊರೋನಾ ಬಂತು ದಾಖಲೆ ತೋರಿಸಲಿ. ಆ ಯುವತಿ ನಮ್ಮ‌ ಬಳಿ ನ್ಯಾಯ ಕೇಳೋದು ತಪ್ಪಾ? ಸಿದ್ದರಾಮಯ್ಯ, ರಮೇಶ್ ಕುಮಾರ್ ಹಾಗೂ ನನ್ನ ಹೆಸರನ್ನು ಆ ಯುವತಿ ಹೇಳಿದ್ದಳು. ಒಂದು ರಾಜಕೀಯ ಪಕ್ಷವಾಗಿ ಸಹಾಯ ಮಾಡುತ್ತೇವೆ. ನಮ್ಮ ವಕೀಲರು ಪೋಷಕರನ್ನು ಭೇಟಿ ಮಾಡಲು ತಡೆ ಹಾಕುತ್ತಾರೆ. ಆ ಯುವತಿ ಧೈರ್ಯದಿಂದ ಮುಂದೆ ಬಂದು ಹೇಳಿದರು ಎಂದರು.

    ಇನ್ನು ಎಷ್ಟು ಸಿಡಿ ಇದೆಯೋ ನನಗೆ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ ಒಂದು ಸಿಡಿ ಬಂದಿತ್ತು. ಪೊಲೀಸ್ ಅಧಿಕಾರಿ ಅನುಚೇತ್ ಏನ್ ಮಾಡಿದ್ದೀರಾ ನೀವು? ಒಬ್ಬ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ‌ ನಿರ್ವಹಿಸಿ. ಬೇರೆ ಪ್ರಕರಣಗಳಿಗೆ ಈ ಪ್ರಕರಣ ಎಕ್ಸಾಂಪಲ್ ಸೆಟ್ ಮಾಡುತ್ತಿದ್ದೀರಾ? ಯುವತಿ ಹಾಗೂ ಆ ಯುವತಿ ಪೋಷಕರು ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ಒಂದು ಪ್ರತಿಪಕ್ಷವಾಗಿ ಆ ಯುವತಿ ಪರ ನಾವು ನಿಲ್ಲುತ್ತೇವೆ. ಕೂಡಲೇ ರೇಪಿಸ್ಟ್ ರಮೇಶ್ ನನ್ನ ಬಂಧಿಸಬೇಕು. ನಿನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡು. ಆ ಯುವತಿ ಕ್ಯಾರೆಕ್ಟರ್ ಬಗ್ಗೆ ನೀನು ಮಾತಾಡ್ತೀಯಾ ಎಂದು ಹರಿಹಾಯ್ದರು.

    ಇದನ್ನು ಓದಿ: ಕೂಡಲೇ ರಮೇಶ್ ಜಾರಕಿಹೊಳಿ ಬಂಧಿಸಬೇಕು, ಹೈಕೋರ್ಟ್ ‌ನಿಗಾದಲ್ಲಿ ಸ್ವತಂತ್ರ ಸಂಸ್ಥೆಯಿಂದ ತನಿಖೆಯಾಗಬೇಕು; ಸಿದ್ದರಾಮಯ್ಯ

    ಯಾರೋ 5 ಕೋಟಿ ರೂಪಾಯಿ ಕೊಟ್ಟು ಬಿಟ್ಡಿದಾರಂತೆ. ಆ ಹೆಣ್ಣು ಮಗಳ ಕ್ಯಾರೆಕ್ಟರ್ ಬಗ್ಗೆ ಮಾತಾಡ್ತೀಯಾ. ನಿನ್ನ ಕ್ಯಾರೆಕ್ಟರ್ ಏನಾಗಿದೆ. ಎಂತಹ ಶಬ್ದ ಬಳಸಿದ್ದೀಯಾ? ಯಾರ ಮನೆ ವಿಷಯ ಬಂದಿದೆ. ಡೆಲ್ಲಿ...ಡೆಲ್ಲಿ... ಎಲ್ಲಾ ವಿಷಯದಲ್ಲಿ ತನಿಖೆ ಆಗಲೇಬೇಕು. ರೇಪಿಸ್ಟ್ ರಮೇಶ್ ಬಂಧನವಾಗಬೇಕು. ನಿರ್ಭಯ ಕೇಸಿನಂತೆ ಇದು ಸಹ ಬೇಸಿಕ್ ಆಗುತ್ತೆ. ಹಿಂದೆ ಅವರ ಫ್ಯಾಮಿಲಿ ಮೆಂಬರ್ ನಮ್ಮದು ಮುಟ್ಟಲಿ ನಿಮ್ಮದು ಬಿಚ್ಚುತ್ತೇವೆ
    ಅಂದಿದ್ದರು. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇದಕ್ಕೆ ಹೆದರಲ್ಲ ಅಂದುಕೊಳ್ತೀನಿ ಎಂದು ಡಿಕೆಶಿ ಹೇಳಿದರು.

    ಉಪಚುನಾವಣೆಯಲ್ಲಿ ಅತ್ಯಾಚಾರ ಪ್ರಕರಣ ಪ್ರಸ್ತಾಪ ಮಾಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ರೇಪ್ ಕೇಸ್ ತರಹದ ವಿಚಾರ ಬೇಕಿಲ್ಲ. ಹೀಗಾಗಿ ಉಪ ಚುನಾವಣೆಗಳಲ್ಲಿ ರೇಪ್ ಕೇಸ್ ಪ್ರಸ್ತಾಪ ಮಾಡಲಿಲ್ಲ. ಮುಂದಿನ ಚುನಾವಣೆಗಳಲ್ಲಿ ಈ ವಿಚಾರ ಪ್ರಸ್ತಾಪದ ಬಗ್ಗೆ ಮುಂದೆ ನೋಡುವ ಎಂದು ಡಿಕೆಶಿ ಹೇಳಿದರು.
    Published by:HR Ramesh
    First published: