ಸಾಂಸ್ಕೃತಿಕ ನಗರಿಯಲ್ಲಿ ರೌಡಿಗಳ ದರ್ಬಾರ್; ಪೊಲೀಸ್​ ಕಾನ್ಸ್​ಟೇಬಲ್​ಗೆ​​ ಥಳಿಸಿರುವ ದೃಶ್ಯ ವೈರಲ್​​

ನಗರದ ದೇವರಾಜ ಪೊಲೀಸ್​ ಠಾಣೆಯ ರೌಡಿ ಶೀಟರ್​ ಆಗಿರುವ ಸೋಮ ಹಲವು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿಯಾಗಿದ್ದಾನೆ. ಕಳೆದ ಚುನಾವಣೆಯಲ್ಲಿ ಈತನನ್ನು ಗಡಿಪಾರು ಮಾಡಿ ಪೊಲೀಸರು ಆದೇಶಿಸಿದ್ದರು.

Seema.R | news18-kannada
Updated:October 20, 2019, 12:37 PM IST
ಸಾಂಸ್ಕೃತಿಕ ನಗರಿಯಲ್ಲಿ ರೌಡಿಗಳ ದರ್ಬಾರ್; ಪೊಲೀಸ್​ ಕಾನ್ಸ್​ಟೇಬಲ್​ಗೆ​​ ಥಳಿಸಿರುವ ದೃಶ್ಯ ವೈರಲ್​​
ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ರೌಡಿ ಶೀಟರ್​ ಹಲ್ಲೆ ಮಾಡುತ್ತಿರುವ ದೃಶ್ಯ
 • Share this:
ಮೈಸೂರು (ಅ.20): ಸಾಂಸ್ಕೃತಿಕ ನಗರಿಯಲ್ಲಿ  ರೌಡಿಗಳ ಪುಂಡಾಟಿಕೆ ನಡೆದಿದ್ದು, ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ರೌಡಿ ಶೀಟರ್​ ಒಬ್ಬ ಹಲ್ಲೆ ಮಾಡಿರುವ ಘಟನೆ ನಡೆದಿದೆ. 

ಅಂಗಡಿ ಮುಚ್ಚುವ ವಿಷಯಕ್ಕೆ ರೌಡಿಶೀಟರ್​ ಸೋಮ ಮತ್ತು ಕಾನ್ಸ್​ಟೇಬಲ್​ ಮಂಜುನಾಥ್​ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೊನೆಗೆ ರೌಡಿ ಶೀಟರ್​ ಪೊಲೀಸ್​ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ರೌಡಿ ಶೀಟರ್​ ಸೋಮ ಅವರ ಸಹೋದರಿ ಲತಾ ಅಂಗಡಿ ನಡೆಸುತ್ತಿದ್ದರು. ಶನಿವಾರ ರಾತ್ರಿ 11 ಗಂಟೆಯಾದರೂ ಅಂಗಡಿ ಬಾಗಿಲು ಮುಚ್ಚಿರಲಿಲ್ಲ. ಈ ಹಿನ್ನೆಲೆ ಕಾನ್ಸ್​ಟೇಬಲ್​ ಮಂಜುನಾಥ್​ ಅಂಗಡಿ ಬಾಗಿಲು ಮುಚ್ಚುವಂತೆ ತಿಳಿಸಿದ್ದಾರೆ. ಇದಕ್ಕೆ ಸೋಮ ನಿರಾಕರಿಸಿದ್ದು ಅವರ ಸಹೋದರ ಚಂದ್ರಶೇಖರ್​ ಕೂಡ ಪೊಲೀಸ್​ ಕಾನ್ಸ್​ಟೇಬಲ್​ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ ಇಬ್ಬರು ಸೇರಿ ಮಂಜುನಾಥ್​ ಮೇಲೆ ಹಲ್ಲೆ ನಡೆಸಿದ್ದು, ಈ ದೃಶ್ಯ ಸೆರೆಯಾಗಿದೆ.

ಇದನ್ನು ಓದಿ: ಹೆಗ್ಗಣಕ್ಕೆ ನಾಲ್ಕು ತಿಂಗಳ ಕಂದಮ್ಮ ಬಲಿ; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಪ್ರಕರಣ ಕುರಿತು ದೇವರಾಜ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ, ಪ್ರಕರಣದ ಎ1 ಆರೋಪಿಯಾಗಿ ಸೋಮ, ಎ2ಆಗಿ ಪೊಲೀಸ್​ ಕಾನ್ಸ್​ಟೇಬಲ್​, ಎ3ಯಾಗಿ ಲತಾ ಅವರನ್ನು ಪರಿಗಣಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ರೌಡಿ ಶೀಟರ್​ ಸೋಮ, ಸಹೋದರಿ ಲತಾ ಜೊತೆ ನಾಪತ್ತೆಯಾಗಿದ್ದಾನೆ.

ದೇವರಾಜ ಪೊಲೀಸ್​ ಠಾಣೆಯ ರೌಡಿ ಶೀಟರ್​ ಆಗಿರುವ ಸೋಮ ಹಲವು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿಯಾಗಿದ್ದಾನೆ. ಕಳೆದ ಚುನಾವಣೆಯಲ್ಲಿ ಈತನನ್ನು ಗಡಿಪಾರು ಮಾಡಿ ಪೊಲೀಸರು ಆದೇಶಿಸಿದ್ದರು.

 
First published:October 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,202,728

   
 • Total Confirmed

  1,676,532

  +72,880
 • Cured/Discharged

  372,253

   
 • Total DEATHS

  101,551

  +5,859
Data Source: Johns Hopkins University, U.S. (www.jhu.edu)
Hospitals & Testing centres