• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramesh Jarkiholi CD Case: ಸಂಪರ್ಕಕ್ಕೆ ಸಿಕ್ಕಿಲ್ಲ ಸಂತ್ರಸ್ತೆ; ಎಸ್​ಐಟಿಯಿಂದ ನಿರಂತರ ಶೋಧ; ಆಯುಕ್ತ ಕಮಲ್​ಪಂತ್​

Ramesh Jarkiholi CD Case: ಸಂಪರ್ಕಕ್ಕೆ ಸಿಕ್ಕಿಲ್ಲ ಸಂತ್ರಸ್ತೆ; ಎಸ್​ಐಟಿಯಿಂದ ನಿರಂತರ ಶೋಧ; ಆಯುಕ್ತ ಕಮಲ್​ಪಂತ್​

ಸಂತ್ರಸ್ತ ಯುವತಿ.

ಸಂತ್ರಸ್ತ ಯುವತಿ.

ಯುವತಿ ವಿಡಿಯೋ ನೋಡಿ ನೋಟಿಸ್ ನೀಡಲಾಗಿದೆ. ಅದರೆ ಈವರೆಗೆ ಯುವತಿ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಸಿಡಿ ಕೇಸ್​​​​ನಲ್ಲಿ ಈವರೆಗೂ ಯಾರನ್ನೂ ಬಂಧಿಸಿಲ್ಲ

  • Share this:

    ಬೆಂಗಳೂರು (ಮಾ. 15):  ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಜೀವ ರಕ್ಷಣೆ ಕೋರಿ ಕಳೆದೆರಡು ದಿನಗಳ ಹಿಂದೆ ವಿಡಿಯೋ ಬಿಡುಗಡೆ ಮಾಡಿದ್ದರು. ಈ ಪ್ರಕರಣ ಕುರಿತು ರಮೇಶ್​ ಜಾರಕಿಹೊಳಿ ದೂರು ಸಲ್ಲಿಸಿದ ಅರ್ಧಗಂಟೆಯಲ್ಲಿ ಯುವತಿ ತಮಗೆ ಯಾವುದೇ ರಾಜಕೀಯ ಬೆಂಬಲವಿಲ್ಲ. ಗೃಹ ಸಚಿವರು ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಳು. ಸಂತ್ರಸ್ತ ಯುವತಿಯ ಈ ವಿಡಿಯೋ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಎಸ್​ಐಟಿ ಗಂಭೀರ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ವಿಡಿಯೋ ಹರಿಬಿಟ್ಟ ಯುವತಿಗಾಗಿ ಅಧಿಕಾರಿಗಳು ಶೋಧ ಆರಂಭಿಸಿದ್ದಾರೆ. ಅಲ್ಲದೇ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಮಾತನಾಡಿದ ಗೃಹ ಸಚಿವರು, ಸಂತ್ರಸ್ತೆಗೆ ಜೀವಭಯವಿದೆ ಎಂಬ ಹೇಳಿಕೆ ಹಿನ್ನಲೆ ಸೂಕ್ತ ಭದ್ರತೆ ನೀಡಲು ಎಸ್​ಐಟಿಗೆ ಹೇಳಿದ್ದೇನೆ. ಈ ಕುರಿತು ಎಸ್​ಐಟಿ ಮುಖ್ಯಸ್ಥರಿಗೆ ಸೂಚನೆ ನೀಡಿದ್ದೇನೆ ಎಂದಿದ್ದರು.


    ಗೃಹ ಸಚಿವರ ಆದೇಶದ ಬೆನ್ನಲ್ಲೇ ಅಧಿಕಾರಿಗಳು ಯುವತಿ ಪತ್ತೆಗಾಗಿ ಎಸ್ಐಟಿ ನಿರಂತರ ಶೋಧ ನಡೆಸಿದ್ದಾರೆ. ಆದರೆ, ಆಕೆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ತನಿಖೆ ಮುಂದುವರೆಸುವುದಾಗಿ ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪ್ರಕರಣದಲ್ಲಿ ನಾಪತ್ತೆಯಾದ ಇಬ್ಬರು ಸಹ ಇನ್ನೂ ಪತ್ತೆಯಾಗಿಲ್ಲ. ಅವರನ್ನ ಸಹ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಎಸ್​ಐಟಿ ತನಿಖೆ ಸರಿಯಾದ ಟ್ರ್ಯಾಕ್​​ನಲ್ಲಿ ನಡೆಯುತ್ತಿದೆ. ಯುವತಿ ವಿಡಿಯೋ ನೋಡಿ ನೋಟಿಸ್ ನೀಡಲಾಗಿದೆ. ಅದರೆ ಈವರೆಗೆ ಯುವತಿ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಸಿಡಿ ಕೇಸ್​​​​ನಲ್ಲಿ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.


    ಇದನ್ನು ಓದಿ: ಇದೆಂಥಾ ಬಜೆಟ್ ರೀ, ನಿಮ್ಮ ಕುರ್ಚಿಯಲ್ಲಿ ನಾವು ಕೂರುವ ದಿನ ದೂರ ಇಲ್ಲ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಗುಡುಗು


    ಸಂತ್ರಸ್ತ ಯುವತಿಯ ಜಾಡು ಪತ್ತೆಗಾಗಿ ಮುಂದಾಗಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ಯುವತಿಯ ಮನೆ, ಪಿಜಿ, ಸಂಬಂಧಿಕರು, ಸ್ನೇಹಿತರಿಗೆ ಪೊಲೀಸರು ನೋಟೀಸ್ ಕೊಟ್ಟಿದ್ಧಾರೆ. ಅಲ್ಲದೇ , ಸಂತ್ರಸ್ತ ಯುವತಿಯ ಮೂಲ ಊರು ಬಾಗಲಕೋಟೆ ಜಿಲ್ಲೆಯಲ್ಲಿದ್ದರೆ, ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣ ಯುವತಿಯ ತಾಯಿಯ ತವರು ಮನೆಯಾಗಿದೆ. ಇಲ್ಲಿಯೇ ಯುವತಿಯ ಅಜ್ಜಿ ವಾಸಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಡಗುಂದಿಗೆ ಆಗಮಿಸಿದ ಕಬ್ಬನ್ ಪಾರ್ಕ್ ಪೊಲೀಸರು ಈ ಯುವತಿಯ ಅಜ್ಜಿಯ ಮನೆಗೆ ನೊಟೀಸ್ ಅಂಟಿಸಿದ್ದಾರೆ.


    ಸಂತ್ರಸ್ತ ಯುವತಿ ವಿಡಿಯೋ ಕುರಿತು ಪ್ರತಿಕ್ರಯಿಸಿದ್ದ ರಮೇಶ್​ ಜಾರಕಿಹೊಳಿ, ಎಫ್​ಐಆರ್​ ದಾಖಲಿಸಿ ಅರ್ಧ ಗಂಟೆಯಲ್ಲಿ ವಿಡಿಯೋ ಬಿಡುಗಡೆಯಾಗಿದೆ. ಕಳೆದ 12 ದಿನಗಳಿಂದ ಪತ್ತೆಯಾಗದ ಯುವತಿ ಈಗ ಹೊರ ಬಂದಿದ್ದಾರೆ.  ಇದರ ಹಿಂದೆ ಎಷ್ಟು ದೊಡ್ಡ ಷಡ್ಯಂತ್ರ ಇದೆ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ ಎಂದಿದ್ದರು.

    Published by:Seema R
    First published: