HOME » NEWS » State » POLICE ENQUIRED KEMPEGOWDA MOVIE PRODUCER SHANKAR GOWDA IN DRUGS CASE GVTV AE

ಮಾದಕವಸ್ತು ಪ್ರಕರಣ: ಕೆಂಪೇಗೌಡ ಸಿನಿಮಾದ ನಿರ್ಮಾಪಕನ ವಿಚಾರಣೆ ನಡೆಸಿದ ಪೊಲೀಸರು..!

ಜಾನ್ ಸಂಪರ್ಕವಿದ್ದ ಮಸ್ತಾನ್ ಮೂಲಕ ಡ್ರಗ್ಸ್ ತರಿಸಿಕೊಂಡು ಶಂಕರ ಗೌಡ ಪಾರ್ಟಿ ಆಯೋಜನೆ ಮಾಡ್ತಿದ್ದರು ಎನ್ನಲಾಗಿದೆ. ಹೀಗೆ ಪಾರ್ಟಿಗೆ ಬರ್ತಿದ್ದ ಕೆಲವರಿಗೆ ಡ್ರಗ್ಸ್ ಸಪ್ಲೈ ಮಾಡಲು ಶಂಕರ್ ಗೌಡ ಸೂಚಿಸುತ್ತಿದ್ದರು ಎಂಬ ಆರೋಪವಿದೆ.

news18-kannada
Updated:March 10, 2021, 2:47 PM IST
ಮಾದಕವಸ್ತು ಪ್ರಕರಣ: ಕೆಂಪೇಗೌಡ ಸಿನಿಮಾದ ನಿರ್ಮಾಪಕನ ವಿಚಾರಣೆ ನಡೆಸಿದ ಪೊಲೀಸರು..!
ಕೆಂಪೇಗೌಡ ಸಿನಿಮಾದ ನಿರ್ಮಾಪಕ ಶಂಕರ ಗೌಡ
  • Share this:
ಮಾದಕವಸ್ತು ಪ್ರಕರಣದಲ್ಲಿ ಸ್ಯಾಂಡಲ್​ವುಡ್ ನಿರ್ಮಾಪಕನಿಗೆ  ಖಾಕಿ ಫುಲ್ ಡ್ರಿಲ್. ಆರೋಪಿ ಜಾನ್ ಸಂಪರ್ಕ ಇರುವ ಹಿನ್ನಲೆಯಲ್ಲಿ ಸ್ಯಾಂಡಲ್​ವುಡ್ ನಿರ್ಮಾಪಕನನ್ನು ತೀವ್ರ ವಿಚಾರಣೆ ಮಾಡಲಾಗುತ್ತಿದೆ. ನಿರ್ಮಾಪಕನ ಜತೆ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನೂ ವಿಚಾರಣೆಯಲ್ಲಿ ಭಾಗಿಯಾಗುವಂತೆ ಹೇಳಲಾಗಿದೆ. ಮಸ್ತಾನ್ ಚಂದ್ರನಿಗೆ  ಡ್ರಗ್ಸ್ ಕೇಸ್ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಪೊಲೀಸರು ಗೊವಿಂದಪುರ ಡ್ರಗ್ ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿದ್ದಾರೆ . ಈ ನಡುವೆ ಮಸ್ತಾನ್ ಚಂದ್ರನ ವಿಚಾರಣೆ ವೇಳೆ ಶಂಕರ ಗೌಡನ ಹೆಸರು ಕೇಳಿ ಬಂದಿದ್ದು, ನಿನ್ನೆ ರಾತ್ರಿ ಮನೆ ಮತ್ತು ಕಚೇರಿ ಮೇಲೆ ರೇಡ್ ಮಾಡಲಾಗಿತ್ತು. ದಾಳಿ ಬಳಿಕ ಇಂದು ವಿಚಾರಣೆಗೆ ಹಾಜರಾಗಬೇಕೆಂದು ನೋಟೀಸ್ ನೀಡಿದ್ದ ಹಿನ್ನಲೆ ಗೋವಿಂದಪುರ ಠಾಣೆಗೆ ಕೆಂಪೇಗೌಡ  ಚಿತ್ರದ ನಿರ್ಮಾಪಕ ಶಂಕರ ಗೌಡ ವಿಚಾರಣೆಗೆ ಹಾಜರಾಗಿದ್ರು. ಬೆಳಗ್ಗೆಯಿಂದ ಸಂಜೆವರೆಗೂ ಶಂಕರ್ ಗೌಡ ಸೇರಿ ಐವರನ್ನ ಖುದ್ದು ಡಿಸಿಪಿ ಶರಣಪ್ಪ ವಿಚಾರಣೆ ಮಾಡಿದ್ದಾರೆ.

ವಿಚಾರಣೆ ನಂತರ  ಮಾದಕ ದ್ರವ್ಯ ಸೇವಿಸಲಾಗಿತ್ತಾ ಎಂಬುದನ್ನ ಪತ್ತೆ ಮಾಡಲು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿತ್ತುಗಿದೆಯಂತೆ. ಶಂಕರ್​ ಗೌಡ ಅವರ ಡಾಲರ್ಸ್ ಕಾಲೋನಿಯ ಮನೆ ಮತ್ತು ಕಚೇರಿ ಪರಿಶೀಲನೆ ಮಾಡಲಾಗಿದ್ದು, 3 ಮೊಬೈಲ್ ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿತ್ತು.ಶಂಕರ್ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಬಗ್ಗೆ  ಮಸ್ತಾನ್ ಬಾಯ್ಬಿಟ್ಟಿದ್ದು, ಆ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಶಂಕರ್ ಗೌಡ ಹೇಳಿಕೆ ನೀಡಿದ್ದಾರಂತೆ.

ಆದರೆ, ಜಾನ್ ಸಂಪರ್ಕವಿದ್ದ ಮಸ್ತಾನ್ ಮೂಲಕ ಡ್ರಗ್ಸ್ ತರಿಸಿಕೊಂಡು ಶಂಕರ ಗೌಡ ಪಾರ್ಟಿ ಆಯೋಜನೆ ಮಾಡ್ತಿದ್ದರು ಎನ್ನಲಾಗಿದೆ. ಹೀಗೆ ಪಾರ್ಟಿಗೆ ಬರ್ತಿದ್ದ ಕೆಲವರಿಗೆ ಡ್ರಗ್ಸ್ ಸಪ್ಲೈ ಮಾಡಲು ಶಂಕರ್ ಗೌಡ ಸೂಚಿಸುತ್ತಿದ್ದರು ಎಂಬ ಆರೋಪವಿದೆ. ಇದೇ ಕಾರಣಕ್ಕೆ ಶಂಕರ್ ಗೌಡ ಸಂಪರ್ಕದಲ್ಲಿದ್ದ  ಆತನ ಮ್ಯಾನೇಜರ್ ಭೀಮ, ಫಯೂಮ್, ವಿಕ್ಕಿ ಮಲ್ಹೋತ್ರ, ಮಸ್ತಾನ್ ಅವರನ್ನು ತೀವ್ರ ವಿಚಾರಣೆ ಮಾಡಲಾಗ್ತಿದೆ.

Mastan Chandra
ಮಸ್ತಾನ್ ಚಂದ್ರ (ಮಧ್ಯದಲ್ಲಿರುವವರು)


ಶಂಕರ ಗೌಡ ಅವರ ಮೊಬೈಲ್ ವಶಕ್ಕೆ ಪಡೆದಾಗ ಕೆಲ ಸಂದೇಶಗಳು, ಕರೆಗಳು , ವಾಟ್ಸ್ ಆ್ಯಪ್​ ಚಾಟಿಂಗ್ ಡಿಲೀಟ್ ಮಾಡಲಾಗಿದೆಯಂತೆ. ಸದ್ಯ ಮೊಬೈಲ್ ರಿಟ್ರಿವ್ ಮಾಡಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಈ ನಡುವೆ ವಿಚಾರಣೆ ಮುಂದುವರೆದಿದ್ದು ಸಾಕ್ಷಿ ಸಿಕ್ಕಿದ್ರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಶರಣಪ್ಪ ಸ್ಪಷ್ಟನೆ ನೀಡಿದ್ದಾರೆ.

ಮಸ್ತಾನ್ ಚಂದ್ರ ಹಾಗೂ ನಿರ್ಮಾಪಕ ಶಂಕರ ಗೌಡ ಅವರಿಗೆ ಸಂಪರ್ಕವಿರುವ ಕುರಿತು ಮಾಹಿತಿ ಸಿಕ್ಕಿದೆ. ಈ ಹಿನ್ನಲೆ ತಡರಾತ್ರಿ ಶಂಕರ ಗೌಡ ನಿವಾಸದ ಮೇಲೆ ಗೋವಿಂದಪುರ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ನೋಟಿಸ್ ನೀಡಿದ ಹಿನ್ನಲೆ ಶಂಕರ ಗೌಡ ಇವತ್ತು ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ಮುಂದುವರೆದಿದ್ದು ತನಿಖೆವೇಳೆ ಸಾಕ್ಷಿ ಲಭ್ಯವಾದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

ಇನ್ನು, ವಿಚಾರಣೆ ವೇಳೆ ಒಬ್ಬರೊಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದು, ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಬಹುತೇಕ ನಿರ್ಮಾಪಕ ಶಂಕರ್ ಗೌಡ ಮತ್ತು ಮಸ್ತಾನ್ ಚಂದ್ರನಿಗೆ ಡ್ರಗ್ಸ್ ಸುಳಿ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಸ್ಯಾಂಡಲ್​ವುಡ್​ನಲ್ಲಿ  ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದ  ಕೆಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
Published by: Anitha E
First published: March 10, 2021, 2:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories