• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಮರ್ಡರ್ ನಂತರ ಮೊಬೈಲ್​ನಲ್ಲಿ ಮಾತು! ಸಿಸಿ ಕ್ಯಾಮರಾ ಕೊಡ್ತು ಪ್ರಮುಖ ಸಾಕ್ಷಿ!

Crime News: ಮರ್ಡರ್ ನಂತರ ಮೊಬೈಲ್​ನಲ್ಲಿ ಮಾತು! ಸಿಸಿ ಕ್ಯಾಮರಾ ಕೊಡ್ತು ಪ್ರಮುಖ ಸಾಕ್ಷಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆಲಸಗಾರ ಕೊಲೆ (Murder) ಮಾಡಿ ಇದೆಲ್ಲವನ್ನ ಎಸ್ಕೇಪ್ ಮಾಡಿದ್ದ. ಇತ್ತ ಕೊಲೆ ಆರೋಪಿ ಜಾಡು ಹಿಡಿದು ಹೊರಟ ಪೊಲೀಸರಿಗೆ (Police) ಸಿಸಿ ಕ್ಯಾಮರಾ (CC Camera) ಕೊಲೆ ಸಂಬಂಧ ಪ್ರಮುಖ ಸಾಕ್ಷಿ ಕೊಟ್ಟಿದೆ.

  • Share this:

ಕೋಟಿಗಟ್ಟಲೆ ಹಣ, ಲೆಕ್ಕವಿಲ್ಲದಷ್ಟು ಚಿನ್ನ, ಬೆಳ್ಳಿ (Gold & Silver)  ಇದರ ಮೇಲೆ ಸದಾ ಹದ್ದಿನ ಕಣ್ಣಿಟ್ಟಿದ್ದ ಆ ವೃದ್ಧ. ಮನೆಯಲ್ಲಿ ವೃದ್ಧ ಒಂಟಿಯಾಗಿರೋದನ್ನೆ ಕಾಯ್ತಿದ್ದ ಆ ಕೆಲಸಗಾರ ಕೊಲೆ (Murder) ಮಾಡಿ ಇದೆಲ್ಲವನ್ನ ಎಸ್ಕೇಪ್ ಮಾಡಿದ್ದ. ಇತ್ತ ಕೊಲೆ ಆರೋಪಿ ಜಾಡು ಹಿಡಿದು ಹೊರಟ ಪೊಲೀಸರಿಗೆ (Police) ಸಿಸಿ ಕ್ಯಾಮರಾ (CC Camera) ಕೊಲೆ ಸಂಬಂಧ ಪ್ರಮುಖ ಸಾಕ್ಷಿ ಕೊಟ್ಟಿದೆ. ಅನ್ನ ಹಾಕಿದ ಮನೆಗೆ ಕನ್ನ ಹಾಕಿದ್ದ ಆ ಕೆಲಸಗಾರ. ಮನೆಯ ಹಿರಿತಲೆಯನ್ನ ಕೊಲೆ ಮಾಡಿ ಬ್ಯಾಗ ಗಳಲ್ಲಿ ಚಿನ್ನಾಭರಣ (Gold Jewellery) ಹೊತ್ತೋಯ್ದಿದ್ದ. ನಿನ್ನೆ ಚಾಮರಾಜಪೇಟೆಯಲ್ಲಿ (Chamarajpete) ವೃದ್ದ ಜುಗುರಾಜ್ ಕೊಲೆ (Murder) ಸಂಬಂಧ ಆರೋಪಿ ಬಿಜುರಾಮ್ ನ ಚಲನವಲನದ ಸಿಸಿಟಿವಿ ಪತ್ತೆಯಾಗಿದೆ. ಅಂಗಡಿಯಿಂದ ಜುಗುರಾಜ್ ರನ್ನ ಕರೆತಂದು ಮನೆಯಲ್ಲಿ ಬಿಟ್ಟಿದ್ದ.


ಆ ಬಳಿಕ ಮನೆ ಕೆಳಗಿನ ಕಾರಿಡಾರ್ ನಲ್ಲಿ ಬಿಜುರಾಜ್ ಸಾಕಷ್ಟು ಹೊತ್ತು ಓಡಾಡಿದ್ದಾನೆ. ರಾತ್ರಿ ವೃದ್ದ ಮಲಗಲು ರೆಡಿಯಾಗಿದ್ದಾಗ, ಕೈ, ಕಾಲು ಕಟ್ಟಿ, ಮುಖಕ್ಕೆ ಖಾರದ ಪಡಿ ಹಾಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಆ ಬಳಿಕ ಮನೆಯಲ್ಲಿದ್ದ, ಚಿನ್ನಾಭರಣ , ನಗದನ್ನ ನಾಲ್ಕು ಬ್ಯಾಗ್ ಗಳಲ್ಲಿ ತುಂಬಿಕೊಂಡು ಓಡಿಹೋಗುವ ದೃಶ್ಯ (Footage) ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.


ಕೊಲೆಗಾರನ‌ ಪತ್ತೆಗೆ ನಾಲ್ಕು ತಂಡಗಳ ರಚನೆ ಮಾಡಿರೋ‌ ಡಿಸಿಪಿ!


ಮನೆಯಲ್ಲಿ ಕೋಟಿ ಕೋಟಿ ಹಣ, ಒಡವೆಯನ್ನ ಇಡಲಾಗಿತ್ತು. ಈ ಲಾಕರ್ ಗಳ ಕೀಯನ್ನ ಜುಗುರಾಜ್ ಜೈನ್ ಇಟ್ಕೊಂಡಿರ್ತಿದ್ರು. ಇದನ್ನ ಚೆನ್ನಾಗಿ ಅರಿತಿದ್ದ ಬಿಜುರಾಮ್, ತಾತನ ಮುಗಿಸೋಕೆ ಪ್ಲಾನ್ ಮಾಡ್ಕೊಂಡಿದ್ದ. ಮನೆಯಲ್ಲಿ ಮಗ ಸೊಸೆ ಇಲ್ಲದ ದಿನ ಕಾದಿದ್ದು, ಮೊನ್ನೆ ರಾತ್ರಿ ಕೆಲಸ ಸಾಧಿಸಿದ್ದ.


ಇದನ್ನೂ ಓದಿ: MLC Poll: ವಿಜಯೇಂದ್ರಗೆ ಟಿಕೆಟ್ ಮಿಸ್; ಸರ್ಕಾರದ ಮೇಲೆ ಗಂಭೀರ ಪರಿಣಾಮ ಅಂದ್ರು ಹೆಚ್.ಡಿ.ಕುಮಾರಸ್ವಾಮಿ


6 ತಿಂಗಳಿಂದ ಕೆಲಸ ಮಾಡಿಕೊಂಡು ಕೊಲೆಗೆ ಸ್ಕೆಚ್


ಆರು ತಿಂಗಳಿನಿಂದ ಇವರ ಜೊತೆಯೇ ಕೆಲಸ ಮಾಡಿಕೊಂಡು ಸ್ಕೆಚ್ (Sketch) ಹಾಕಿದ್ದ. ಎಲೆಕ್ಟ್ರಾನಿಕ್ಸ್ ಅಂಗಡಿ (Electronic Shop) ಜೊತೆಗೆ ಲೇವಾದೇವಿ ವ್ಯವಹಾರ ಮಾಡುತ್ತಿದ್ದ ಬಗ್ಗೆ ಸಹ ಆರೋಪಿಗೆ ಗೊತ್ತಿತ್ತು. ಬ್ಯಾಗ್ ತುಂಬುವಷ್ಟು ಹಣ ಒಡವೆ ತುಂಬಿಕೊಂಡು, ಉಳಿದ ಹಣ ಬೆಳ್ಳಿ ಹಾಗೆಯೇ ಬಿಟ್ಟು ಪರಾರಿಯಾಗಿದ್ದಾನೆ. ಇನ್ನು ಸಿಸಿ ಕ್ಯಾಮರಾ ಜಾಡು ಹಿಡಿದು ಹೋದ ಪೊಲೀಸರಿಗೆ (Police) ಮೆಜೆಸ್ಟಿಕ್ ನಿಂದ ಜೈಪುರಕ್ಕೆ (Jaipura) ರೈಲಲ್ಲಿ‌ ಆರೋಪಿ ಹೋಗರೋದು ಗೊತ್ತಾಗಿದೆ.


ಇದನ್ನೂ ಓದಿ: Bengaluru Crime News: ಕಣ್ಣಿಗೆ ಖಾರದಪುಡಿ ಹಾಕಿ ಉಸಿರುಗಟ್ಟಿಸಿ ವೃದ್ಧರ ಕೊಲೆ, ಕೆಜಿಗಟ್ಟಲೆ ಚಿನ್ನ ಬೆಳ್ಳಿ ದರೋಡೆ!


ಸದ್ಯ ಕೊಲೆ ಪ್ರಕರಣ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್, ನಾಲ್ಕು ವಿಶೇಷ ತಂಡ ರಚಿಸಿದ್ದಾರೆ.. ಆರೋಪಿ ಬಿಜುರಾಮ್ ಗಾಗಿ ಸ್ಥಳೀಯ ಪೊಲೀಸರ ನೆರವಿನಿಂದ ರಾಜಸ್ಥಾನ, ಗುಜರಾತ್ ಗಳಲ್ಲಿ ಹುಡುಕಾಟ ನಡೆಸಲಾಗ್ತಿದೆ. ಸದ್ಯ ಆರೋಪಿ ಬಗ್ಗೆ ಈಗಾಗಲೇ ಕೆಲವು ಮಾಹಿತಿ ಸಿಕ್ಕಿದ್ದು, ಇನ್ನೆರಡು ದಿನದಲ್ಲಿ ಆರೋಪಿಯನ್ನ ಬಂಧಿಸೋ ವಿಶ್ವಾಸ ಪೊಲೀಸರು ವ್ಯಕ್ತ ಮಾಡ್ತಾ ಇದ್ದಾರೆ.


ಜೊತೆಗೆ ಇದುವರೆಗೆಗೂ ಚಾಮರಾಜಪೇಟೆ ಪೊಲೀಸರಿಗೆ ಎಷ್ಡು ಅಪಾರ್ಟ್ಮೆಂಟ್ ನಲ್ಲಿ ಚಿನ್ನ ಹಾಗೂ ಹಣ ಕಳ್ಳತನ ಆಗಿದೆ ಅನ್ನೋದು ನಿಖರವಾಗಿ ತಿಳಿದಿಲ್ಲ. ಆರೋಪಿ ಸಿಕ್ಕ ಬಳಿಕ‌ ಎಷ್ಟು ಚಿನ್ನ ಹಣ ಹೋಗಿದೆ ಅನ್ನೋದು ಗೊತ್ತಾಗಲಿದೆ.

top videos
    First published: