HOME » NEWS » State » POLICE INVESTIGATION START MAHADEVA SAHUKARA BHAIRAGONDA FIRING CASE IN VIJAYAPURA SESR MVSV

ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ; ಭಾರಿ ಕಾರ್ಯಾಚರಣೆಗಿಳಿದ ಪೊಲೀಸರು

ಕೊಲೆಗೆ ಹಲವಾರು ಯೋಜನೆ ರೂಪಿಸಲಾಗಿದೆ.  15 ಜನ ಗುಂಡಿನ ದಾಳಿ ‌ನಡೆಸಿದ್ದಾರೆ.  ಪೆಟ್ರೋಲ್ ಬಾಂಬ್ ಎಸೆದಿದ್ದರೂ ಸ್ಪೋಟವಾಗಿಲ್ಲ.  ಘಟನಾ ಸ್ಥಳದಲ್ಲಿ ಮತ್ತು ಲಾಂಗ್ ಗಳೂ ಸಿಕ್ಕಿವೆ.  ಸಾಹುಕಾರ ಕಡೆಯವರೂ ಪ್ರತಿದಾಳಿ ನಡೆಸಿದ್ದಾರೆ.

news18-kannada
Updated:November 3, 2020, 7:46 PM IST
ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ; ಭಾರಿ ಕಾರ್ಯಾಚರಣೆಗಿಳಿದ ಪೊಲೀಸರು
ಮಹಾದೇವ ಸಾಹುಕಾರ ಭೈರಗೊಂಡ.
  • Share this:
ವಿಜಯಪುರ (ನ. 03): ಭೀಮಾ ತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಿನ್ನೆ ನಡೆದ ಗುಂಡಿನ ಳಿ ಪ್ರಕರಣ ಜಿಲ್ಲೆ ಮಾತ್ರವಲ್ಲದೇ, ರಾಜ್ಯ ಮತ್ತು ನೆರೆಯ ಮಹಾರಾಷ್ಟ್ರದಲ್ಲಿಯೂ ಜನ ಬೆಚ್ಚಿ ಬೀಳುವಂತೆ ಮಾಡಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು, ನಿನ್ನೆ ರಾತ್ರಿಯಿಂದಲೇ 35ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ.  ಘಟನಾ ಸ್ಥಳಕ್ಕೆ ಖುದ್ದು ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣದ ತನಿಖೆ ಮಾದರಿಯಾಗಲಿದ್ದು, ಜನ ಶಾಶ್ವತವಾಗಿ ನೆನಪಿನಲ್ಲಿಡುವಂತೆ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.  ಅಲ್ಲದೇ, ಈ ದಾಳಿಯಲ್ಲಿ ಭಾಗಿಯಾದವರ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿದ್ದು,  ಎಲ್ಲರನ್ನು ಬಂಧಿಸುವ ಬಗ್ಗೆ ಅಭಯ ನೀಡಿದ್ದಾರೆ.

ಸುಮಾರು 15 ರಿಂದ 20 ಜನ ಯುವಕರ ಗುಂಪು ಈ ದಾಳಿ ನಡೆಸಿದೆ.  21 ರಿಂದ 30 ವರ್ಷದೊಳಗಿನ ಯುವಕರು ಈ ಧಾಳಿ ನಡೆಸಿದ್ದಾರೆ.  ಇವರಲ್ಲಿ ಕೆಲವರು ವಿಜಯಪುರ, ಉಮರಾಣಿ, ಮಹಾರಾಷ್ಟ್ರದ ಸೋಲಾಪುರ, ಪುಣಿ, ಉತ್ತರ ಪ್ರದೇಶದಿಂದಲೂ ಭಾಗಿಯಾಗಿರುವ ಶಂಕೆಯಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ದಾಳಿ ನಡೆಸಿದವರ ಗುರುತು ಪತ್ತೆಯಾಗಿದೆ.  ಅತೀ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ.  ಕೊಲೆಗೆ ಹಲವಾರು ಯೋಜನೆ ರೂಪಿಸಲಾಗಿದೆ.  15 ಜನ ಗುಂಡಿನ ದಾಳಿ ‌ನಡೆಸಿದ್ದಾರೆ.  ಪೆಟ್ರೋಲ್ ಬಾಂಬ್ ಎಸೆದಿದ್ದರೂ ಸ್ಪೋಟವಾಗಿಲ್ಲ.  ಘಟನಾ ಸ್ಥಳದಲ್ಲಿ ಮತ್ತು ಲಾಂಗ್ ಗಳೂ ಸಿಕ್ಕಿವೆ.  ಸಾಹುಕಾರ ಕಡೆಯವರೂ ಪ್ರತಿದಾಳಿ ನಡೆಸಿದ್ದಾರೆ.  ಈ ಸಂದರ್ಭದಲ್ಲಿ ದಾಳಿ ಮಾಡಿದವರ ಕಡೆಯಲ್ಲೂ ಒಂದಿಬ್ಬರಿಗೆ ಗಾಯಗಳಾಗಿವೆ.  ಗುಂಡು ತಗುಲಿದ ಯಾರಾದರೂ ಚಿಕಿತ್ಸೆಗೆ ಬಂದಿರುವ ಬಗ್ಗೆ ವಿಜಯಪುರ, ಮಹಾರಾಷ್ಟ್ರದ ಸೋಲ್ಲಾಪುರ ಮತ್ತು ಪುಣೆಗಳಲ್ಲಿ ಆಸ್ಪತ್ರೆಗಳಿಗೆ ಮಾಹಿತಿ ಕೇಳಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ

ಅಷ್ಟೇ ಅಲ್ಲ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಜಿಲ್ಲೆಯ 1500 ಜನ ಪೊಲೀಸ್ ಸಿಬ್ಬಂದಿ ನಿನ್ನೆ ಸಂಜೆಯಿಂದ 35 ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.  37 ಜನ ಇನ್ಸ್​ ಪೆಕ್ಟರ್ ಗಳು ಉಮರಾಣಿ, ವಿಜಯಪುರ ಸೇರಿ ನಾನಾ ಗಸ್ತು ನಡೆಸಿದ್ದಾರೆ. ದಾಳಿಯಲ್ಲಿ ಪಾಲ್ಗೊಂಡ ಎಲ್ಲರನ್ನು ಶೇ.100 ರಷ್ಟು ಹಿಡಿಯುತ್ತೇವೆ.  ಪುಣೆ ಮತ್ತು ಉತ್ತರ ಪ್ರದೇಶದ ಕಡೆಯ ಜನರೂ ಇದರಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ಈ ಮೂಲಕ ಕಲಬುರಗಿಯಲ್ಲಿ ಸಕ್ರಿಯರಾಗಿರುವ ರೌಡಿಶೀಟರ್​ಗಳನ್ನು ಮಟ್ಟ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಈ ಮಧ್ಯೆ ಘಟನಾ ಸ್ಥಳದಲ್ಲಿ ಯಾವುದೇ ಸಾಕ್ಷ ನಾಶವಾಗದಂತೆ ಸಂರಕ್ಷಿಸಿದ್ದಾರೆ.  ಘಟನಾ ಸ್ಥಳಕ್ಕೆ ಆಗಮಿಸಿದ ಬೆಳಗಾವಿ ವಿಧಿ ವಿಜ್ಞಾನ ಕೇಂದ್ರದ ತಜ್ಞರಿಗೆ ಇದು ಬಹಳ ಅನುಕೂಲವಾಗಿದೆ.

ಈ ಮಧ್ಯೆ, ಈ ಪ್ರಕರಣವನ್ನು ಆದಷ್ಟು ಬೇಗ ತನಿಖೆ ನಡೆಸಿ ಎಲ್ಲ ಆರೋಪಿಗಳನ್ನು ಬಂಧಿಸಲು  ಎಸ್ಪಿ ಅನುಪಮ ಅಗ್ರವಾಲ ಸುಮಾರು 10ಕ್ಕೂ ಹೆಚ್ಚು ನಾನಾ ತಂಡಗಳನ್ನು ರಚಿಸಿದ್ದಾರೆ.
Published by: Seema R
First published: November 3, 2020, 7:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories