Home Minister Araga Jnanendra: ಸಣ್ಣಪುಟ್ಟ ತಪ್ಪಿಗೂ ರೌಡಿಪಟ್ಟಿಗೆ ಸೇರಿದವರ ಹೆಸರು ಕೈಬಿಡಲು ತೀರ್ಮಾನ; ಗೃಹ ಸಚಿವ ಅರಗ ಜ್ಞಾನೇಂದ್ರ

ರಾಜ್ಯದಾದ್ಯಂತ ಸಣ್ಣಪುಟ್ಟ ಚಳುವಳಿಗಾರರ ಮೇಲೆ ರೌಡಿಶಿಟ್ ಹಣೆ ಪಟ್ಟಿ ಕಟ್ಡಿದ್ದಾರೆ. ಇದರಲ್ಲಿ ಯಾವುದೇ ಬೇರೆ ಉದ್ದೇಶ ಇಲ್ಲ. ಜೊತೆಗೆ ರಾಜಕೀಯ ಕಾರಣಕ್ಕೂ ನಾವು ಹೀಗೆ ಮಾಡ್ತಿಲ್ಲ. ಇದನ್ನು ನಿಗದಿತ ದಿನಾಂಕದೊಳಗೆ ಚಾರ್ಜ್ ಶೀಟ್ ಸಲ್ಲಿಕೆಗೆ ಮುಂದಾಗಬೇಕು ಎಂದರು.

ಗೃಹ ಸಚಿವ ಅರಗ ಜ್ಞಾನೇಂದ್ರ

ಗೃಹ ಸಚಿವ ಅರಗ ಜ್ಞಾನೇಂದ್ರ

 • Share this:
  ಬೆಂಗಳೂರು: ಸಣ್ಣಪುಟ್ಟ ಘಟನೆಯಲ್ಲಿ ಭಾಗಿಯಾದವರನ್ನೂ ರೌಡಿಪಟ್ಟಿಗೆ (Rowdy Sheet) ಸೇರಿಸಲಾಗಿದೆ. ಅವರೇನು ಸಮಾಜಘಾತುಕ ಕೆಲಸ ಮಾಡಿಲ್ಲ. ಕಾನೂನುಭಂಗ ಉಂಟು ಮಾಡಿಲ್ಲ. ಅಂತಹವರ ಮೇಲೆ ರೌಡಿಶೀಟರ್ ಓಪನ್ ಮಾಡಲಾಗಿದೆ. ಈ ರೀತಿಯಲ್ಲಿ ಸಾವಿರಾರು ರೌಡಿಗಳಿದ್ದಾರೆ. ಇಂತಹವರನ್ನ ರೌಡಿ ಪಟ್ಟಿಯಿಂದ ಕೈ ಬಿಡಲು ಪೊಲೀಸ್ ಸಮಾವೇಶದಲ್ಲಿ ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ (Home Minister Araga Jnanendra) ಹೇಳಿದರು. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಜಾನುವಾರು ಕಡಿಯುವ ಉದ್ದೇಶಕ್ಕೆ ಸಾಗಾಣೆ ಮಾಡುವುದಕ್ಕೆ ಇನ್ನು ಮುಂದೆ ಕಡಿವಾಣ ಹಾಕಲಾಗುವುದು. ಸಾಗಾಣೆ ಮಾಡದಂತೆ ತಡೆಗಟ್ಟಲಾಗುವುದು ಎಂದರು.

  ಕ್ರೈಮ್ ಮೀಟಿಂಗ್ ಗಳು ಪ್ರತಿತಿಂಗಳು ನಡೆಸಬೇಕು. ಎಫ್​ಐಆರ್ ಹಾಕಿ ನಿಗಧಿತ ದಿನಗಳಲ್ಲಿ ಚಾರ್ಜ್ ಶೀಟ್ ಹಾಕುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಲಾಗಿದೆ. ಹಾಗೆಯೇ ಶಿಕ್ಷೆ ಪ್ರಮಾಣ ಹೆಚ್ಚುವಂತೆ ಮಾಡಬೇಕು. ಸ್ಪೋಟಕ ವಸ್ತು ತಯಾರಿಕೆ ಮತ್ತು ಸಾಗಾಣಿಕೆ ನಿಗಾ ವಹಿಸಬೇಕು. ಲಾಜಿಕಲ್ ಎಂಡ್ ಗೆ ಹೋಗಬೇಕು. ಸಮಾಜ ವಿದ್ರೋಹಿ ಕೈಗಳಿಗೆ ಸಿಗದಂತೆ ತಡೆದು ಮಟ್ಟ ಹಾಕಬೇಕು. ಪೊಲೀಸ್ ಬೀಟ್ ಸಿಸ್ಟಂ ಬಲಪಡಿಸಬೇಕು. ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಬೀಟ್ ಪರಿಣಾಮಕಾರಿಯಾಗುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

  ಎನ್ ಐ ಎ ಘಟಕ ಬೆಂಗಳೂರು ಅಥವಾ ಮಂಗಳೂರಿನಲ್ಲಿ ತೆರೆಯಲು ಕೇಂದ್ರಕ್ಕೆ ಶಿಫಾರಸು ಮಾಡ್ತೇವೆ. ವಿದೇಶಿಗರು ರಾಜ್ಯದಲ್ಲಿ ಹಲವರು ಮಂದಿ ಅನಧಿಕೃತವಾಗಿ ನೆಲೆಸಿದ್ದಾರೆ. ಡ್ರಗ್ಸ್ ಹಾಗೂ ಅನಧಿಕೃತ ಚಟುವಟಿಕೆಗಳಲ್ಲಿ ಭಾಗಿಯಾಗ್ತಿದ್ದಾರೆ. ವೀಸಾ ಅವಧಿ, ಎಲ್ಲಿಯವರು, ಏನು ಕೆಲಸ ಮಾಡ್ತಾರೆ ಎಲ್ಲವನ್ನು ಸರ್ವೆ ಮಾಡಲು ತೀರ್ಮಾನ ಮಾಡಿದ್ದೇವೆ. ಅವಧಿಬದ್ಧವಾಗಿ ಸರ್ವೆ ಮಾಡಲು ಸೂಚಿಸಿದ್ದೇವೆ. ಆಘ್ಘಾನ್ ರಾಜಕೀಯ ವ್ಯತ್ಯಾಸದ ಬಳಿಕ ಅಕ್ರಮ ವಿದೇಶಿಗರ ಬಗ್ಗೆ ಮಾಹಿತಿ ಕಲೆ ಹಾಕಲು ಹೇಳಿದ್ದೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

  ಸಣ್ಣಪುಟ್ಟ ಘಟನೆಯಲ್ಲಿ ಭಾಗಿಯಾದವರನ್ನೂ ರೌಡಿಪಟ್ಟಿಗೆ ಸೇರಿಸಲಾಗಿದೆ. ಅವರೇನು ಸಮಾಜಘಾತುಕ ಕೆಲಸ ಮಾಡಿಲ್ಲ. ಕಾನೂನುಭಂಗ ಉಂಟು ಮಾಡಿಲ್ಲ. ಅಂತಹವರ ಮೇಲೆ ರೌಡಿಶೀಟರ್ ಓಪನ್ ಮಾಡಲಾಗಿದೆ. ಈ ರೀತಿಯಲ್ಲಿ ಸಾವಿರಾರು ರೌಡಿಗಳಿದ್ದಾರೆ. ಇಂತಹವರನ್ನ ರೌಡಿ ಪಟ್ಟಿಯಿಂದ ಕೈ ಬಿಡಲಾಗುವುದು. ಅನೇಕ ಮಾನದಂಡ ಇಟ್ಟು ರೌಡಿ ಶೀಟರ್ ಪಟ್ಟಿ ಪರಾಮರ್ಶೆ ಮಾಡುತ್ತೇವೆ. ಆ ಮಾನದಂಡದ ಆಧಾರದಲ್ಲಿ ಮಾತ್ರ ಅದನ್ನು ತೆಗೆಯುತ್ತೇವೆ. ಎಸ್.ಪಿ ಗಳ ಸುಪರ್ದಿಯಲ್ಲಿ ಪರಾಮರ್ಶೆ ಮಾಡಲಾಗುತ್ತೆ. ಹೀಗಾಗಿ ರೌಡಿಶೀಟರ್ ಪಟ್ಟಿಯನ್ನು ಪರಾಮರ್ಶೆ ಮಾಡುವುದಕ್ಕೆ ನಿಯಮಾವಳಿ ಅಡಿಯಲ್ಲಿ ಅವಕಾಶವಿದೆ. ರಾಜ್ಯದಾದ್ಯಂತ ಸಣ್ಣಪುಟ್ಟ ಚಳುವಳಿಗಾರರ ಮೇಲೆ ರೌಡಿಶಿಟ್ ಹಣೆ ಪಟ್ಟಿ ಕಟ್ಡಿದ್ದಾರೆ. ಇದರಲ್ಲಿ ಯಾವುದೇ ಬೇರೆ ಉದ್ದೇಶ ಇಲ್ಲ. ಜೊತೆಗೆ ರಾಜಕೀಯ ಕಾರಣಕ್ಕೂ ನಾವು ಹೀಗೆ ಮಾಡ್ತಿಲ್ಲ. ಇದನ್ನುನಿಗದಿತ ದಿನಾಂಕದೊಳಗೆ ಚಾರ್ಜ್ ಶೀಟ್ ಸಲ್ಲಿಕೆಗೆ ಮುಂದಾಗಬೇಕು ಎಂದರು.

  ಇದನ್ನು ಓದಿ: COVID Vaccine: ನವೆಂಬರ್ ಅಂತ್ಯಕ್ಕೆ ಎಲ್ಲರಿಗೂ ಲಸಿಕೆ ನೀಡುವ ಗುರಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

  ಕರಾವಳಿ ಪ್ರದೇಶದಲ್ಲಿ ತುಂಬಾ ವಿಚಿತ್ರಕಾರಕ ಶಕ್ತಿಗಳು ತಲೆ ಎತ್ತುವ ಸ್ಥಿತಿ ಇದೆ. ಗೋವಾದಿಂದ ಕೇರಳ ಬಾರ್ಡರ್ ವರೆಗೆ ಮೀನುಗಾರರ ವೇಷದಲ್ಲಿ ಬಂದು ಬಾಂಬೆಯಲ್ಲಿ ನಡೆಸಿದ ಕೃತ್ಯ ಎಲ್ಲರಿಗೂ ಗೊತ್ತಿದೆ. ಕರಾವಳಿ ಕಾವಲು ಪಡೆ ಇನ್ನಷ್ಡು ಬಲಗೊಳ್ಳಬೇಕು ಎಂದು ಸೂಚನೆ ನೀಡಿದ್ದೇವೆ. ಕರಾವಳಿ ಕಾವಲು ಪಡೆಗೆ ಇನ್ನಷ್ಟು ಸ್ಪೀಡ್ ಬೋಟ್​ ಗಳನ್ನು ಒದಗಿಸಲು ಸಿದ್ದರಾಗಿದ್ದೇವೆ. ದೇಶ ವಿರೋಧಿ ಕೃತ್ಯ, ದಂಧೆ ನಡೆಸುವವರ ಮೇಲೆ ಕಣ್ಗಾವಲು ಇಡಲು ಹೇಳಿದ್ದೇವೆ. ಪಟ್ಟಣ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥಿತ ಭಂಗ ಮಾಡುವ ರೌಡಿ ಪಡೆಗಳನ್ನು ಮೆಟ್ಟಿ ನಿಲ್ಲಬೇಕು ಅಂತ ಹೇಳಿದ್ದೇವೆ. ಜನರ ನೆಮ್ಮದಿ ಬದುಕಿಗೆ ತೊಂದರೆ ಉಂಟು ಮಾಡುವ ದುಷ್ಕರ್ಮಿಗಳನ್ನು ಮಟ್ಡ ಹಾಕಲು ಸೂಚಿಸಿದ್ದೇವೆ ಎಂದರು.

  ಬೆಂಗಳೂರು ನಗರದಲ್ಲಿ ಅಕ್ರಮ ಕ್ಯಾಸಿನೋಗಳು ಹೆಚ್ಚಾಗಿದ್ದು, ಎಲ್ಲೆಲ್ಲಿ ಅಕ್ರಮ ಕ್ಯಾಸಿನೋ ಕ್ಲಬ್ ಮಟ್ಕಾ ನಡೆಯುತ್ತಿದೆ. ಆಯಾ ಸ್ಟೇಷನ್ ಪೊಲೀಸ್ ಅಧಿಕಾರಿಗಳನ್ನೇ ಹೊಣೆ ಮಾಡ್ತೀವಿ. ಅಕ್ರಮ ತಡೆಯದಿದ್ದರೆ ಅಂಥ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡ್ತೀವಿ ಎಂದು ಹೇಳಿದರು.
  Published by:HR Ramesh
  First published: