ರಾಮನಗರ(ಅ.01): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ರಾಜ್ಯ ಸರ್ಕಾರ ಆದೇಶ ಮಾಡಿದೆ. ಇನ್ನು ಮಾಸ್ಕ್ ಹಾಕದೇ ಬೇಕಾಬಿಟ್ಟಿ ಓಡಾಡುವ ಜನರಿಗೆ ಭಾರೀ ದಂಡ ವಿಧಿಸಲು ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ. ನಗರ ಪ್ರದೇಶದಲ್ಲಿ ಮಾಸ್ಕ್ ಹಾಕದಿದ್ದರೆ 1ಸಾವಿರ, ಗ್ರಾಮಾಂತರ ಭಾಗದಲ್ಲಿ ಮಾಸ್ಕ್ ಹಾಕದಿದ್ದರೆ 500 ರೂ. ದಂಡ ವಿಧಿಸಲು ಸರ್ಕಾರ ಕಟ್ಟುನಿಟ್ಟಾಗಿ ಆದೇಶ ಮಾಡಿದೆ. ಈ ಹಿನ್ನೆಲೆ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಪೊಲೀಸರು ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿದ್ದಾರೆ. ನಗರದ ಗಾಂಧಿ ವೃತ್ತ, ಶೇರೂ ಹೋಟೆಲ್ ವೃತ್ತ, ಬಸ್ ನಿಲ್ಧಾಣದ ಬಳಿ ಪೊಲೀಸರ ಮೂರು ತಂಡಗಳು ಮಾಸ್ಕ್ ಹಾಕದೇ ಬರುವ ಬೈಕ್ ಸವಾರರಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ. ಇವತ್ತು ಮಾಸ್ಕ್ ಹಾಕದೇ ಬರುವ ಪ್ರತಿಯೊಬ್ಬರಿಗೂ 200 ರೂ., ಇದೇ ಮತ್ತೆ ಮುಂದುವರೆದರೆ 500 ರೂ. ದಂಡ ಹಾಕುವ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ ಹಿಂಪಡೆದ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಹೊರಗುತ್ತಿಗೆ ಸಿಬ್ಬಂದಿ; ನಾಳೆಯಿಂದ ಕರ್ತವ್ಯಕ್ಕೆ ಹಾಜರು
ಕೇವಲ 2 ಗಂಟೆಯಲ್ಲಿ ಸರಿಸುಮಾರು 50 ಕ್ಕೂ ಹೆಚ್ಚು ಜನರಿಗೆ ಮಾಸ್ಕ್ ಹಾಕದ ಕಾರಣ ಚನ್ನಪಟ್ಟಣ ಪೊಲೀಸರು 200 ರೂ. ಅಂತೆಯೇ ದಂಡ ವಿಧಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಕೆಲವರು ಮಾಸ್ಕ್ ಹಾಕದೇ ಬೈಕ್ ಚಲಾಯಿಸಿ ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಜೋರಾಗಿ ಗಲಾಟೆಗೆ ಬಿದ್ದ ಘಟನೆಗಳು ನಡೆಯಿತು. ಏಕಾಏಕಿ ಯಾಕೆ ಫೈನ್ ಹಾಕ್ತೀರಿ, ಒಂದು ಬಾರಿ ಬಿಡಿ, ನಂತರ ಫೈನ್ ಹಾಕಿ ಎಂದು ಕೆಲವರು ಅವಾಜ್ ಹಾಕಿದರು.
ಇನ್ನು ಕೆಲವರು ಗರ್ಭಿಣಿಯರನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಹೆಲ್ಮೆಟ್ ಇಲ್ಲ. ಮಾಸ್ಕ್ ಇಲ್ಲ ಆದರೂ ಸಹ ಪೊಲೀಸರ ಜೊತೆಗೆ ವಾಗ್ದಾಳಿ ನಡೆಸಿ ಕೊನೆಗೆ ಫೈನ್ ಕಟ್ಟಿ ತಮ್ಮ ಬೈಕ್ ತೆಗೆದುಕೊಂಡ ಹೋದ ಘಟನೆಯೂ ನಡೆಯಿತು. ಹಾಗಾಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಮಾಸ್ಕ್ ಹಾಕದೇ ರಸ್ತೆಗಿಳಿದರೆ ಪೊಲೀಸರಿಗೆ ಭಾರೀ ದಂಡ ಕೊಡಬೇಕಾಗಿದೆ. ಹಾಗಾಗಿ ಪ್ರತಿಯೊಬ್ಬರು ಸಹ ಮಾಸ್ಕ್ ಹಾಕಿಕೊಳ್ಳಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ