ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿವೆ 25 ಸಾವಿರ ಹುದ್ದೆಗಳು


Updated:March 13, 2018, 8:10 PM IST
ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿವೆ 25 ಸಾವಿರ ಹುದ್ದೆಗಳು
ಪ್ರಾತಿನಿಧಿಕ ಚಿತ್ರ

Updated: March 13, 2018, 8:10 PM IST
- ಕಿರಣ್ ಕೆ.ಎನ್., ನ್ಯೂಸ್18 ಕನ್ನಡ

ಬೆಂಗಳೂರು(ಮಾ. 13): ರಾಜ್ಯದಲ್ಲಿ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹಲ್ಲೆ, ಕಳ್ಳತನ, ದರೋಡೆ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಆದರೆ, ಕಾನೂನು ಪಾಲನೆಯನ್ನು ನೋಡಿಕೊಳ್ಳಬೇಕಾದ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ತೀವ್ರಮಟ್ಟದಲ್ಲಿರುವ ಅಂಶ ಬೆಳಕಿಗೆ ಬಂದಿದೆ. ವರದಿಯೊಂದರ ಪ್ರಕಾರ, ಪೊಲೀಸ್ ಇಲಾಖೆಯಲ್ಲಿ 25 ಸಾವಿರ ಹುದ್ದೆಗಳು ಖಾಲಿ ಇವೆ. ಇಲಾಖೆಯ ಎಲ್ಲಾ ವಿಭಾಗಗಳಲ್ಲೂ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಪೊಲೀಸ್ ಕಾನ್ಸ್​ಟೆಬಲ್ ಹುದ್ದೆಗಳ ಪ್ರಮಾಣವೇ ಸುಮಾರು 8 ಸಾವಿರದಷ್ಟಿವೆ. ಎಎಸ್​ಐ ಹುದ್ದೆಗಳೂ 661 ಹುದ್ದೆಗಳು ಖಾಲಿ ಇವೆ. ಉನ್ನತ ಮಟ್ಟದಲ್ಲಿ ಎಡಿಜಿಪಿ 3, ಐಜಿಪಿ 10, ಡಿಐಜಿಪಿ 10 ಹುದ್ದೆಗಳು ಖಾಲಿ ಇವೆ.

ಅಗತ್ಯ ಸಿಬ್ಬಂದಿ ನೇಮಕಕ್ಕೆ ರಾಜ್ಯ ಸರಕಾರ ಹಿಂದೇಟು ಹಾಕುತ್ತಿದೆ. ಈಗಿರುವ ಸಿಬ್ಬಂದಿ ಓವರ್​ಡ್ಯೂಟಿ ಮಾಡುವುದು ಅನಿವಾರ್ಯವಾಗಿದೆ. ಆದರೆ, ಗೃಹ ಸಚಿವ ರಾಮಲಿಂಗ ರೆಡ್ಡಿ ಅವರು ಈ ಸಮಸ್ಯೆಗೆ ಹಿಂದಿನ ಸರಕಾರ ಕಾರಣ ಎಂದು ಬೊಟ್ಟು ಮಾಡಿದ್ದಾರೆ. ಪ್ರತೀ ವರ್ಷವೂ 2-3 ಸಾವಿರ ಪೊಲೀಸರು ನಿವೃತ್ತರಾಗುತ್ತಾರೆ. ವರ್ಷ ವರ್ಷವೂ ಇವರ ಹುದ್ದೆಯ ನೇಮಕಾತಿ ಪ್ರಕ್ರಿಯೆ ಆಗಬೇಕು. ಆದರೆ, ಹಿಂದಿನ ಸರಕಾರವು ನೇಮಕಾತಿ ಮಾಡದೇ ಇದ್ದದ್ದರಿಂದ ಈ ಸಮಸ್ಯೆ ಉದ್ಭವಿಸಿದೆ. ನಮ್ಮ ಸರಕಾರ ಈಗಾಗಲೇ 31 ಸಾವಿರ ಹುದ್ದೆ ಭರ್ತಿಗೊಳಿಸಿದ್ದೇವೆ. ಬಾಕಿ ಉಳಿದಿರುವ ಹುದ್ದೆಗಳನ್ನೂ ಶೀಘ್ರದಲ್ಲೇ ಭರ್ತಿಗೊಳಿಸಲಾಗುವುದು ಎಂದು ರಾಮಲಿಂಗ ರೆಡ್ಡಿ ಭರವಸೆ ನೀಡಿದ್ದಾರೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ