ಎಸ್​ಪಿ ಮನೆ ಎದುರು ಪೊಲೀಸ್ ಸಿಬ್ಬಂದಿ ಸಾವು; ಜೀವ ಬೆದರಿಕೆಯಿಂದ ತಾನೇ ಗುಂಡು ಹಾರಿಸಿಕೊಂಡ ಕಾನ್​ಸ್ಟೇಬಲ್

ಕಾನ್​ಸ್ಟೇಬಲ್​ ಮಂಜುನಾಥ ಹರಿಜನ ಮರಣೋತ್ತರ ಪರೀಕ್ಷೆ ವೇಳೆ ಜೇಬಿನಲ್ಲಿ ಡೆತ್ ನೋಟ್ ಸಿಗುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೆಳಿಗ್ಗೆ ತಾಯಿ ಹನಮವ್ವ ಮಗನದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದರು. ಹಾಗಾಗಿ ಇದು ಕೊಲೆಯೋ ಆತ್ಮಹತ್ಯೆಯೋ ಎಂದು ಶಂಕೆ ಕೂಡ ವ್ಯಕ್ತವಾಗಿತ್ತು.

news18
Updated:December 2, 2018, 9:41 AM IST
ಎಸ್​ಪಿ ಮನೆ ಎದುರು ಪೊಲೀಸ್ ಸಿಬ್ಬಂದಿ ಸಾವು; ಜೀವ ಬೆದರಿಕೆಯಿಂದ ತಾನೇ ಗುಂಡು ಹಾರಿಸಿಕೊಂಡ ಕಾನ್​ಸ್ಟೇಬಲ್
ಮೃತ ಕಾನ್​ಸ್ಟೇಬಲ್ ಬರೆದಿರುವ ಡೆತ್​ನೋಟ್​
  • Advertorial
  • Last Updated: December 2, 2018, 9:41 AM IST
  • Share this:
-ರಾಚಪ್ಪ ಬನ್ನಿದಿನ್ನಿ

ಬಾಗಲಕೋಟೆ (ಡಿ.02): ಬಾಗಲಕೋಟೆ ಎಸ್ಪಿ ನಿವಾಸದ ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ ಮಂಜುನಾಥ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಈ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಇದೀಗ ಮೃತ ಮಂಜುನಾಥ್​ ಅವರೇ ಸಾವಿಗೂ ಮುನ್ನ ಡೆತ್​ ನೋಟ್​ ಬರೆದಿಟ್ಟಿದ್ದು, ತಾವು ಸಾಯಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ.

ಕಾನ್​ಸ್ಟೇಬಲ್​ ಮಂಜುನಾಥ ಹರಿಜನ ಮರಣೋತ್ತರ ಪರೀಕ್ಷೆ ವೇಳೆ ಜೇಬಿನಲ್ಲಿ ಡೆತ್ ನೋಟ್ ಸಿಗುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೆಳಿಗ್ಗೆ ತಾಯಿ ಹನಮವ್ವ ಮಗನದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದರು. ಹಾಗಾಗಿ ಇದು ಕೊಲೆಯೋ ಆತ್ಮಹತ್ಯೆಯೋ ಎಂದು ಶಂಕೆ ಕೂಡ ವ್ಯಕ್ತವಾಗಿತ್ತು.

ಡೆತ್ ನೋಟ್​ನಲ್ಲಿ ಮಂಜುನಾಥ ತನ್ನ ಸಾವಿನ ಕುರಿತಾಗಿ ಉಲ್ಲೇಖಿಸಿದ್ದಾರೆ. "ಭಾರತದಲ್ಲಿ ಅಸ್ಪೃಶ್ಯತೆ ಯಿಂದ ಮಾನಸಿಕವಾಗಿ ನೊಂದಿದ್ದೇನೆ. ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ. ನನಗೆ ನಾನೇ ವೈರಿಯಾಗಿ ಗುಂಡು ಹಾರಿಸಿಕೊಂಡಿದ್ದೇನೆ. ಪೊಲೀಸ್​ ಇಲಾಖೆಯ ನನ್ನ ಸಿಬ್ಬಂದಿ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ನನ್ನ ಕುಟುಂಬ ಬಹಳ ಮುಗ್ಧ ಮನಸ್ಥಿತಿ ಕುಟುಂಬ. ನಾನೆಲ್ಲರಿಗೂ ಕ್ಷಮೆ ಕೇಳುತ್ತೇನೆ. ನನ್ನನ್ನು ಸಾಕಿ, ಸಲಹಿದ ತಾಯಿಗೆ ಕ್ಷಮೆ ಕೇಳುತ್ತೇನೆ. ನನ್ನ ತಾಯಿ, ತಂದೆ ಮುಗ್ಧರು. ಇದರಲ್ಲಿ ನನ್ನನ್ನು ಹನಮಂತ ಮಾದರ, ಮರಿಯಪ್ಪ ಮಾದರ ಶನಿಯಾಗಿ ಕಾಡಿದ್ದಾರೆ. ಇಬ್ಬರು ನನ್ನ ಜೀವನವೆಂಬ ದೋಣಿಯಲ್ಲಿ ಆಟವಾಡಿದರು. ನನ್ನ ತಂದೆಯ ಆಸ್ತಿಯನ್ನು ವ್ಯಾಮೋಹಿಸುವ ಉದ್ದೇಶದಿಂದ ನನಗೆ ಜೀವ ಬೆದರಿಕೆ ಹಾಕಿದ್ರು. ಆದ್ದರಿಂದ ಆತ್ಮಹತ್ಯೆ ಗೆ ಶರಣಾಗಿದ್ದೇನೆ. ನನ್ನ ಪೋಷಕರು ತುಂಬಾ ಪ್ರೀತಿ, ಮಮತೆಯಿಂದ ಬೆಳೆಸಿದ ಅಜ್ಜ ಅಜ್ಜಿಗೆ ಧನ್ಯವಾದಗಳು" ಎಂದು ಬರೆಯಲಾಗಿದೆ.

ಇದನ್ನು ಓದಿ: ಗುಂಡೇಟಿನಿಂದ ಎಸ್​ಪಿ ಮನೆ ಮುಂದೆ ಕಾನ್​ಸ್ಟೇಬಲ್ ಸಾವು; ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು

ಇನ್ನು ಕೆಲವೊಂದು ಪದಗಳ ಮೇಲೆ ಗೀಟು ಹಾಕಿರೋದು ಅನುಮಾನ ಮೂಡಿಸಿದೆ. ಡೆತ್ ನೋಟ್ ನಲ್ಲಿ ಉಲ್ಲೇಖಿತರಾದವರನ್ನು ಬಂಧಿಸಿ, ತನಿಖೆ ನಡೆಸಿ, ನ್ಯಾಯಕೊಡಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

First published:December 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ