ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಆರೋಪಿಗಳ ಬಂಧನ
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಬಂಧಿತ ಆರೋಪಿಗಳನ್ನು ಶ್ರೀನಿವಾಸ್, ಮುರಳಿ, ಭೀಮಶಂಕರ್, ಈಶ್ವರ್ ಎಂದು ಗುರುತಿಸಲಾಗಿದೆ
news18-kannada Updated:November 24, 2020, 11:42 AM IST

ಸಾಂದರ್ಭಿಕ ಚಿತ್ರ
- News18 Kannada
- Last Updated: November 24, 2020, 11:42 AM IST
ದೇವನಹಳ್ಳಿ(ನ.24): ತಡರಾತ್ರಿ ರಾತ್ರಿಯಲ್ಲಿ ದರೋಡೆಗೆ ಹೊಂಚಾಕಿ ಕಾಯುತ್ತಿದ್ದ ನಾಲ್ವರು ದರೋಡೆಕೊರರನ್ನ ಬಂಧಿಸುವಲ್ಲಿ ವಿಶ್ವನಾಥಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಂಜಾನೆ 3 ಗಂಟೆ ಸಮಯದಲ್ಲಿ ದೇವನಹಳ್ಳಿ ತಾಲೂಕಿನ ಉಗನವಾಡಿ ಗ್ರಾಮದ ಐವಿಸಿ ರಸ್ತೆಯಲ್ಲಿ ಯುವಕರ ಗುಂಪು ಅನುಮಾನಾಸ್ಪದವಾಗಿ ಇರುವುದು ಪೊಲೀಸರಿಗೆ ಮಾಹಿತಿ ಬಂದಿದ್ದು, ಮಾಹಿತಿ ಮೇರೆಗೆ ಯುವಕರ ಗ್ಯಾಂಗ್ ವಿಚಾರಣೆಗಾಗಿ ವಿಶ್ವನಾಥಪುರ ಪೊಲೀಸರು ಸ್ಥಳಕ್ಕೆ ಹೋದಾಗ ಪೊಲೀಸರನ್ನ ನೋಡಿ ಒಬ್ಬ ಪರಾರಿಯಾಗಿದ್ದ. ನಂತರ ಉಳಿದ ನಾಲ್ವರನ್ನ ಬಂಧಿಸಿ ವಿಚಾರಿಸಿದಾಗ ಸಮಪರ್ಕ ಉತ್ತರ ನೀಡಿರಲಿಲ್ಲ.
ಅವರ ಬಳಿ ಒಂದು ಮಚ್ಚು, ಹಗ್ಗ, ಖಾರದ ಪುಡಿ, ಮಂಕಿ ಕ್ಯಾಪ್ ಇರುವುದು ಗಮನಕ್ಕೆ ಬಂದಿರುತ್ತದೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ದರೋಡೆಗೆ ಹೊಂಚಾಕಿ ಕಾಯುತ್ತಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸಿಎಂ ಬಿಎಸ್ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ; ಕೈ ಶಾಸಕ ಶರಣಬಸಪ್ಪಗೌಡ ಆಕ್ರೋಶ
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ಬಂಧಿತ ಆರೋಪಿಗಳನ್ನು ಶ್ರೀನಿವಾಸ್, ಮುರಳಿ, ಭೀಮಶಂಕರ್, ಈಶ್ವರ್ ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಅಜಯ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ವಿಶ್ವನಾಥಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಹಟ್ಟಿದ್ದಾರೆ. ಐ.ವಿ.ಸಿ ಹೆದ್ದಾರಿ ಸದ್ಯ ವಾಣಿಜ್ಯ ಸಾಗಾಟಗಳು, ಸುಸ್ಥಿರ ಅಭಿವೃದ್ಧಿ ಹೊಂದಿರುವ ಸ್ಥಳವಾಗಿದ್ದು, ಸಾಕಷ್ಟು ಜನ ಸಂಚರಿಸುತ್ತಾರೆ.
ಲಿಫ್ಟ್ ಕೇಳುವ ನೆಪ, ಕಾರು ಕೆಟ್ಟು ನಿಂತ ಹಾಗೆ ನಟಿಸಿ ಹಲವರಿಗೆ ತೊಂದರೆ ಕೊಟ್ಟು ತಡ ರಾತ್ರಿಯಲ್ಲಿ ಎಸ್ಕೇಪ್ ಆಗ್ತಿದ್ದ ತಂಡವು ಚಿಕ್ಕಜಾಲ, ರಾಜಾನುಕುಂಟೆ, ಯಲಹಂಕ, ವಿಶ್ವನಾಥಪುರ, ದೇವನಹಳ್ಳಿ ಪೊಲೀಸರಿಗೆ ತಲೆಬಿಸಿ ತಂದಿಟ್ಟಿದ್ದರು. ಹಲವು ದಿನಗಳಿಂದ ಪೊಲೀಸರಿಗೆ ತಲೆ ಬಿಸಿ ತಂದಿಟ್ಟಿದ್ದ ಖತರ್ನಾಕ್ ಗ್ಯಾಂಗ್ ಹೆಡೆ ಮುರಿಕಟ್ಟಿ ಸಾರ್ವಜನಿಕರಿಗೆ ನೆಮ್ಮದಿ ನೀಡಿದ್ದಾರೆ.
ಅವರ ಬಳಿ ಒಂದು ಮಚ್ಚು, ಹಗ್ಗ, ಖಾರದ ಪುಡಿ, ಮಂಕಿ ಕ್ಯಾಪ್ ಇರುವುದು ಗಮನಕ್ಕೆ ಬಂದಿರುತ್ತದೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ದರೋಡೆಗೆ ಹೊಂಚಾಕಿ ಕಾಯುತ್ತಿದ್ದರ ಬಗ್ಗೆ ಬಾಯ್ಬಿಟ್ಟಿದ್ದಾರೆ.