HOME » NEWS » State » POLICE DETAINED 6750 KG NITROGEN AND LORRY DRIVER IN GADAG SKG LG

ಗದಗ ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6,750 ಕೆ.ಜಿ ಸ್ಪೋಟಕ ವಸ್ತು ಜಪ್ತಿ

ಕಲ್ಲು ಗಣಿಗಾರಿಕೆ ಮಾಡಲು ಅಕ್ರಮವಾಗಿ ಅಮೋನಿಯಂ ನೈಟ್ರೇಟ್ ಹಾಗೂ ಇತರೆ ವಸ್ತುಗಳನ್ನು ಬಳಸಿಕೊಂಡು ಸ್ಫೋಟ ಮಾಡ್ತಾಯಿದ್ರು ಎನ್ನುವ ಅನುಮಾನ ದಟ್ಟವಾಗಿದೆ

news18-kannada
Updated:October 14, 2020, 3:25 PM IST
ಗದಗ ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 6,750 ಕೆ.ಜಿ ಸ್ಪೋಟಕ ವಸ್ತು ಜಪ್ತಿ
ವಶಕ್ಕೆ ಪಡೆದಿರುವ ನೈಟ್ರೋಜನ್
  • Share this:
ಗದಗ(ಅ.14): ಗದಗ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಸ್ಪೋಟಕ ವಸ್ತು ಪತ್ತೆಯಾಗಿದ್ದು, ಹತ್ತಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಗದಗ ಜಿಲ್ಲೆಯಿಂದ ಆಂಧ್ರಪ್ರದೇಶ ಹಾಗೂ ರಾಜ್ಯದ ನಾನಾ ಕಡೇ ಅಕ್ರಮವಾಗಿ ಸ್ಫೋಟಕ ವಸ್ತುವನ್ನು ಸಾಗಿಸಲು ಹುನ್ನಾರ ನಡೆದಿತ್ತು. ಆದ್ರೆ ಪೊಲೀಸರ ಸಮಯ ಪ್ರಜ್ಞೆಯ ಕಾರ್ಯಾಚರಣೆಯಿಂದ ಸ್ಪೋಟಕ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಂಧ್ರಪ್ರದೇಶದ ಹಿಂದೂಪೂರ ಹಾಗೂ ಮಂಡ್ಯ ಜಿಲ್ಲೆಯ ಬಿಡದಿ ಗೆ ಅಕ್ರಮವಾಗಿ ಸಾಗಿಸುತ್ತಿದ್ದ ಅಮೋನಿಯ ನೈಟ್ರೇಟ್ ಗದಗ ಜಿಲ್ಲೆಯ ಮುಂಡರಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಡರಗಿ ತಾಲೂಕಿನ ಬಿಡನಾಳ ಗ್ರಾಮದ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಮುಂಡರಗಿ ಪೊಲೀಸರು ದಾಳಿ ಮಾಡಿದ್ದಾರೆ. 50 ಕೆಜಿ ತೂಕದ 135 ಚೀಲ, ಒಟ್ಟು 6750 ಕೆಜಿ ತೂಕದ ಅಮೋನಿಯಂ ನೈಟ್ರೇಟ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಅಮೋನಿಯಂ ನೈಟ್ರೇಟ್ ಹಾಗೂ 5 ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲಾರಿ ಚಾಲಕ ಅಶೋಕ ಎನ್ನುವಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು, ಬಸವರಾಜ್ ಅಂಗಡಿಯವರು ಗೊಬ್ಬರವನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ರು. ಹಾಗಾಗಿ ನಾನು ಗೊಬ್ಬರ ಅಂತಾ ತಿಳಿದುಕೊಂಡು ಹೋಗುತ್ತಿದ್ದೆ ಅಂತಾ ಪೊಲೀಸರ ಮುಂದೆ ಹೇಳಿದ್ದಾನೆ. ಆಗ ಪೊಲೀಸರು ಗದಗ ಜಿಲ್ಲೆಯ ಹಿರೇವಡ್ಡಟ್ಟಿ ಗ್ರಾಮದ ಬಳಿ ಅಕ್ರಮವಾಗಿ ಸಂಗ್ರಹಣೆ ಮಾಡಿ, ಸರಬರಾಜು ಮಾಡುತ್ತಿದ್ದ ಬಸವರಾಜ್ ಅಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ನಡೆಸಲಾಗುತ್ತಿದೆ ಅಂತಾರೆ ಎಸ್ಪಿ ಯತೀಶ ಎನ್ ಅವರು.

ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾದ ಧಾರವಾಡ ಜಿಲ್ಲಾಡಳಿತ; ಸ್ಥಳದಲ್ಲಿಯೇ ಪರಿಹಾರ ನೀಡಿದ ಡಿಸಿ

ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿ ಸಾಕಷ್ಟು ಸ್ಟೋನ್ ಕ್ರಷರ್ ಮೈನಿಂಗ್ ನಡೆಸುತ್ತಾರೆ. ಕಪ್ಪತ್ತಗುಡ್ಡ ವನ್ಯಜೀವಿ ದಾಮವಾದ ಮೇಲೆ ಕ್ರಷರ್ ಮಾಲೀಕರಿಗೆ ನೋಟಿಸ್ ಸಹ ನೀಡಿ ಗಣಿಗಾರಿಕೆ ಮಾಡೋದನ್ನು ಸ್ಟಾಪ್ ಮಾಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹ ನೋಟಿಸ್ ಸಹ‌ ನೀಡಿದೆ. ಆದ್ರೆ ಇಷ್ಟೊಂದು ದೊಡ್ಡ ಪ್ರಮಾಣದ ಅಮೋನಿಯ ನೈಟ್ರೇಟ್ ಸಂಗ್ರಹಣೆ ಯಾಕೇ ಮಾಡಿಕೊಂಡಿದ್ರು ಎನ್ನುವ ಸಂಶಯ ಕಾಡುತ್ತಿದೆ.

ಕಲ್ಲು ಗಣಿಗಾರಿಕೆ ಮಾಡಲು ಅಕ್ರಮವಾಗಿ ಅಮೋನಿಯಂ ನೈಟ್ರೇಟ್ ಹಾಗೂ ಇತರೆ ವಸ್ತುಗಳನ್ನು ಬಳಸಿಕೊಂಡು ಸ್ಫೋಟ ಮಾಡ್ತಾಯಿದ್ರು ಎನ್ನುವ ಅನುಮಾನ ದಟ್ಟವಾಗಿದೆ. ಹಾಗೂ ಗದಗ ಜಿಲ್ಲೆಯಿಂದ  ಆಂದ್ರಪ್ರದೇಶ ಹಾಗೂ ಮಂಡ್ಯ ಜಿಲ್ಲೆ ಸೇರಿದಂತೆ ನಾನಾ ಕಡೇ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನುವ ಅನುಮಾನ ದಟ್ಟವಾಗಿದೆ. ಹೀಗಾಗಿ ಮುಂಡರಗಿ ಪೊಲೀಸರು ಸಮಗ್ರವಾದ ತನಿಖೆ ಮಾಡಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
Youtube Video

ಒಟ್ಟಿನಲ್ಲಿ ಭಾರೀ ಪ್ರಮಾಣದ ಸ್ಪೋಟಕ ವಸ್ತು ಗದಗ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಸಮಗ್ರ ತನಿಖೆ ಮಾಡಿ, ಇದರ ಮೂಲವನ್ನು ಪತ್ತೆ ಮಾಡಬೇಕಾಗಿದೆ.
Published by: Latha CG
First published: October 14, 2020, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories