Chaithra Kundapura: ಕಲಬುರಗಿಗೆ ತೆರಳುತ್ತಿದ್ದ ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಕಲಬುರಗಿ ಜಿಲ್ಲಾಡಳಿತ ನಿಷೇಧ ಹೇರಿದೆ. ಫೆ.27ರಿಂದ ಮಾ.3ರವೆಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ.

ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ

  • Share this:
ತಮ್ಮ ಭಾಷಣದಿಂದಲೇ ಪರಿಚಿತರಾಗಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ (Hindu Activist Chaithra Kundapura)  ಅವರನ್ನು ಶಹಬಾದ್ ಪೊಲೀಸರು (Shahabad Police) ವಶಕ್ಕೆ ಪಡೆದು, ಕಲಬುರಗಿ ನಗರ  ಪ್ರವೇಶಿಸದಂತೆ ತಡೆದಿದ್ದಾರೆ. ಇಂದು ಕಲಬುರಗಿ (Kalaburagi) ನಗರದಲ್ಲಿ ನಡೆಯುತ್ತಿರುವ ಆಳಂದ ಚಲೋ (Alanda Chalo) ಕಾರ್ಯಕ್ರಮದಲ್ಲಿ ಭಾಗಿಯಾಗಲು ಚೈತ್ರಾ ಕುಂದಾಪುರ ಆಗಮಿಸುತ್ತಿದ್ರು. ಯಾದಗಿರಿ (Yadagiri) ಮಾರ್ಗವಾಗಿ ಚೈತ್ರಾ ಕುಂದಾಪುರ ಆಗಮಿಸುತ್ತಿರುವ ವಿಷಯ ತಿಳಿದ ಪೊಲೀಸರು ಗಡಿ ದಾಟಿಸಿದ್ದಾರೆ. ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಮತ್ತು ಚೈತ್ರಾ ಕುಂದಾಪುರ ಅವರಿಗೆ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಡಾಳಿತ ನಿರ್ಬಂಧ ಹಾಕಿದೆ. ಈ ಹಿನ್ನೆಲೆ ಚೈತ್ರಾರನ್ನ ಮಾರ್ಗ ಮಧ್ಯೆ ತಡೆದಿದ್ದಾರೆ.

ಫೆಬ್ರವರಿ 27 ರಿಂದ ಮಾರ್ಚ್ 3ರವರೆಗೆ ಪ್ರಮೋದ್ ಮುತಾಲಿಕ್ ಮತ್ತು ಚೈತ್ರಾ ಕುಂದಾಪುರ ಇಬ್ಬರಿಗೂ ನಿಷೇಧ ಹೇರಿದೆ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

CRPC ಕಾಯ್ದೆ-1973ರ ಕಲಂ-132, 143, 144 ಹಾಗೂ 144ಎ ಅನ್ವಯ ನಿರ್ಬಂಧ ಹೇರಲಾಗಿದೆ ಎಂದು  ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  One Kidney Village: ಅಫ್ಘಾನ್​ನಲ್ಲಿ ನಿಂತಿಲ್ಲ ‘ತಾಲಿಬಾನ್​‘ ಅಟ್ಟಹಾಸ? ಹೆಂಡ್ತಿ, ಮಕ್ಕಳನ್ನ ಸಾಕಲು ಕಿಡ್ನಿ ಮಾರ್ತಿದ್ದಾರೆ ಜನ  

ಸಿದ್ದಲಿಂಗ ಸ್ವಾಮೀಜಿ ಅವರಿಗೂ ನಿರ್ಬಂಧ

ಜೇವರ್ಗಿ ತಾಲೂಕಿನ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಸಹ ಫೆ.27 ರಿಂದ ಮಾ.3ರ ವರೆಗೆ ಆಳಂದ ತಾಲೂಕು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು.

ಕೊನೆಗೂ ನ್ಯಾಯ ಸಿಕ್ಕಿದೆ ಅಂದ್ರು ಚೈತ್ರಾ ಕುಂದಾಪುರ

ತಮ್ಮ ಮೇಲೆ ನಿರ್ಬಂಧ ಹೇರಿರುವ ಕುರಿತು ಚೈತ್ರಾ ಕುಂದಾಪುರ ಫೇಸ್ ಬುಕ್ ನಲ್ಲಿ (Chaithra Kundapur Facebook) ಬರೆದುಕೊಂಡಿದ್ದಾರೆ. ಕೊನೆಗೂ ನ್ಯಾಯ ಗೆದ್ದಿದೆ. ಅದು ಕಲಬುರಗಿ ಜಿಲ್ಲೆಯ ಆಳಂದ.. ಅಲ್ಲೊಂದು ಪುರಾತನ ಶಿವಲಿಂಗ ಹೊಂದಿದ ದೇಗುಲವಿ(Shivalinga Temple)ದೆ. ಅದೇ ವಠಾರದಲ್ಲಿ ಒಂದು ದರ್ಗಾ(Darga)ವೂ ಇದೆ.

ಅಲ್ಲಿನ ಶಿವಲಿಂಗದ ಮೇಲೆ ಜಿಹಾದಿಗಳು ಇತ್ತೀಚಿಗೆ ಮಲ ಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ್ದರು. ಇದರ ವಿರುದ್ಧ ಹಿಂದೂ ಸಮಾಜ "ಆಳಂದ ಚಲೋ" ಹೋರಾಟ ಕೈಗೊಂಡು ಮಹಾಶಿವರಾತ್ರಿಯಂದು ಗಂಗಾ ಜಲದಿಂದ ಶುದ್ಧಿಗೊಳಿಸಿ, ಬಿಲ್ವಾರ್ಚನೆ ಮಾಡುವ ಸಂಕಲ್ಪ ಕೈಗೊಂಡಿತ್ತು.

ಹಿಂದೂಗಳ ಶುದ್ಧೀಕರಣಕ್ಕೆ ತಡೆ; ಚೈತ್ರಾ ಕುಂದಾಪುರ ಆರೋಪ

ಆದರೆ ಅದೇ ದಿನ ಅಲ್ಲಿನ ಮುಸ್ಲಿಮರು ತಾವೂ ಕಾರ್ಯಕ್ರಮ ಮಾಡುತ್ತೇವೆ ಎಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದರು. ಇದರ ಪರಿಣಾಮವಾಗಿ ಜಿಲ್ಲಾಧಿಕಾರಿಗಳು ಹಿಂದೂಗಳ ಶುದ್ಧಿ ಕಾರ್ಯಕ್ಕೆ ತಡೆ ತಂದು, ನನಗೆ, ಪ್ರಮೋದ್ ಮುತಾಲಿಕ್ ಜೀ ಮತ್ತು ಆಂದೋಲನ ಶ್ರೀಗಳಿಗೆ ಕಲಬುರ್ಗಿ ಜಿಲ್ಲೆಗೆ ಬಾರದಂತೆ ನಿಷೇದಾಜ್ಞೆ ಹೊರಡಿಸಿದರು.

ಹಿಂದೂ ಪರ ಸರ್ಕಾರಗಳೇ ಅಧಿಕಾರದಲ್ಲಿದ್ದರೂ ಇಂತಹದ್ದೊಂದು ಪರಿಸ್ಥಿತಿ ಎದುರಿಸಬೇಕಾಗಿ ಬಂದದ್ದು ದುರದೃಷ್ಟವೇ ಸರಿ. ಮುಸ್ಲಿಂ ಸಮುದಾಯವರ ಕಾರ್ಯಕ್ರಮಕ್ಕೆ ಅನುಮತಿ ನೀಡಿ ಹಿಂದೂಗಳ ಪೂಜೆಗೆ ಅನುಮತಿ ನಿರಾಕರಿಸಿದ ಜಿಲ್ಲಾಧಿಕಾರಿಯವರ ಆದೇಶದ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು ನಾಳೆ ಹಿಂದೂಗಳಿಗೂ ಪೂಜೆ ಸಲ್ಲಿಸಲು ಅವಕಾಶ ನೀಡಿದೆ. ಇದನ್ನು ತಡೆಯಲು ಹೊರಟವರು ಕಲಬುರ್ಗಿಯ ಪ್ರತಿ ಹಿಂದೂ ಮನೆಯನ್ನೂ ಜಾಗೃತಿಗೊಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Photo: ಉಕ್ರೇನ್​ನಿಂದ ಸ್ವದೇಶಕ್ಕೆ ಬಂದಿಳಿದ ಮಕ್ಕಳನ್ನು ಕಂಡು ಆನಂದಭಾಷ್ಪ ಸುರಿಸಿದ ಪೋಷಕರು

ಪ್ರಮೋದ್ ಮುತಾಲಿಕ್ ಕಿಡಿ

ತಮ್ಮ ಮೇಲೆ ನಿರ್ಬಂಧ ವಿಧಿಸಿರೋದನ್ನ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪತ್ರಿಕಾ ವರದಿಗಳನ್ನು ಹಂಚಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
Published by:Mahmadrafik K
First published: