Ayodhya Verdict: ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಪೊಲೀಸ್​​​ ಇಲಾಖೆ ಮಹತ್ವದ​ ಸೂಚನೆ

ಇದರ ಜತೆಗೆ ಸೋಷಿಯಲ್​​ ಮೀಡಿಯಾ ಬಳಕೆದಾರರಿಗೆ ಪೊಲೀಸರು ಮಹತ್ವದ ಸೂಚನೆ ನೀಡಿದ್ದಾರೆ. ಒಂದು ವೇಳೆ ಈ ಸೂಚನೆ ಪಾಲಿಸದೆ ಸೋಷಿಯಲ್​​ ಮೀಡಿಯಾದಲ್ಲಿ ಮನಬದಂತೆ ಗೀಚಿಸಿದರೆ ಜೈಲು ಸೇರಬೇಕಾಗುತ್ತದೆ.

news18-kannada
Updated:November 9, 2019, 9:32 AM IST
Ayodhya Verdict: ಸೋಷಿಯಲ್‌ ಮೀಡಿಯಾ ಬಳಕೆದಾರರಿಗೆ ಪೊಲೀಸ್​​​ ಇಲಾಖೆ ಮಹತ್ವದ​ ಸೂಚನೆ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ನ.09): ಇಂದು ಸುಪ್ರೀಂಕೋರ್ಟ್​​ ವಿವಾದಿತ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಸಂಬಂಧ ಅಂತಿಮ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ. ಹಾಗಾಗಿ ಇಡೀ ದೇಶದ ಚಿತ್ತ ಸುಪ್ರೀಂಕೋರ್ಟ್​​ ತೀರ್ಪಿನತ್ತ ನೆಟ್ಟಿದೆ. 69 ವರ್ಷಗಳ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣಕ್ಕೆ ಇಂದೇ ತೆರೆ ಬೀಳುವ ಸಾಧ್ಯತೆಯಿದೆ. ಸದ್ಯದಲ್ಲೇ ನಿವೃತ್ತಿಯಾಗಲಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಈ ತೀರ್ಪು ನೀಡಲಿದೆ. ನ್ಯಾಯಪೀಠ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದ್ದು, ಪೊಲೀಸ್​​ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್​​ ಏರ್ಪಡಿಸಿದೆ. ಇದರ ಜತೆಗೆ ಸೋಷಿಯಲ್​​ ಮೀಡಿಯಾ ಬಳಕೆದಾರರಿಗೆ ಪೊಲೀಸರು ಮಹತ್ವದ ಸೂಚನೆ ನೀಡಿದ್ದಾರೆ. ಒಂದು ವೇಳೆ ಈ ಸೂಚನೆ ಪಾಲಿಸದೆ ಸೋಷಿಯಲ್​​ ಮೀಡಿಯಾದಲ್ಲಿ ಮನಬದಂತೆ ಗೀಚಿಸಿದರೆ ಜೈಲು ಸೇರಬೇಕಾಗುತ್ತದೆ.

ಹೀಗಿವೆ ಪೊಲೀಸ್​​ ಇಲಾಖೆ ಮಹತ್ವದ ಸೂಚನೆಗಳು:‘


  • ರಾಮ ಜನ್ಮಭೂಮಿ - ಬಾಬ್ರೀ ಮಸೀದಿ ವಿವಾದದ ಕುರಿತು ಸುಪ್ರೀಂಕೋರ್ಟ್​ ನೀಡುವ ತೀರ್ಪಿನ ಬಗ್ಗೆ ಫೇಸ್​​ಬುಕ್‌, ಇನ್‌ಸ್ಟಾಗ್ರಾಮ್, ವಾಟ್ಸಾಪ್‌, ಟ್ವಿಟ್ಟರ್ ಮತ್ತು ಇನ್ನಿತರ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶ, ಪೋಸ್ಟ್‌ ಹಾಗೂ ಕಮೆಂಟ್‌ಗಳನ್ನು ಹಾಕಬಾರದು.

  • ಪೊಲೀಸ್​​ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾವಹಿಸಿದೆ. ಸುಪ್ರೀಂಕೋರ್ಟ್​ ಕೋರ್ಟ್​ ತೀರ್ಪಿನ ಹಿನ್ನೆಲೆಯಲ್ಲಿ ಸೋಷಿಯಲ್​​ ಮೀಡಿಯಾ ಬಳಕೆದಾರರಿಗೆ ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗಲಿದೆ.

  • ‌ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಸಂದೇಶ ರವಾನಿಸಬಾರದು. ಪೊಲೀಸ್​​ ಇಲಾಖೆ ಸೂಚನೆ ಬಗ್ಗೆ ಹಿರಿಯರು ತಮ್ಮ ಮಕ್ಕಳು, ಸಹೋದರ, ಸಹೋದರಿಯರು, ಅಕ್ಕಪಕ್ಕದವರು ಹಾಗೂ ಸಂಬಂಧಿಕರಿಗೆ ತಿಳಿಸಬೇಕು.

  • ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ವೀಡಿಯೋ ಪೋಸ್ಟ್‌ ಹಾಕುವಂತಿಲ್ಲ.
  • ಯಾವುದೇ ರಾಜಕೀಯ ಮತ್ತು ಧಾರ್ಮಿಕ ವಿಷಯದ ಬಗ್ಗೆ ನಿಂದನೀಯ ಸಂದೇಶಗಳನ್ನು ಕಳುಹಿಸಿದರೇ ಕಠಿಣ ಕ್ರಮ ಜರುಗಿಸಲಾಗುವುದು.

  • ರಾಮ ಜನ್ಮಭೂಮಿ ಮತ್ತು ಬಾಬ್ರೀ ಮಸೀದಿ ತೀರ್ಪು ಅಂತ್ಯಂತ ಗಂಭೀರ ವಿಚಾರ. ಸಾಮಾಜಿಕ ಜಾಲತಾಣದ ಬಳಕೆದಾರರು ಕಾನೂನು ಸುವ್ಯವಸ್ಥೆಗೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಂದೇಶ ಹರಿಬಿಡುವಂತಿಲ್ಲ.

  • ಗ್ರೂಪ್​​ನ ಸದಸ್ಯರು ಪ್ರಚೋದನಾತ್ಮಕ ಸಂದೇಶಗಳನ್ನು ವಿವಿಧ ಗ್ರೂಪ್‌ಗಳಿಗೆ ರವಾನಿಸಿದರೇ ಅದಕ್ಕೆ ಗ್ರೂಪ್ ಅಡ್ಮಿನ್‌ಗಳೇ ನೇರ ಹೊಣೆ.


ಇದನ್ನೂ ಓದಿ: Ayodhya Verdict: ಅಯೋಧ್ಯೆ ತೀರ್ಪು ಹಿನ್ನೆಲೆ, ರಾಜ್ಯಾದ್ಯಂತ ಬಿಗಿಭದ್ರತೆ; ಸೆಕ್ಷನ್ 144 ಜಾರಿ
---------------
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading