2018ರಲ್ಲಿ ಬೆಂಗಳೂರಲ್ಲಿ ಬಂಧಿತನಾಗಿದ್ದ ವ್ಯಕ್ತಿಯೇ ಮಂಗಳೂರಿನಲ್ಲಿ ಬಾಂಬ್ ಇಟ್ಟನಾ? ಚುರುಕುಗೊಂಡ ಪೊಲೀಸ್ ತನಿಖೆ

ಮಂಗಳೂರು ಏರ್​ಪೋರ್ಟ್​​ ಮ್ಯಾನೇಜರ್​ಗೆ ಶಂಕಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿತ್ತು ಎಂದು ತಿಳಿದು ಬಂದಿದೆ. ಆತ ಕರೆ ಮಾಡಿ, ನಿಮ್ಮ ಅಧಿಕಾರಿಗಳಿಂದ ನಾನು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಸುಮ್ಮನೆ ಬಿಡಲ್ಲ, ಸೇಡು ತೀರಿಸಿಕೊಳ್ಳುತ್ತೇನೆ. ಅದಕ್ಕಾಗಿಯೇ ಏರ್​​ಪೋರ್ಟ್​ ಬಳಿ ಬಾಂಬ್ ಇಟ್ಟಿದ್ದು. ಇನ್ನೂ 2 ಬಾಂಬ್ ಹಾಕುತ್ತೇನೆ,  ಸಾಧ್ಯವಾದರೆ ತಡೆಯಿರಿ, ಎಂಬುದಾಗಿ ಬೆದರಿಕೆ ಹಾಕಿದ್ದನೆನ್ನಲಾಗಿದೆ.

ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ.

ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ.

 • Share this:
  ಮಂಗಳೂರು(ಜ.21): ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬಾಂಬ್​ ಇಟ್ಟ ಶಂಕಿತನ ಗುರುತು ಪತ್ತೆ ಹಚ್ಚಲು ಹರಸಾಹಸ ಪಡುತ್ತಿರುವ ಪೊಲೀಸರಿಗೆ ಇಂದು ಸುಳಿವೊಂದು ಸಿಕ್ಕಿದೆ. 2018ರಲ್ಲಿ ಬೆಂಗಳೂರಿನಲ್ಲಿ ಹುಸಿ ಬಾಂಬ್​ ಕರೆ ಮಾಡಿದ್ದ ವ್ಯಕ್ತಿಯೇ ಈಗ ಮಂಗಳೂರು ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.  ಬೆಂಗಳೂರಿನಲ್ಲಿ ಹುಸಿ ಬಾಂಬ್​ ಕರೆ ಮಾಡಿದ್ದ ಶಂಕಿತ ಆರೋಪಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ವ್ಯಕ್ತಿಗೂ, ಮಂಗಳೂರಿನ ಶಂಕಿತನಿಗೂ ಫೋಟೋದಲ್ಲಿ ಸಾಮ್ಯತೆ ಇದೆ ಎಂಬುದು ಪೊಲೀಸರ ಅನುಮಾನ.

  ಬಾಂಬ್​ ಇಟ್ಟ ಶಂಕಿತ ವ್ಯಕ್ತಿ 'ರಾಜ್​ಕುಮಾರ್'​ ಬಸ್​ನಲ್ಲಿ ಮಂಗಳೂರಿನಿಂದ ಕೆಂಜಾರು ಜಂಕ್ಷನ್​ಗೆ ಬಂದು ಇಳಿದಿದ್ದ ಎಂದು ತಿಳಿದು ಬಂದಿದೆ. ಈ ಅಪರಿಚಿತ ವಿಧ್ವಂಸಕ ಕೃತ್ಯ ಎಸಗಲು 2 ಬ್ಯಾಗ್ ತಂದಿದ್ದ. ಕೆಂಜಾರ್ ಜಂಕ್ಷನ್​​​​​​​​ನಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ 1 ಬ್ಯಾಗ್​ ಇಡಲು ಯತ್ನಿಸಿದ್ದ.  ಸಂಕೀರ್ಣದ ಸೆಲೂನ್ ಅಂಗಡಿಯಲ್ಲೂ ಬಾಂಬ್​ ಇಡಲು ಯತ್ನಿಸಿದ್ದ. ಆದರೆ ಬ್ಯಾಗ್ ಇಡಲು ಸೆಲೂನ್ ಮಾಲೀಕ ವಿರೋಧ ವ್ಯಕ್ತಪಡಿಸಿದ್ದ ಎಂದು ತಿಳಿದು ಬಂದಿದೆ. "ಆಗಂತುಕ ವ್ಯಕ್ತಿ ತಲೆಗೆ ಹ್ಯಾಟ್ ಧರಿಸಿದ್ದ. ಇಲ್ಲಿ ಬ್ಯಾಗ್ ಇಡಬಹುದಾ ಎಂದು ಕೇಳಿದ್ದ. ಬಳಿಕ ಆಟೋ ಮಾಡಿಕೊಂಡು ತೆರಳಿದ," ಎಂದು ಶಂಕಿತನ ಬಗ್ಗೆ ಸಲೂನ್​ ಮಾಲೀಕ ಸಲ್ಮಾನ್​ ಅಲಿ ನ್ಯೂಸ್​ 18ಗೆ ತಿಳಿಸಿದ್ದಾರೆ.

  ಚನ್ನರಾಯಪಟ್ಟಣದಲ್ಲಿ ಸುಪಾರಿ ಕಿಲ್ಲರ್ಸ್? ಅಪರಿಚಿತರ ಬ್ಯಾಗ್​ನಲ್ಲಿ ಗನ್, ಚಾಕು, ಡ್ರ್ಯಾಗನ್ ಪತ್ತೆ; ಶಂಕಿತರ ಬಂಧನ

  ಮ್ಯಾನೇಜರ್​ಗೆ ಬೆದರಿಕೆ ಕರೆ

  ಈ ಪ್ರಕರಣ ಸಂಬಂಧ ಇಂದು ಮಂಗಳೂರು ಏರ್​ಪೋರ್ಟ್​​ ಮ್ಯಾನೇಜರ್​ಗೆ ಶಂಕಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿತ್ತು ಎಂದು ತಿಳಿದು ಬಂದಿದೆ. ಆತ ಕರೆ ಮಾಡಿ, "ನಿಮ್ಮ ಅಧಿಕಾರಿಗಳಿಂದ ನಾನು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಸುಮ್ಮನೆ ಬಿಡಲ್ಲ, ಸೇಡು ತೀರಿಸಿಕೊಳ್ಳುತ್ತೇನೆ. ಅದಕ್ಕಾಗಿಯೇ ಏರ್​​ಪೋರ್ಟ್​ ಬಳಿ ಬಾಂಬ್ ಇಟ್ಟಿದ್ದು. ಇನ್ನೂ 2 ಬಾಂಬ್ ಹಾಕುತ್ತೇನೆ,  ಸಾಧ್ಯವಾದರೆ ತಡೆಯಿರಿ," ಎಂಬುದಾಗಿ ಬೆದರಿಕೆ ಹಾಕಿದ್ದನೆನ್ನಲಾಗಿದೆ.

  ಬೆದರಿಕೆ ಕರೆ ಮಾಡಿದ್ದು ಯಾರು?

  ಮಂಗಳೂರು ಏರ್​ಪೋರ್ಟ್​​ ಮ್ಯಾನೇಜರ್​ಗೆ ಬೆದರಿಕೆ ಕರೆ ಮಾಡಿದ್ದು ಉಡುಪಿ ಮೂಲದ ವ್ಯಕ್ತಿ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈತನೇ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿದ್ದು ಎನ್ನಲಾಗುತ್ತಿದೆ. ಬಾಂಬರ್ ಕೇಸ್ ಬೆನ್ನತ್ತಿದ್ದ ಪೊಲೀಸರಿಗೆ  ಈ ಬಗ್ಗೆ ಸುಳಿವು ಸಿಕ್ಕಿದೆ. ಇಂಜಿನಿಯರ್ ಪದವೀಧರ ಆಗಿದ್ದ ವ್ಯಕ್ತಿ  ಏರ್‌ಪೋರ್ಟ್ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

  ಶಂಕಿತ ವ್ಯಕ್ತಿಯು 2018ರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಸೂಕ್ತ ದಾಖಲೆ ಕೊಡದ ಹಿನ್ನೆಲೆ ಕೆಲಸ ಸಿಕ್ಕಿರಲಿಲ್ಲ. ಈ ಹಿಂದೆಯೂ ಈತ ಹುಸಿ ಬಾಂಬ್ ಕರೆ ಮಾಡಿದ್ದ. 2018ರಲ್ಲೇ ಬೆಂಗಳೂರಿನ ಏರ್​ಪೋರ್ಟ್ ಪೊಲೀಸರು ಈತನನ್ನು ಬಂಧಿಸಿದ್ದರು. ಆಗ ಈತ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದನೆನ್ನಲಾಗಿದೆ.

  ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟ ; ಉತ್ತರ ಕನ್ನಡದ ಆರತಿ, ರಾಯಚೂರಿನ ವೆಂಕಟೇಶ್ ಆಯ್ಕೆ

  ಇನ್ನು, ಬಾಂಬ್​ ಇಟ್ಟ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಸಿಬಿ ಡಿಸಿಪಿ ಲಕ್ಷ್ಮೀ ಗಣೇಶ್​ ನೇತೃತ್ವದಲ್ಲಿ 3 ತನಿಖಾ ತಂಡಗಳು ಹುಡುಕಾಟ ಆರಂಭಿಸಿವೆ. ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ಮತ್ತು ತಂಡ ಹಾಗೂ ಸಿಸಿಬಿ ಇನ್ಸ್​ಪೆಕ್ಟರ್​​ ಶಿವಪ್ರಸಾದ್​ ನಾಯಕ್​ ಹಲವು ಆಯಾಮಗಳಲ್ಲಿ ತನಿಖೆ ಶುರುಮಾಡಿವೆ.

   
  First published: