ಮುರುಘಾ ಸ್ವಾಮೀಜಿಗೆ (Murugha Shri) ಅತ್ಯಾಚಾರ ಕೇಸ್ (Rape Case) ಕಂಟಕ ಹೆಚ್ಚಾಗ್ತಿದೆ. ಅನಾರೋಗ್ಯದ ಕಾರಣದಿಂದ ಜಿಲ್ಲಾಸ್ಪತ್ರೆಗೆ ಸೇರಿ ಗಂಭೀರ ಸ್ಥಿತಿಯಲ್ಲಿದ್ದ ಸ್ವಾಮೀಜಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ (Bengaluru Jayadeva Hospital) ತೆರಳಲು ಸಜ್ಜಾಗಿದ್ದರು. ಏರ್ಲಿಫ್ಟ್ಗೂ (Airlift) ಸಿದ್ಧತೆ ನಡೆದಿತ್ತು. ಈ ನಡುವೆಯೇ ಚಿತ್ರದುರ್ಗ ಕೋರ್ಟ್ ಸ್ವಾಮೀಜಿಗೆ ಶಾಕ್ ಕೊಟ್ಟಿದೆ. ನ್ಯಾಯಾಲಯ ಮುರುಘಾ ಸ್ವಾಮೀಜಿಯನ್ನು ಮೂರು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ (Police Custody) ಒಪ್ಪಿಸಿದೆ. ಇದರಿಂದ ಬೇಸತ್ತ ಭಕ್ತನೊಬ್ಬ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಮುಂಭಾಗ ಹೈಡ್ರಾಮಾ ಮಾಡಿದ್ದಾನೆ. ಮೈಮೇಲೆ ಪೆಟ್ರೋಲ್ (Petrol) ಸುರಿದುಕೊಂಡು ನಾಟಕವಾಡಿದ್ದಾನೆ. ಆತನನ್ನು ತಿಪ್ಪೇರುದ್ರಸ್ವಾಮಿ ಅಂತಾ ಗುರುತಿಸಲಾಗಿದೆ. ಇನ್ನು ಮುರುಘಾ ಮಠದ ಬೆಂಬಲಿಗರು ಸರ್ಕಾರ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.
ಅತ್ಯಾಚಾರ ಕೇಸ್ ಹಿನ್ನೆಲೆ ಮುರುಘಾ ಶ್ರೀಗಳನ್ನ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಇದರಿಂದ ಬೇಸತ್ತ ಬೆಂಬಲಿಗನೊಬ್ಬ ಹುಚ್ಚಾಟವಾಡಿದ್ದಾನೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾನೆ. ಆತನನ್ನು ತಿಪ್ಪೇರುದ್ರಸ್ವಾಮಿ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಮುಂಭಾಗ ಹೈಡ್ರಾಮಾ ನಡೆದಿದೆ.
ಬೆಂಕಿ ಹಚ್ಚಿಕೊಳ್ಳುವ ವೇಳೆಗೆ ಅಲರ್ಟ್ ಆದ ಪೊಲೀಸರು
ಕೋರ್ಟ್ ಮುರುಘಾ ಸ್ವಾಮೀಜಿಯನ್ನು ಕಸ್ಟಡಿಗೊಪ್ಪಿಸಿದ ಬಳಿಕ ಚಿತ್ರದುರ್ಗದ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯ್ತು. ಈ ವೇಳೆ ತಿಪ್ಪೇರುದ್ರಸ್ವಾಮಿ ಹೈಡ್ರಾಮಾ ಮಾಡಿದ್ದಾನೆ. ಮೈಮೇಲೆ ಬೆಂಕಿ ಹಚ್ಚಿಕೊಳ್ಳೋ ವೇಳೆಗೆ ಅಲರ್ಟ್ ಆದ ಪೊಲೀಸರು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮುರುಘಾ ಸ್ವಾಮೀಜಿಗೆ ಬೆಂಗಳೂರು ಕೋರ್ಟ್ನಿಂದ ಅರೆಸ್ಟ್ ವಾರೆಂಟ್! ಪೋಕ್ಸೋ ಕೇಸ್ ಬೆನ್ನಲ್ಲೇ ಮತ್ತೊಂದು ಶಾಕ್
ರಾಮುಲು ಮುಂದೆಯೂ ವಿಷ ಸೇವನೆಗೆ ಯತ್ನ
ರಾಮುಲು ಮುಂದೆಯೂ ವಿಷ ಕುಡಿಯಲು ಯತ್ನಿಸಿದ್ದ ತಿಪ್ಪೇರುದ್ರಸ್ವಾಮಿ
ಈ ಹಿಂದೆ ಸಚಿವ ಶ್ರೀರಾಮುಲು ಮುಂದೆಯೂ ತಿಪ್ಪೇರುದ್ರಸ್ವಾಮಿ ವಿಷ ಕುಡಿಯಲು ಯತ್ನಿಸಿದ್ದ. ಚಿತ್ರದುರ್ಗ ಜಿಲ್ಲಾ BJP ಕಚೇರಿ ಬಳಿ ವಿಷ ಸೇವಿಸಲು ಯತ್ನಿಸಿದ್ದ. ಇದೀಗ ಮತ್ತೊಮ್ಮೆ ಪೆಟ್ರೋಲ್ ಮೈ ಮೇಲೆ ಸುರಿದುಕೊಂಡ ಹುಚ್ಚಾಟ ಮೆರೆದಿದ್ದಾನೆ.
A2 ಆರೋಪಿ ರಶ್ಮಿಗೆ ನ್ಯಾಯಾಂಗ ಬಂಧನ
ಇನ್ನು ಅತ್ಯಾಚಾರ ಕೇಸ್ನಲ್ಲಿ A2 ಆರೋಪಿಯಾಗಿರುವ ಹಾಸ್ಟೆಲ್ ವಾರ್ಡನ್ ರಶ್ಮಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್ ಆದೇಶಿಸಿದೆ. ಇನ್ನು ಪೋಕ್ಸೋ ಕೇಸ್ ನಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಮುರುಘಾಶ್ರೀ ಅವರ ತನಿಖೆ ನೆಲದ ಕಾನೂನಿನಂತೆ ನಡೆಯಲಿದ್ದು ಯಾವುದೇ ರೀತಿಯಲ್ಲಿ ಸರಕಾರದ ಹಸ್ತಕ್ಷೇಪ ಇರುವುದಿಲ್ಲ. ತನಿಖೆ ನಡೆಸಲು ಪೊಲೀಸರು ಮುಕ್ತ ಸ್ವಾತಂತ್ರ್ಯ ಹೊಂದಿದ್ದಾರೆ ಅಂತಾ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮುರುಘಾ ಸ್ವಾಮೀಜಿಯ ಆಸ್ಪತ್ರೆ ಹೈಡ್ರಾಮಕ್ಕೆ ಬ್ರೇಕ್
ಸೆಪ್ಟೆಂಬರ್ 5ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಈ ಮೂಲಕ ಮುರುಘಾ ಸ್ವಾಮೀಜಿಯ ಆಸ್ಪತ್ರೆ ಹೈಡ್ರಾಮಕ್ಕೆ ಕೋರ್ಟ್ ಬ್ರೇಕ್ ಹಾಕಿದೆ. 2ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೋಮಲಾ ಅವರು ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆ ಸೇರಿದ್ದ ಮುರುಘಾ ಸ್ವಾಮೀಜಿಗೆ ಬಿಗ್ ಶಾಕ್, ಕೋರ್ಟ್ಗೆ ಹಾಜರುಪಡಿಸಲು ಖಡಕ್ ಸೂಚನೆ
ಏರ್ಲಿಫ್ಟ್ ಮಾಡಲು ನಡೆದಿತ್ತು ಸಿದ್ಧತೆ
ಪೊಲೀಸರು ಸ್ವಾಮೀಜಿಯನ್ನು ಬೆಂಗಳೂರಿಗೆ ಏರ್ಲಿಫ್ಟ್ ಮಾಡಲು ಸಕಲ ಸಿದ್ಧತೆ ನಡೆಸಿದ್ದರು. ಅಲ್ಲದೇ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಯ ಆರನೇ ಮಹಡಿಯ 603 ಮತ್ತು 604 ಸ್ಪೆಷಲ್ ವಾರ್ಡ್ನ್ನು ಸ್ವಾಮೀಜಿ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಇದು ಹೈಟೆಕ್ ಚಿಕಿತ್ಸಾ ವ್ಯವಸ್ಥೆ ಇರುವ,ಇಬ್ಬರಿಗೆ ಸೀಮಿತದ ಸ್ಪೆಷಲ್ ವಾರ್ಡ್ ಆಗಿದ್ದು, ಹೃದಯಶಸ್ತ್ರಚಿಕಿತ್ಸಾ, ಸ್ಟಂಟ್ ಮತ್ತು ಹೃದಯ ಸಂಬಂಧಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇರುವ ವಾರ್ಡ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ