Hubballi: ಜೂಜಾಡುತ್ತಿದ್ದ ನಾಲ್ವರು ಪೊಲೀಸ್ ಸಿಬ್ಬಂದಿ ಬಂಧನ!

ಕಾನೂನು ರಕ್ಷಕರೇ ಕಾನೂನು ಭಕ್ತಕರಾದ್ರೆ ಹೇಗೆ ಅನ್ನೋ ಮಾತಿದೆ. ಇದಕ್ಕೆ ಪೂರಕ ಎನ್ನುವಂತೆ ಹುಬ್ಬಳ್ಳಿಯಲ್ಲಿ ಪೊಲೀಸರೇ ಜೂಜಾಟದಲ್ಲಿ ತೊಡಗಿಕೊಂಡು, ಮಾವನ ಮನೆ ಸೇರಿ ಕಂಬಿ ಎಣಿಸುತ್ತಿದ್ದಾರೆ. ಓರ್ವ ಇನ್ಸಪೆಕ್ಟರ್ ಎಸ್ಕೇಪ್ ಆಗಿದ್ದಾನೆ.

ಜೂಜಾಡುತ್ತಿದ್ದ ಪೊಲೀಸರು ಅರೆಸ್ಟ್

ಜೂಜಾಡುತ್ತಿದ್ದ ಪೊಲೀಸರು ಅರೆಸ್ಟ್

  • Share this:
ಹುಬ್ಬಳ್ಳಿ(ಜು.30): ಹುಬ್ಬಳ್ಳಿಯಲ್ಲಿ (Hubballi) ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ರಕ್ಷಕರೇ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿ ಮಾವನ ಮನೆ ಸೇರಿದ್ದಾರೆ. ಶಿಸ್ತಿನ ಇಲಾಖೆ ಅಂತ ಹೆಸರಾಗಿರೋ ಪೊಲೀಸ್  (Police) ಇಲಾಖೆಯ ಸಿಬ್ಬಂದಿಯೇ ಶಿಸ್ತು ಮರೆತು ಜೂಜಾಟದಲ್ಲಿ (Gambling) ಭಾಗಿಯಾದ ಘಟನೆ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಇನ್ಸಪೆಕ್ಟರ್ (Inspector) ಜೆ.ಎಂ.ಕಾಲಿಮಿರ್ಚಿ ನೇತೃತ್ವದಲ್ಲಿ ದಾಳಿ (Raid) ನಡೆಸಿ ನಾಲ್ವರನ್ನು ಬಂಧಿಸಿದ ಘಟನೆ ಹುಬ್ಬಳ್ಳಿಯ ಅಕ್ಷಯ ಕಾಲನಿಯಲ್ಲಿ ನಡೆದಿದೆ. ಅಕ್ಷಯ ಕಾಲೋನಿಯ (Colony) ಮನೆಯೊಂದರಲ್ಲಿ ಕುಳಿತು ಎಕ್ಕ-ರಾಜ-ರಾಣಿ ಎಲೆ ತಟ್ಟುತ್ತಿದ್ದ ಪೊಲೀಸ್ ಸಿಬ್ಬಂದಿ, ಅಂದರ್ – ಬಾಹರ್ ಆಟವಾಡುತ್ತಿದ್ದರು.

ಏಕಾಏಕಿ ದಾಳಿ ನಡೆಸಿ, ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆ (CAR)ಯ ಓರ್ವ ಇನ್ಸ್ಪೆಕ್ಟರ್, ಇಬ್ಬರು ಹೆಡ್ ಕಾನ್ಸ್ಟೆಬಲ್ ಗಳು, ಓರ್ವ ಕಾನ್ಸ್ಟೆಬಲ್ ಮತ್ತು ಒಬ್ಬ ನಿವೃತ್ತ ಹೆಡ್ ಕಾನ್ಸ್ಟೆಬಲ್ ನಿಂದ ಜೂಜಾಟ ನಡೆದಿತ್ತು. ಪೊಲೀಸ್ ಆಯುಕ್ತ ಲಾಭೂ ರಾಮ್ ಸೂಚನೆ ಮೇರೆಗೆ ದಾಳಿ ನಡೆಸಲಾಗಿದೆ.

ಜೂಜಾಟ ನಿರತ ಸಿಎಆರ್ ನ ಇಬ್ಬರು ಹೆಡ್ ಕಾನ್ ಸ್ಟೆಬಲ್, ಒಬ್ಬ ನಿವೃತ್ತ ಹೆಡ್ ಕಾನ್ಸ್ಟೆಬಲ್ ಹಾಗೂ ಸಂಚಾರ ವಿಭಾಗದ ಒಬ್ಬ ಕಾನ್ಸ್ಟೆಬಲ್ ನನ್ನು (Constable) ಪೊಲೀಸರು ಬಂಧಿಸಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್)ಯ ಇನ್ಸ್ಪೆಕ್ಟರ್ ಪರಾರಿಯಾಗಿದ್ದಾನೆ. ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಮಗನಿಗೆ ಜಾಮೀನು ಸಿಗ್ಲಿಲ್ಲಾ ಅಂತ ತಾಯಿ ಆತ್ಮಹತ್ಯೆ

ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ವಂತ ಮಗ ಜೈಲು ಸೇರಿದ್ದಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದುಬಂದಿದೆ. ಗೋಪನಕೊಪ್ಪದ ದ್ಯಾಮವ್ವ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ. ಇತ್ತೀಚಿಗೆ 307 ಕೇಸ್ ನಲ್ಲಿ ಮಗ ವಿನಾಯಕ ಗೌಡ ಜೈಲು ಸೇರಿದ್ದ.

ಇದನ್ನೂ ಓದಿ: Araga Jnanendra: ಗೃಹ ಸಚಿವರ ನಿವಾಸಕ್ಕೆ ABVP ಮುತ್ತಿಗೆ; ಇಂಟಲಿಜೆನ್ಸ್ ವೈಫಲ್ಯ ಒಪ್ಪಿಕೊಂಡ ನಗರ ಪೊಲೀಸ್ ಆಯುಕ್ತ

ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿ ಕೇಸ್ ಮಾಡಿಕೊಂಡು ವಿನಾಯಕ ಗೌಡ ಜೈಲು ಸೇರಿದ್ದ. ಆದರೆ ಆತನಿಗೆ ಮಗನಿಗೆ ಜಾಮೀನು ಸಿಕ್ಕಿರಲಿಲ್ಲ. ಮಗನಿಗೆ ಜಾಮೀನು ಸಿಗುತ್ತಿಲ್ಲ ಎಂದು ಮನನೊಂದು ದ್ಯಾಮವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹುಬ್ಬಳ್ಳಿ ವಿದ್ಯಾನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಸಚಿವರ ಎದುರೇ ಕುಸಿದು ಬಿದ್ದ ಮಹಿಳೆ

ಪರಿಹಾರದ ಹಣ ತೆಗೆದುಕೊಳ್ಳುವಾಗಲೇ ಮಹಿಳೆಯೊಬ್ಬರು ಕುಸಿದ ಬಿದ್ದ ಘಟನೆ ಹುಬ್ಬಳ್ಳಿಯ ಸರ್ಕ್ಯೂಟ್ ಹೌಸ್ ನಲ್ಲಿ ನಡೆದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಸಿಸಿ ಪಾಟೀಲ್ ಹಾಗೂ ಹಾಲಪ್ಪ ಆಚಾರ್ ಮುಂದೆಯೇ ಮಹಿಳೆ ಕುಸಿದು ಬಿದ್ದಿದ್ದಾಳೆ. ಧಾರವಾಡ ತಾಲೂಕಿನ ಬಾಡ ಗ್ರಾಮದಲ್ಲಿ ನಡೆದಿದ್ದ ಭೀಕರ ಅಪಘಾತದಲ್ಲಿ 11 ಜನ ಮೃತಪಟ್ಟಿದ್ದರು.

ಇದನ್ನೂ ಓದಿ: First Flight Journey: ಹಾರುತಾ ಹಾರುತಾ, ಆಕಾಶದಲ್ಲಿ ತೇಲುತಾ! ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ 27 ಅಜ್ಜಿಯರು!

ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಚಿವರ ಸಮ್ಮುಖದಲ್ಲಿ ತಲಾ 5 ಲಕ್ಷ ಪರಿಹಾರ ಚೆಕ್ ವಿತರಿಸಲಾಗುತ್ತಿತ್ತು. ಈ ವೇಳೆ ಚೆಕ್ ಪಡೆಯಲು ಬಂದಿದ್ದ ಸಾವಿತ್ರಿ ಅಂಗಡಿ ಎಂಬ ಮಹಿಳೆ ಚೆಕ್ ಪಡೆಯುವಾಗ ಕುಸಿದು ಬಿದ್ದಿದ್ದರಿಂದ ಆತಂಕ ಉಂಟಾಗಿತ್ತು. ನಂತರ ಸಿಬ್ಬಂದಿ ನೀರು ಕುಡಿಸಿ ಮಹಿಳೆಯನ್ನು ಸಮಾಧಾನಗೊಳಿಸಿದರು.
Published by:Divya D
First published: