ಮುಖ್ಯಮಂತ್ರಿ, ಸಚಿವರ ನಿವಾಸಗಳಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ

ಇನ್ಸ್‌ಪೆಕ್ಟರ್ ಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ಘಟನೆ ವಿಡಿಯೋ ಚಿತ್ರೀಕರಣ ಮಾಡಬೇಕು. ಪ್ರತಿಭಟನೆ ವೇಳೆ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿ ಹದಗೆಡಿಸುವ ಸಾಧ್ಯತೆ ಇದ್ದು ಮುನ್ನೆಚ್ಚರಿಕೆ ಸಲುವಾಗಿ ಅಂತಹ ವ್ಯಕ್ತಿಗಳನ್ನ ವಶಕ್ಕೆ ಪಡೆಯಲು ಸೂಚಿಸಿದ್ದಾರೆ.

news18-kannada
Updated:September 27, 2020, 11:40 PM IST
ಮುಖ್ಯಮಂತ್ರಿ, ಸಚಿವರ ನಿವಾಸಗಳಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
  • Share this:
ಬೆಂಗಳೂರು(ಸೆಪ್ಟೆಂಬರ್​. 27): ಭೂಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಾಳೆ ಕರ್ನಾಟಕ ಬಂದ್ ಗೆ ರೈತ ಸಂಘಟನೆಗಳು ಕರೆ ನೀಡಿವೆ. ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಸಚಿವರು, ಕೇಂದ್ರ ಸಚಿವರು, ಸಂಸದರ ನಿವಾಸ ಮತ್ತು ಕಚೇರಿಗಳಿಗೆ ಸೂಕ್ತ ಬಂದೋಬಸ್ತ್ ಕಲ್ಪಿಸಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ನೀಡಿದ್ದಾರೆ. ಕರ್ನಾಟಕ ಬಂದ್ ಹಿನ್ನಲೆಯಲ್ಲಿ ನಾಳೆ ನಗರದಲ್ಲಿ ಎಲ್ಲೆಡೆ ಎಲ್ಲೆಡೆ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾರ್ವಜನಿಕರ ಆಸ್ತಿ ಪಾಸ್ತಿ ರಕ್ಷಣೆ ಸಲುವಾಗಿ ಅಗತ್ಯ ಬಂದೋಬಸ್ತ್ ಕಲ್ಪಿಸಲು ಕಮೀಷನರ್ ನಗರದ ಎಲ್ಲ ಪೊಲೀಸ್ ಠಾಣೆ, ಇನ್ಸ್‌ಪೆಕ್ಟರ್ ಮತ್ತು ಡಿಸಿಪಿಗಳಿಗೆ ಸುಮಾರು 22 ಸೂಚನೆಗಳನ್ನ ರವಾನಿಸಿದ್ದಾರೆ.  ರೈತ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬಂದ್ ಕರೆ ನೀಡಿರುವುದರಿಂದ ನಗರದ ಪೆಟ್ರೋಲ್ ಬಂಕ್, ಬ್ಯಾಂಕ್, ಬಸ್ ಡಿಪೋಗಳು, ಕೇಂದ್ರ ಸರ್ಕಾರದ ಕಚೇರಿಗಳು, ಐಟಿ ಬಿಟಿ, ಮಾಲ್ ಗಳು ಹಾಗು ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಿದ್ದಾರೆ. 

ಇಂದು ರಾತ್ರಿಯಿಂದಲೇ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರ ನಿಯೋಜನೆ ಮಾಡುವುದು ಹಾಗೂ ಬಂದ್ ದಿನ ಬೆಳಗಿನ ಜಾವ 4.30 ಗಂಟೆಗೆ ಚೀತಾ, ಹೊಯ್ಸಳ ವಾಹನಗಳ ಗಸ್ತು ಮಾಡುವುದು. ನಗರದ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡುವುದು. ನಗರದ ಕಾರ್ಖಾನೆ, ಗಾರ್ಮೆಂಟ್ಸ್ ಬಳಿ ಅಗತ್ಯ ಬಂದೋ ಬಸ್ತ್ ಮಾಡಲು ಪೊಲೀಸರಿಗೆ ಸೂಚಿಸಿದ್ದಾರೆ. ಪ್ರತಿಭಟನೆ ಸಂಬಂಧ ಮೆರವಣಿಗೆ ನಡೆಸಲು ಅನುಮತಿ ನಿರಾಕರಿಸಲಾಗಿದ್ದು, ಕೇವಲ ಶಾಂತಿಯುತ ಪ್ರತಿಭಟನೆ ನಡೆಸಲು ಮಾತ್ರ ಅವಕಾಶ ನೀಡಲು ತಿಳಿಸಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪ ಕುಟುಂಬದಿಂದ ವ್ಯಾಪಕ ಭ್ರಷ್ಟಾಚಾರ - ಕಾಂಗ್ರೆಸ್ ಸೋಲಿಸಿದ ಬಗ್ಗೆ ಜನರ ಮರುಕ ; ಸಿದ್ಧರಾಮಯ್ಯ

ಇನ್ಸ್‌ಪೆಕ್ಟರ್ ಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ಘಟನೆ ವಿಡಿಯೋ ಚಿತ್ರೀಕರಣ ಮಾಡಬೇಕು. ಪ್ರತಿಭಟನೆ ವೇಳೆ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿ ಹದಗೆಡಿಸುವ ಸಾಧ್ಯತೆ ಇದ್ದು ಮುನ್ನೆಚ್ಚರಿಕೆ ಸಲುವಾಗಿ ಅಂತಹ ವ್ಯಕ್ತಿಗಳನ್ನ ವಶಕ್ಕೆ ಪಡೆಯಲು ಸೂಚಿಸಿದ್ದಾರೆ.

ಎಲ್ಲಾ ಆಧಿಕಾರಿಗಳು ರಿವಾಲ್ವಾರ್, ವಾಕಿಟಾಕಿ, ಹೆಲ್ಮೆಟ್, ಲಾಠಿ, ಬಾಡಿ ಪ್ರೊಟೆಕ್ಟರ್ ಸಮೇತ ಕರ್ತವ್ಯಕ್ಕೆ ಹಾಜರಿದ್ದು ಸಾರ್ವಜನಿಕರ ಜೊತೆ ಸೌಹಾರ್ದಯುತವಾಗಿ ವರ್ತಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಕಮೀಷನರ್ ನಗರ ಪೊಲೀಸರಿಗೆ ಸೂಚನೆಗಳನ್ನ ರವಾನಿಸಿದ್ದಾರೆ.
Published by: G Hareeshkumar
First published: September 27, 2020, 11:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading