HOME » NEWS » State » POLICE DEPARTMENT NEVER TOLERATE OF ASSAULT ON MARSHALS AMID COVID 19 SAYS POLICE COMMISSIONER KAMAL PANT LG

ಮಾರ್ಷಲ್​ಗಳ ಮೇಲೆ ಹಲ್ಲೆ ಮಾಡಿದರೆ ಜೈಲು ಶಿಕ್ಷೆ; ಪೊಲೀಸ್ ಆಯುಕ್ತ ಕಮಲ್ ಪಂತ್​

ನಮ್ಮಲ್ಲಿ ಮತ್ತೆ ಕೊರೋನಾ ಸಂಖ್ಯೆ ಹೆಚ್ಚಳ ಆಗದಂತೆ ಕಠಿಣ ಕ್ರಮ ಮುಂದುವರೆಸಿಕೊಂಡು ಹೋಗಬೇಕಿದೆ. ಮಾರ್ಷಲ್ ಜೊತೆಯಲ್ಲಿ, ಪೊಲೀಸರೂ ಬರ್ತಾರೆ ಎನ್ನುವ ಭಯ ಜನರಲ್ಲಿ ಹುಟ್ಟಿದೆ. ಕೆಲವೊಮ್ಮೆ ಜನರು ನಮ್ಮ ಜೊತೆ ಗಲಾಟೆ ಮಾಡ್ತಾರೆ. ಅವರಿಗೆ ಅರ್ಥ ಮಾಡಿಸಬೇಕಾಗಿದೆ.

news18-kannada
Updated:November 6, 2020, 12:44 PM IST
ಮಾರ್ಷಲ್​ಗಳ ಮೇಲೆ ಹಲ್ಲೆ ಮಾಡಿದರೆ ಜೈಲು ಶಿಕ್ಷೆ; ಪೊಲೀಸ್ ಆಯುಕ್ತ ಕಮಲ್ ಪಂತ್​
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
  • Share this:
ಬೆಂಗಳೂರು(ನ.06): ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಇಂದು ನಗರದ ಟೌನ್​ಹಾಲ್​ನಲ್ಲಿ  ಸಭೆ ನಡೆಯಿತು. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕೊರೋನಾ ಸೋಂಕು ಹತೋಟಿಗೆ ಬರುತ್ತಿದೆ. ಆದರೆ ಬೆಂಗಳೂರು ಹೊರ ವಲಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿದೆ. ಟ್ವಿಟರ್, ಫೇಸ್‌ಬುಕ್‌ನಲ್ಲಿ ಜನ ಸಾಮಾನ್ಯರು ನಮ್ಮ ಗಮನಕ್ಕೆ ತರುತ್ತಿದ್ದಾರೆ. ಅತಿ ಹೆಚ್ಚು ಜನ ಸೇರುವ ಜಾಗದಲ್ಲಿ ಮಾಸ್ಕ್ ಹಾಕಿದ್ದಾರಾ ಎಂದು ತಪಾಸಣೆ ಮಾಡಬೇಕು. ಅದರ ಬದಲು ಕಾರಲ್ಲೇ ಒಬ್ಬರೇ ಇದ್ದರೂ ಅವರನ್ನ ನಿಲ್ಲಿಸಿ 15 ನಿಮಿಷ ವಿಚಾರಣೆ ಮಾಡಬೇಡಿ ಎಂದು ಹೇಳಿದರು.

ಮುಂದುವರೆದ ಅವರು, ಸಾರ್ವಜನಿಕರ ಜೊತೆ ಮಾತನಾಡುವಾಗ ಸಂಯಮದಿಂದ ಮಾತನಾಡಬೇಕು. ಅವರು ಉದ್ವೇಗದಿಂದ ಮಾತನಾಡಿದಾಗ, ನೀವು ತಾಳ್ಮೆ ಕಳೆದುಕೊಳ್ಳಬೇಡಿ. ಅವರಿಗೆ ಮಾಸ್ಕ್ ಹಾಕಿ ಅಂತ ಅರಿವು ಮೂಡಿಸಬೇಕು. ಕೆಲ ಬಡವರು ಇರುತ್ತಾರೆ, ಅವರಿಗೆ ಮಾಸ್ಕ್ ಹಾಕಿಕೊಳ್ಳುವ ಶಕ್ತಿ ಇರುವುದಿಲ್ಲ. ಮೂಗು, ಬಾಯಿ ಮುಚ್ಚಿಕೊಳ್ಳುವಂತೆ ಕರ್ಚೀಫ್ ಕಟ್ಟಿಕೊಂಡ್ರೂ ಅದೂ ಮಾಸ್ಕೇ. ಇದನ್ನ ಮಾರ್ಷಲ್ಸ್‌ಗಳಿಗೆ ತಿಳಿಸುವಂತೆ ಸೂಚಿಸಿದರು.

ಬಿಸಿಯೂಟ ಯೋಜನೆ ತಾತ್ಕಾಲಿಕ ಸ್ಥಗಿತ; ಯಾದಗಿರಿಯಲ್ಲಿ ಹಸಿವಿನಿಂದ ಬಳಲುತ್ತಿರುವ ಮಕ್ಕಳು

ಇದೇ ವೇಳೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಕೋವಿಡ್ ಸಂದರ್ಭದಲ್ಲಿ ಮಾರ್ಷಲ್​ಗಳು ಬೆಂಗಳೂರಿನ ಜನರ ಸೇವೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾರ್ಷಲ್ ಪಾತ್ರ ಚರ್ಚೆ ಮಾಡಲು ಸೇರಿದ್ದೇವೆ. ಬಿಬಿಎಂಪಿ ಕಚೇರಿಯಲ್ಲಿ ಸಭೆ ಮಾಡಿದಾಗ, ನಾನು ಮಾತನಾಡಲಾಗದೆ ಮಾಸ್ಕ್ ತೆಗೆದೆ. ಆದ್ರೆ ಮಾಸ್ಕ್ ಹಾಕುವಂತೆ ಆಯುಕ್ತರು ನನಗೆ ಸೂಚಿಸಿದರು ಎಂದರು.

ರಾಜ್ಯದಲ್ಲಿ ಸದ್ಯಕ್ಕೆ ಕೋವಿಡ್ ಸಂಖ್ಯೆ ಕಡಿಮೆಯಾಗ್ತಿದೆ. ನಮ್ಮ ಕಾರ್ಯಾಚರಣೆ ಇದಕ್ಕೆ ಕಾರಣ ಇರಬಹುದು. ಮಾರ್ಷಲ್ ಕೆಲಸದಿಂದ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ. ಸೋಂಕಿತರ ಸಂಖ್ಯೆ ಇನ್ನು ಮುಂದೆ ಕಡಿಮೆಯಾಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ. ಯೂರೋಪ್ ದೇಶಗಳಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದರಿಂದ ಮತ್ತೆ ಲಾಕ್ ಡೌನ್ ಮಾಡಲಾಗಿದೆ ಎಂದು ಹೇಳಿದರು.

ನಮ್ಮಲ್ಲಿ ಮತ್ತೆ ಕೊರೋನಾ ಸಂಖ್ಯೆ ಹೆಚ್ಚಳ ಆಗದಂತೆ ಕಠಿಣ ಕ್ರಮ ಮುಂದುವರೆಸಿಕೊಂಡು ಹೋಗಬೇಕಿದೆ. ಮಾರ್ಷಲ್ ಜೊತೆಯಲ್ಲಿ, ಪೊಲೀಸರೂ ಬರ್ತಾರೆ ಎನ್ನುವ ಭಯ ಜನರಲ್ಲಿ ಹುಟ್ಟಿದೆ. ಕೆಲವೊಮ್ಮೆ ಜನರು ನಮ್ಮ ಜೊತೆ ಗಲಾಟೆ ಮಾಡ್ತಾರೆ. ಅವರಿಗೆ ಅರ್ಥ ಮಾಡಿಸಬೇಕಾಗಿದೆ. ಯಾರಾದ್ರೂ ನಿಮ್ಮ ಮೇಲೆ ಕೈ ಮಾಡಿದರೆ ನಾವು ಸುಮ್ಮನೆ ಬಿಡೋದಿಲ್ಲ. ಅವರಿಗೆ ಕಾನೂನಿನ ರೀತಿಯಲ್ಲಿ ಜೈಲಿಗೆ ಕಳಿಸುವ ಕೆಲಸ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.
ನಮ್ಮಿಂದ ಕನಿಷ್ಠ 120 ಅಧಿಕಾರಿಗಳು, ಸಿಬ್ಬಂದಿಗಳು ಕೆಲಸ ಮಾಡ್ತಿದ್ದಾರೆ. ಟ್ರಾಫಿಕ್ ಪೊಲೀಸರನ್ನೂ ದಂಡ ಹಾಕಲು ಬಳಸುತ್ತೇವೆ. ಕೊರೋನಾ ತಡೆಯಲು ನಮ್ಮಿಂದ ಎಲ್ಲಾ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
Published by: Latha CG
First published: November 6, 2020, 12:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories