ಟೌನ್​ಹಾಲ್​ನಲ್ಲಿ ಫ್ರೀ ಕಾಶ್ಮೀರ ಫಲಕ; ಯುವತಿ ಅರಿದ್ರಾ ಕುಟುಂಬವನ್ನು ವಿಚಾರಣೆಗೊಳಪಡಿಸಿದ ಪೊಲೀಸರು

ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಅರುದ್ರಾ ಮನೆಯಲ್ಲಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗುತ್ತಿದೆ.

ಬಂಧಿತ ಯುವತಿ ಅರಿದ್ರಾ.

ಬಂಧಿತ ಯುವತಿ ಅರಿದ್ರಾ.

  • Share this:
ಬೆಂಗಳೂರು (ಫೆಬ್ರವರಿ 21); ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾದ ಟೌನ್​ಹಾಲ್​ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅಮೂಲ್ಯ ಎಂಬ ಯುವತಿ ಪಾಕಿಸ್ತಾನದ ಪರ ಘೋಷಣೆ ಕೂಗುವ ಮೂಲಕ ಇದೀಗ ಸುದ್ದಿ ಕೇಂದ್ರದಲ್ಲಿದ್ದಾಳೆ. ಅಲ್ಲದೆ, ದೇಶದ್ರೋಹ ಪ್ರಕರಣ ಹೊತ್ತು ಜೈಲು ಪಾಲಾಗಿದ್ದಾಳೆ. ಆದರೆ, ಇಂದು ಅಮೂಲ್ಯ ಘೋಷಣೆ ವಿರೋಧಿಸಿ ಹಿಂದೂಪರ ಸಂಘಟನೆಗಳು ಟೌನ್​ಹಾಲ್​ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮತ್ತೊಂದು ಯುವತಿ ಗೊಂದಲ ಸೃಷ್ಟಿಸಿದ್ದಾಳೆ.

ಅಮೂಲ್ಯ ವಿರುದ್ಧ ಟೌನ್​ಹಾಲ್​ನಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ವೇಳೆ ಅರಿದ್ರಾ ಎಂಬ ಯುವತಿ, “ಕಾಶ್ಮೀರ, ಮುಸ್ಲಿಂ, ಲೈಂಗಿಕ ಅಲ್ಪ ಸಂಖ್ಯಾತ, ದಲಿತ ಫ್ರೀ” ಎಂಬ ಫಲಕವನ್ನು ಹಿಡಿದು ನಿಂತಿದ್ದಾಳೆ. ಆದರೆ, ಆಕೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾಳೆ ಎಂದು ಖಂಡಿಸಿರುವ ಹಿಂದೂಪರ ಸಂಘಟನೆಯವರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆಕೆಯನ್ನು ರಕ್ಷಿಸಿ ಕರೆದೊಯ್ದಿದ್ದಾರೆ.

ಅಲ್ಲದೆ, ಪೊಲೀಸರು ಅರುದ್ರ ಮನೆಯವರನ್ನೂ ಸಹ ವಿಚಾರಣೆಗೆ ಒಳಪಡಿಸಿದ್ದಾರೆ. ಅರುದ್ರಾ ತಂದೆ ನಾರಾಯಣ್ ಟಾಟಾ ಕನ್ಸಟೆನ್ಸಿ ಸರ್ವೀಸ್ ಸೀನಿಯರ್ ಮ್ಯಾನೇಜರ್ ಆಗಿದ್ದರೆ, ಆಕೆಯ ತಾಯಿ ರಮ್ಯಾ ಫ್ಯಾಶನ್ಸ್ ಡಿಸೈನರ್. ಇನ್ನೂ ಅಜ್ಜಿ ಕಾದಂಬರಿ ಮನೆಯಲ್ಲೇ ಇರುತ್ತಾರೆ ಎಂದು ತಿಳಿದುಬಂದಿದೆ.

ಎಡಪಂಥೀಯ ಚಿಂತನೆಗೆ ಪ್ರಭಾವಿಯಾಗಿ ಸಿವಿ ರಾಮನ್ ನಗರದಲ್ಲಿ ಗೆಳತಿಯರ ಜೊತೆ ಪಿಜಿ ಮಾಡಿದ್ದಳು ಎಂದು ತಿಳಿದು ಬಂದಿದೆ.

ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಅರುದ್ರಾ ಮನೆಯಲ್ಲಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಒದಿ : ಅಮೂಲ್ಯ ನಡೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲೇ ಮೊಳಗಿತು ಪಾಕಿಸ್ತಾನ್​ ಜಿಂದಾಬಾದ್​ ಘೋಷಣೆ?
First published: