ಕಾಶ್ಮೀರಿ ಟೆಕ್ಕಿ ಯುವತಿ ಪಾಲಿಗೆ ಆಪತ್ಬಾಂಧವನಾದ ಪೊಲೀಸ್ ಪೇದೆ

ಮರುದಿನ ಯುವತಿ ಇ- ಲಾಸ್ಟ್ ನಲ್ಲಿ ದೂರು ದಾಖಲಿಸುತ್ತಿದ್ದಂತೆ ಯುವತಿ ನಂಬರ್ ಪಡೆದ ಪೊಲೀಸ್ ಪೇದೆ .ಕೂಡಲೇ ಯುವತಿಗೆ ಕರೆ ಮಾಡಿದ ಕಳೆದುಕೊಂಡಿದ್ದ ದಾಖಲಾತಿಗಳನ್ನ ತೆಗೆದುಕೊಂಡು ಹೋದಳು.

news18-kannada
Updated:January 9, 2020, 10:40 PM IST
ಕಾಶ್ಮೀರಿ ಟೆಕ್ಕಿ ಯುವತಿ ಪಾಲಿಗೆ ಆಪತ್ಬಾಂಧವನಾದ ಪೊಲೀಸ್ ಪೇದೆ
ಸಿಕ್ಕ ದಾಖಲೆಗಳನ್ನು ಯುವತಿಗೆ ನೀಡಿದ ಪೊಲೀಸ್ ಪೇದೆ
  • Share this:
ಬೆಂಗಳೂರು(ಜ.09) : ಸಂದರ್ಶನಕ್ಕೆ  ಹೋಗುವ ಆತುರದಲ್ಲಿ ಯುವತಿಯೊಬ್ಬಳು ಕಳೆದುಕೊಂಡಿದ್ದ ದಾಖಲೆಗಳನ್ನು ಮರುಕಳಿಸಿ ಪೊಲೀಸ್ ಪೇದೆಯ ಸಹಾಯದಿಂದ ಕಾಶ್ಮೀರ ಮೂಲದ ಟೆಕ್ಕಿ ಯುವತಿಗೆ ಕೆಲಸ ಸಿಕ್ಕಿದೆ. 

ಕಾಶ್ಮೀರದ ಯುವತಿ ಮರಿಯಾ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನ ಖಾಸಗಿ ಕಂಪನಿಗೆ ಸಂದರ್ಶನಕ್ಕಾಗಿ ಬಂದಿದ್ದಳು. ಈ ವೇಳೆ ಇಂಟರ್ ವ್ಯೂ ಗೆ ಹೋಗುವ ತರಾತುರಿಯಲ್ಲಿ ಮಾರ್ಕ್ಸ್ ಕಾರ್ಡ್ಸ್, ಆಧಾರ್ ಕಾರ್ಡ್, ಪಾಸ್ ಪೊರ್ಟ್ ಸಮೇತ ಬ್ಯಾಗ್ ಕಳೆದುಕೊಂಡಿದ್ದಳು.

ಇದೇ ವೇಳೆ ಮಾನ್ಯತಾ ಟೆಕ್ ಪಾರ್ಕ್ ಬಳಿ ಗಸ್ತಿನಲ್ಲಿದ ಸಂಪಿಗೆಹಳ್ಳಿ ಠಾಣೆ ಪೊಲೀಸ್ ಪೇದೆ ಸದಾಶಿವ ಬೆಳಗಲಿಗೆ ಯುವತಿ ಮರಿಯಾ ಕಳೆದುಕೊಂಡಿದ್ದ ಬ್ಯಾಗನ್ನ ಸ್ಥಳಿಯರು ನೀಡಿದ್ದರು. ಯುವತಿಯ ಫೊನ್ ನಂಬರ್ ಸಿಗದೇ ಅಕ್ಕಪಕ್ಕದ ಠಾಣೆಗಳಿಗೆ ಪೊಲೀಸ್ ಪೇದೆ. ಮಾಹಿತಿ ನೀಡಿದ್ದರು.

ಮರುದಿನ ಯುವತಿ ಇ- ಲಾಸ್ಟ್ ನಲ್ಲಿ ದೂರು ದಾಖಲಿಸುತ್ತಿದ್ದಂತೆ ಯುವತಿ ನಂಬರ್ ಪಡೆದ ಪೊಲೀಸ್ ಪೇದೆ .ಕೂಡಲೇ ಯುವತಿಗೆ ಕರೆ ಮಾಡಿದ ಕಳೆದುಕೊಂಡಿದ್ದ ದಾಖಲಾತಿಗಳನ್ನ ತೆಗೆದುಕೊಂಡು ಹೋದಳು. ಮೂಲ ದಾಖಲೆಗಳನ್ನು ಕಂಪನಿಗೆ ಕೊಟ್ಟು ಸಂದರ್ಶನದಲ್ಲಿ ಯುವತಿ ಮರಿಯಾ ಆಯ್ಕೆಯಾದಳು.

ಇದನ್ನೂ ಓದಿ :  ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ 17-18ನೇ ಶತಮಾನದ ರಾಕೆಟ್​ಗಳು ಕರುನಾಡಿನಲ್ಲಿ ಎಲ್ಲಿವೆ ಗೊತ್ತಾ?

ಕಳೆದುಕೊಂಡಿದ್ದ ದಾಖಲೆಗಳು ಮತ್ತೆ ಸಿಕ್ಕಿದ್ದನ್ನ ಕಂಡು ಯುವತಿ ಕಣ್ಣಿರಿಟ್ಟು. ಸಂಪಿಗೆಹಳ್ಳಿ ಠಾಣೆ ಪೊಲೀಸರ ಸಹಾಯಕ್ಕೆ ಕಾಶ್ಮೀರಿ ಯುವತಿಯ ಧನ್ಯವಾದ ಅರ್ಪಿಸಿದ್ದಾಳೆ.
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ