• Home
  • »
  • News
  • »
  • state
  • »
  • RTI ಅಡಿ ಲೇಡಿ ಆಫೀಸರ್ ಪರ್ಸನಲ್ ಮ್ಯಾಟರ್‌ ಕೇಳಿದ ಭೂಪ! ಎಷ್ಟು ಮದ್ವೆ, ಯಾರೊಂದಿಗೆ ಸಂಸಾರ ಅಂತ ಕೇಳಿದವನಿಗೆ ಕೋಳ!

RTI ಅಡಿ ಲೇಡಿ ಆಫೀಸರ್ ಪರ್ಸನಲ್ ಮ್ಯಾಟರ್‌ ಕೇಳಿದ ಭೂಪ! ಎಷ್ಟು ಮದ್ವೆ, ಯಾರೊಂದಿಗೆ ಸಂಸಾರ ಅಂತ ಕೇಳಿದವನಿಗೆ ಕೋಳ!

ಆರ್​ಟಿಐ ಕಾರ್ಯಕರ್ತ ನಾಗರಾಜ್​

ಆರ್​ಟಿಐ ಕಾರ್ಯಕರ್ತ ನಾಗರಾಜ್​

ಆರ್‌ಟಿಐ ಕಾರ್ಯಕರ್ತ ನಾಗರಾಜ್ ಬಂಧಿತ ಆರೋಪಿ ಮಹಿಳಾ ಅಧಿಕಾರಿಗೆ ನೀನು  ಇದುವರೆಗೂ ಎಷ್ಟು ಮದುವೆಯಾಗಿದೆ?ಯಾರೊಂದಿಗೆ ವಿಚ್ಛೇದನ ಆಗಿದೆ? ಸದ್ಯ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ ಎಂಬೆಲ್ಲಾ ಪ್ರಶ್ನೆ ಮೂಲಕ ಮಾಹಿತಿ ಕೇಳಿದ್ದಾನೆ.

  • Share this:

ಸರ್ಕಾರದ ಇಲಾಖೆಗಳಲ್ಲಿ (Government Department) ಪಾರದರ್ಶಕತೆಯನ್ನ ತರಲು  ಸರ್ಕಾರ ಮಾಹಿತಿ ಹಕ್ಕು ಅಧಿನಿಯಮ (Right To Information Act) ಜಾರಿಗೆ ತಂದಿದೆ.  ಈ ಮೂಲಕ ಒಂದು RTI ಅರ್ಜಿ ಸಲ್ಲಿಸಿ ಸಾಕು ಕೂಡಲೇ ಸರ್ಕಾರಕ್ಕೆ (Government) ಸಂಬಂಧಿಸಿದ ಹಲವು ಮಾಹಿತಿಗಳು ದೊರೆಯುತ್ತದೆ. ಆದರೇ ಇದು ಹಲವು ಬಾರಿ ದುರುಪಯೋಗ ಕೂಡ ಆಗಿದೆ ಎನ್ನುವ ಮಾತುಗಳ ಸಹ ಕೇಳಿ ಬಂದಿದೆ. ಸರ್ಕಾರದ ಮಾಹಿತಿ ಕೇಳುವ ಬದಲಿಗೆ ಅಧಿಕಾರಿಯ ವೈಯಕ್ತಿಕ ಮಾಹಿತಿ ಕೇಳಿ RTI ಕಾರ್ಯಕರ್ತನೊಬ್ಬ ಇದೀಗ ಜೈಲು (Jail) ಪಾಲಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. 


 ಆರ್‌ಟಿಐ ಕಾರ್ಯಕರ್ತ ನಾಗರಾಜ್ ಬಂಧಿತ ಆರೋಪಿ


ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಂಡಿಕಲ್ ನಾಗರಾಜ್ ಬಂಧಿತ ಆರ್‌ಟಿಐ ಕಾರ್ಯಕರ್ತನಾಗಿದ್ದಾರೆ. ಈತ ಮುಳಬಾಗಿಲು ತಹಶೀಲ್ದಾರ್ ಅವರ ವೈಯಕ್ತಿಕ ವಿಚಾರಗಳ ಮಾಹಿತಿಯನ್ನ ಆರ್‌ಟಿಐ ಅಡಿ ಕೇಳಿದ್ದಾನೆ.
ನೀನು ಎಷ್ಟು ಮದುವೆಯಾಗಿದ್ದೀಯಾ? ಯಾರ ಜೊತೆ ಸಂಸಾರ ಮಾಡ್ತಿದ್ದೀಯಾ?


ಆರ್‌ಟಿಐ ಕಾರ್ಯಕರ್ತ ನಾಗರಾಜ್ ಬಂಧಿತ ಆರೋಪಿ ಮಹಿಳಾ ಅಧಿಕಾರಿಗೆ ನೀನು ಇದುವರೆಗೂ ಎಷ್ಟು ಮದುವೆಯಾಗಿದೆ? (Marriage) ಯಾರೊಂದಿಗೆ ವಿಚ್ಛೇದನ ಆಗಿದೆ? ಸದ್ಯ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ ಎಂಬೆಲ್ಲಾ ಪ್ರಶ್ನೆ ಮೂಲಕ ಮಾಹಿತಿ ಕೇಳಿದ್ದಾನೆ.


ಇದನ್ನೂ ಓದಿ: Rain Update: ಮತ್ತೆ ಹಲವೆಡೆ ವರುಣನ ಆರ್ಭಟ; ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ


ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರ ಕೊಡಿ


ಅಷ್ಟೇ ಅಲ್ಲದೇ ಮಹಿಳಾ ಅಧಿಕಾರಿಯನ್ನು, ನೀನು ಮದುವೆಯಾಗಿದ್ದು ಎಲ್ಲಿ? ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರ ಕೊಡಿ. ಪತಿಯ ಜೊತೆ ವಿಚ್ಛೇದನ ಆಗಿದಿಯಾ ಇಲ್ಲವಾ? ಆಗಿದ್ದರೇ ಕಾರಣ ಕೊಡಿ ಹಾಗೂ ಅವರೆಲ್ಲಾ ಯಾವ ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ತುರ್ತಾಗಿ ನೀಡುವಂತೆ ಆರ್‌ಟಿಐ ಮೂಲಕ ಮಾಹಿತಿ ಕೇಳಿದ್ದಾನೆ.


ಜಮೀನು ಕಬಳಿಸಲು ಕೋಲಾರ ಡಿಸಿ ಸಹಿ ಪೋರ್ಜರಿ ಕೇಸ್

ಕೋಲಾರ: ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಸಹಿ ಪೋರ್ಜರಿ ಕೇಸ್ ನಲ್ಲಿ (Sign Forgery Case) , ಕೋಲಾರ ತಹಶೀಲ್ದಾರ್ ಕಚೇರಿಯ (Tahsildar Office) ಸಿಬ್ಬಂದಿಗಳೇ ಭಾಗಿಯಾಗಿರೊದು ಬೆಳಕಿಗೆ ಬಂದಿದೆ, ವಕ್ಕಲೇರಿ ಹೋಬಳಿಯ ರೆವಿನ್ಯು ಇನ್ಸ್ ಪೆಕ್ಟರ್ ಮಂಜುನಾಥ್ ಹಾಗು ತಹಶೀಲ್ದಾರ್ ಕಚೇರಿಯ ಕೇಸ್  ವರ್ಕರ್  ಶೈಲಜಾ ಎನ್ನುವ  ಇಬ್ಬರನ್ನ ಕೋಲಾರದ ಗಲ್ ಪೇಟೆ ಪೊಲೀಸರು ಬಂದಿಸಿದ್ದು, ಈ ಪೋರ್ಜರಿ ಕೇಸ್ ನ ಪ್ರಮುಖ ಆರೋಪಿಯಾದ ತಾಲೂಕು ಕಚೇರಿಯ  ಶಿರಸ್ತೇದಾರ್ ಶ್ರೀನಿವಾಸ್ ಪರಾರಿಯಾಗಿದ್ದಾರೆ. ಕೋಲಾರ ತಾಲೂಕಿನ ಆಲಹಳ್ಳಿ ಗ್ರಾಮದ ಕೋಟಿ ಕೋಟಿ ಬೆಲೆ ಬಾಳುವ, ಸರ್ವೆ ಸಂಖ್ಯೆ 127 ರಲ್ಲಿನ 3.27 ಎಕರೆಯ, ಲ್ಯಾಂಡ್ ಲಾಕ್ಡ್ ಲ್ಯಾಂಡ್ ಜಮೀನನ್ನ, ಸನ್ ಲಾಡ್ಜ್ ಪ್ರಾಪರ್ಟಿ ಎನ್ನುವ ರಿಯಲ್ ಎಸ್ಟೇಟ್ ಕಂಪನಿಗೆ, ಸರ್ಕಾರಿ ನಿಗದಿತ ದರದಲ್ಲಿಮಾರಾಟ ಮಾಡುವಂತೆ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ  ಸಹಿಯುಳ್ಳ ಪತ್ರವಿರೊ ಪೈಲ್ ತಹಶೀಲ್ದಾರ್ ಕಚೇರಿಯಲ್ಲಿ ಪತ್ತೆಯಾಗಿತ್ತು.
ಅದೇ ಕಂಪನಿಗೆ  ಜಮೀನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ರಾಜ್ಯ ಸರ್ಕಾರ ಹಾಗು ಹಿಂದಿನ ಕೋಲಾರ ಜಿಲ್ಲಾಧಿಕಾರಿಯಾದ  ಸೆಲ್ವಮಣಿ ಅವರು ಖಾಸಗಿ ಕಂಪನಿ ಅರ್ಜಿ ತಿರಸ್ಕರಿಸಿದ್ದರು.  ಆದರೆ ತಹಸೀಲ್ದಾರ್ ಕಚೇರಿಯ ಕೆಲ ಅಧಿಕಾರಿಗಳು, ಈಗಿನ ಡಿಸಿ ವೆಂಕಟ್ ರಾಜಾ ಅವರು ಜಮೀನು ಮಂಜೂರು ಮಾಡುವಂತೆ ಆದೇಶಿಸಿರೊ ಮಾಹಿತಿ ನಕಲಿ ಪತ್ರದಲ್ಲಿದೆ, ಈ ಬಗ್ಗೆ ತಹಶೀಲ್ದಾರ್ ನಾಗರಾಜ್ ಗಲ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬುಧವಾರದಿಂದ ಗಲ್ ಪೇಟೆ  ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Published by:ಪಾವನ ಎಚ್ ಎಸ್
First published: