ಕೊರೋನಾ ಬಗ್ಗೆ ಅರಿವು ಮೂಡಿಸಲು ಹೊಸ ಕ್ರಮ; ಕೇಂದ್ರ ವಲಯದ ನೂತನ ಐಜಿಪಿ ಸೀಮಂತ್ ಕುಮಾರ್ ಕಾರ್ಯುಕ್ಕೆ ಶ್ಲಾಘನೆ

ಅತ್ತಿಬೆಲೆ ಚೆಕ್​ಪೋಸ್ಟ್​ಗಳಿಗೆ ಸರ್ ಪ್ರೈಸ್ ವಿಸಿಟ್ ಕೊಟ್ಟಾಗ ಸೀಮಂತ್​ ಸಿಂಗ್​ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಪಾಠ ಮಾಡಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಮಾತನಾಡುವಾಗ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ , ಪ್ರತಿ ದಿನ ಆರೋಗ್ಯದ ಬಗ್ಗೆ ಕಾಳಜಿಗೆ ಸೂಚಿಸಿದ್ದಾರೆ.


Updated:July 4, 2020, 12:20 PM IST
ಕೊರೋನಾ ಬಗ್ಗೆ ಅರಿವು ಮೂಡಿಸಲು ಹೊಸ ಕ್ರಮ; ಕೇಂದ್ರ ವಲಯದ ನೂತನ ಐಜಿಪಿ ಸೀಮಂತ್ ಕುಮಾರ್ ಕಾರ್ಯುಕ್ಕೆ ಶ್ಲಾಘನೆ
ಸರ್​ಪ್ರೈಸ್​ ಭೇಟಿ ನೀಡಿದ ಪೊಲೀಸ್​ ಅಧಿಕಾರಿ ಸೀಮಂತ್​
  • Share this:
ಬೆಂಗಳೂರು (ಜು.4): ನಗರದ ಪೊಲೀಸ್ ಇಲಾಖೆಯಲ್ಲಿ ಸೊಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ನೂತನ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಎಚ್ಚೆತ್ತುಕೊಂಡಿದ್ದಾರೆ. ಈ ಕುರಿತು ಅಧಿಕಾರಿಗಳ ಜೊತೆ ತುರ್ತು ಸಭೆ ಮಾಡಿದ್ದಾರೆ. ತಮ್ಮ‌ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ವೈರಸ್​ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು,  ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಸುತ್ತಿರುವ ಸಿಬ್ಬಂದಿ ಬಗ್ಗೆಯೂ  ವರದಿ ಕೇಳಿದ್ದಾರೆ.

ಅಧಿಕಾರಿಗಳಿಂದ ರಿಪೋರ್ಟ್ ಪಡೆದಿದ್ದಲ್ಲದೆ, ಅತ್ತಿಬೆಲೆ ಚೆಕ್ ಪೊಸ್ಟ್​​ಗೆ ಸರ್ ಪ್ರೈಸ್ ವಿಸಿಟ್ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಹೀಗೆ ಆಂಧ್ರ ಪ್ರದೇಶ ಮತ್ತು  ಕೋಲಾರ ನಡುವಿನ ನಂಗಿಲಿ ಚೆಕ್ ಪೋಸ್ಟ್,  ಕೋಲಾರ ಮತ್ತು ಕೃಷ್ಣಗಿರಿ ನಡುವೆ ಬರುವ ಬಲಮಂದೆ ಚೆಕ್ ಪೋಸ್ಟ್​​ಗೆ ಹೋಗಲು ಸಿದ್ಧತೆ ನಡೆಸಿದ್ದಾರೆ.

ಈ ಹಿಂದೆ ಚೆಕ್ ಪೋಸ್ಟ್​​ನಲ್ಲಿದ್ದ ಹೆಬ್ಬಗೋಡಿ‌ ಠಾಣೆಯ ಸಿಬ್ಬಂದಿಗೆ ಪಾಸಿಟಿವ್ ಬಂದಿತ್ತು. ಹೀಗಾಗಿ ಚೆಕ್​ಪೋಸ್ಟ್ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಸ್ಥಿತಿ ತಿಳಿಯಲು ಸರ್ ಪ್ರೈಸ್ ವಿಸಿಟ್ ಪ್ಲಾನ್ ಮಾಡಿದ್ದಾರೆ. ಮೂರು ಚೆಕ್​ಪೋಸ್ಟ್​​ಗಳ ಬಗ್ಗೆ ಮ್ಯಾಪಿಂಗ್ ಮಾಡಿರೋ ಐಜಿಪಿ, ಹೊರ ರಾಜ್ಯದಿಂದ ಬರುವ ಟ್ರಕ್ ಮತ್ತು ಗೂಡ್ಸ್ ಲಾರಿಗಳ ಬಗ್ಗೆ ನಿಗಾವಹಿಸಲು ಸೂಚಿಸಿದ್ದಾರೆ. ಚೆಕ್​ಪೋಸ್ಟ್​​ಗಳಲ್ಲಿ ವಯಸ್ಸಾದ ಸಿಬ್ಬಂದಿಯನ್ನ ನಿಯೋಜಿಸುವಂತಿಲ್ಲ. ಯುವ ಸಿಬ್ಬಂದಿಯನ್ನೇ‌ ನಿಯೋಜಿಸಲು ಸೂಚನೆ ನೀಡಲಾಗಿದೆ.

ಅತ್ತಿಬೆಲೆ ಚೆಕ್​ಪೋಸ್ಟ್​ಗಳಿಗೆ ಸರ್ ಪ್ರೈಸ್ ವಿಸಿಟ್ ಕೊಟ್ಟಾಗ ಸೀಮಂತ್​ ಸಿಂಗ್​ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಪಾಠ ಮಾಡಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಮಾತನಾಡುವಾಗ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ , ಪ್ರತಿ ದಿನ ಆರೋಗ್ಯದ ಬಗ್ಗೆ ಕಾಳಜಿಗೆ ಸೂಚಿಸಿದ್ದಾರೆ.

ಇನ್ನು ಚೆಕ್ ಪೋಸ್ಟ್ ಅಲ್ಲದೆ, ಎಲ್ಲಾ ಹಳ್ಳಿಗಳಲ್ಲಿ ಪೊಲೀಸರು ಗಸ್ತು ತಿರುಗುವಂತೆ ಸಿಬ್ಬಂದಿಗೆ ಹೇಳಿದ್ದಾರೆ. ಆಯಾ ಠಾಣೆಯ ಪ್ರತಿ ಹಳ್ಳಿಯಲ್ಲಿ ಕೋವಿಡ್ 19 ಬಗ್ಗೆ  ಅರಿವು ಮೂಡಿಸಬೇಕು. ಯಾವುದೇ ಸಮಾರಂಭ, ಸಭೆ ನಡೆದ್ರೆ ಪೊಲೀಸರಿಂದ ಅನುಮತಿ ಪಡೆದಿರಬೇಕು. ಪ್ರತಿ ಹಳ್ಳಿಗೆ ಹೊರ ರಾಜ್ಯದಿಂದ ಹೊರ ದೇಶದಿಂದ‌ ಹಾಗೂ ಕ್ವಾರಂಟೈನ್‌ ಮುಗಿಸಿದವರ ಬಗ್ಗೆ ನಿಗಾವಹಿಸಬೇಕು ಎಂದು ಸಿಬ್ಬಂದಿಗೆ ಹೇಳಿದ್ದಾರೆ‌.
Published by: Rajesh Duggumane
First published: July 4, 2020, 12:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading