ಮಂಗಳೂರು: ಪೊಲೀಸ್ ಅಧಿಕಾರಿಯೊಬ್ಬರು (Police Officer) ಅಪಘಾತದಲ್ಲಿ (Accident) ಮೃತಪಟ್ಟಿದ್ದರು (Death). ಮೃತ ಪೊಲೀಸ್ ಅಧಿಕಾರಿ ಅವರ ಮಗಳನ್ನು (Daughter) ಕಮಿಷನರ್ (Commissioner) ಸೀಟಿನಲ್ಲಿ ಕೂರಿಸಿ, ಮಂಗಳೂರಿನ ಕಮಿಷನರ್ (Mangaluru Commissioner) ಎನ್. ಶಶಿಕುಮಾರ್ ಗೌರವಿಸಿದ್ದಾರೆ. ಈ ಮೂಲಕ ಮಂಗಳೂರಿನ ಕಮಿಷನರ್ ಎನ್. ಶಶಿಕುಮಾರ್ ಅವರು ಹೃದಯ ವೈಶಾಲ್ಯ ಮೆರೆದಿದ್ದಾರೆ. 2013 ರಿಂದ 2015 ರಲ್ಲಿ ಮಂಗಳೂರಿನ ಪಣಂಬೂರು ಉಪ ವಿಭಾಗದಲ್ಲಿ ಎಸಿಪಿ ಆಗಿದ್ದ ರವಿ ಕುಮಾರ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಎಸಿಪಿ ಆಗಿದ್ದ ರವಿ ಕುಮಾರ್ ಅವರ ಮಗಳನ್ನು ಕಮಿಷನರ್ ಸೀಟ್ ನಲ್ಲಿ ಕೂರಿಸಿ ಗೌರವ ನೀಡಲಾಗಿದೆ.
ಪಣಂಬೂರು ಉಪ ವಿಭಾಗದಲ್ಲಿ ಎಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದ ರವಿಕುಮಾರ್
2013 ರಿಂದ 2015 ರಲ್ಲಿ ಮಂಗಳೂರಿನ ಪಣಂಬೂರು ಉಪ ವಿಭಾಗದಲ್ಲಿ ಎಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು ರವಿ ಕುಮಾರ್ ಅವರು. ಎಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು ರವಿ ಕುಮಾರ್ ಅವರು ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ಎಸಿಪಿ ಆಗಿದ್ದ ರವಿ ಕುಮಾರ್ ಅವರ ಮಗಳನ್ನು ಕಮಿಷನರ್ ಸೀಟ್ ನಲ್ಲಿ ಕೂರಿಸಿ ಗೌರವ ನೀಡಲಾಗಿದೆ.
ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆ
ಅದಾಗ್ಯೂ ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಅವರು ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆ ಆಗಿದ್ದರು. ಹೀಗಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗಿ ಆಗಿ ಮೈಸೂರಿಗೆ ವಾಪಸ್ ಆಗ್ತಾ ಇದ್ರು. ಈ ವೇಳೆ ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು.
ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆ ವೇದಿಕೆ ಮೇಲೆ ಕೂರಲು ಸಿಗಲಿಲ್ಲ ಕುರ್ಚಿ; ರಮ್ಯಾ ಫುಲ್ ಗರಂ
ಲಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ
2017ರ ಫೆಬ್ರವರಿ 22 ರಂದು ಬೆಂಗಳೂರು ಗ್ರಾಮಾಂತರದ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿತ್ತು. ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು.
ಈ ಭೀಕರ ಅಪಘಾತದಲ್ಲಿ ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಅವರ ಡ್ರೈವರ್ ಹಾಗೂ ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಇಹಲೋಕ ತ್ಯಜಿಸಿದ್ದರು.
ಸಾಯುವ ಸ್ವಲ್ಪ ದಿನ ಮುನ್ನ ಬಂದಿದ್ದ ರವಿಕುಮಾರ್
2008 ನೇ ಬ್ಯಾಚ್ ನ ಕೆಎಎಸ್ ಅಧಿಕಾರಿ ಆಗಿದ್ದ ರವಿ ಕುಮಾರ್ ಅವರಿಗೆ ಒಂದು ಹೆಣ್ಣು ಮಗುವಿದೆ. ಅಪಘಾತ ಸಂಭವಿಸುವ ಕೆಲವೇ ದಿನಗಳ ಮೊದಲು ಮಗುವಿಗೆ ಪ್ರಣೀತಾ ಎಂದು ಹೆಸರು ಇಟ್ಟಿದ್ದರು. ಕೆಎಎಸ್ ಅಧಿಕಾರಿ ಆಗಿದ್ದ ರವಿ ಕುಮಾರ್ ಅವರ ಮಗಳ ಹೆಸರು ಪ್ರಣೀತಾ. ಶನಿವಾರ ರವಿ ಕುಮಾರ್ ಅವರ ಪತ್ನಿ ತಮ್ಮ ಮಗಳ ಸಮೇತರಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದರು.
ತಮ್ಮ ಸೀಟ್ ಮೇಲೆ ಪ್ರಣೀತಾಳನ್ನು ಕೂರಿಸಿದ ಶಶಿಕುಮಾರ್
ಈ ವೇಳೆ ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಅವರ ಪುತ್ರಿ ಪ್ರಣೀತಾರನ್ನು ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ತಮ್ಮ ಸೀಟ್ ಮೇಲೆ ಕೂರಿಸಿ, ಅಗಲಿದ ರವಿ ಕುಮಾರ್ ಅವರಿಗೆ ಗೌರವ ಸಲ್ಲಿಸಿದ್ರು.
ಇದನ್ನೂ ಓದಿ: ಸಿದ್ದರಾಮಯ್ಯ ಆಪ್ತರಿಂದ ವಂಚನೆ ಆರೋಪ; ಕುಟುಂಬ ಸಮೇತ ಬೀದಿಗಿಳಿದು ಪ್ರತಿಭಟನೆ
ಮುಂದೆ ಚೆನ್ನಾಗಿ ಕಲಿತು ತಂದೆಯಂತೆ ಉನ್ನತ ಪೊಲೀಸ್ ಹುದ್ದೆ ಅಲಂಕರಿಸು ಅಂತಾ ಕಮಿಷನರ್ ಶಶಿಕುಮಾರ್ ಮತ್ತು ಇತರೆ ಪೊಲೀಸ್ ಅಧಿಕಾರಿಗಳು ಹಾರೈಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ