• Home
  • »
  • News
  • »
  • state
  • »
  • Crime News: 'ಇನ್ನೂ ಯಾಕೆ ಮದ್ವೆ ಆಗಿಲ್ಲ?' ಪ್ರಶ್ನೆಗೆ ಉತ್ತರ ಕೇಳಿ ಸ್ನೇಹಿತನನ್ನೇ ಕೊಂದ್ಬಿಟ್ಟ!

Crime News: 'ಇನ್ನೂ ಯಾಕೆ ಮದ್ವೆ ಆಗಿಲ್ಲ?' ಪ್ರಶ್ನೆಗೆ ಉತ್ತರ ಕೇಳಿ ಸ್ನೇಹಿತನನ್ನೇ ಕೊಂದ್ಬಿಟ್ಟ!

ಮೃತ ವ್ಯಕ್ತಿ ಪತ್ತೆಯಾಗಿದ್ದ ಕಾರು

ಮೃತ ವ್ಯಕ್ತಿ ಪತ್ತೆಯಾಗಿದ್ದ ಕಾರು

ಪಾರ್ಟಿ ವೇಳೆ 40 ವರ್ಷ ವಯಸ್ಸಾದರೂ ನೀನು ಇನ್ನು ಏಕೆ ಮದುವೆ ಆಗಿಲ್ಲ ಎಂದು ಶಿವಕುಮಾರ್ ಪ್ರಶ್ನೆ ಮಾಡಿದ್ದು, ಇದರಿಂದ ಅಸಮಾಧಾನಗೊಂಡ ರಾಕೇಶ್​ ಶರ್ಮಾ ಕೆಟ್ಟದಾಗಿ ಉತ್ತರಿಸಿದ್ದರಂತೆ. ಆ ಮಾತಿನೊಂದಿಗೆ ಗರಂ ಆದ ಶಿವಕುಮಾರ್ ಹಾಗೂ ಸಂಗಡಿಗರು ರಾಕೇಶ್ ಶರ್ಮಾಗೆ ಥಳಿಸಿ ಕೊಲೆಗೈದಿದ್ದಾರೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Ramanagara, India
  • Share this:

ರಾಮನಗರ: ಕಳೆದ ಡಿಸೆಂಬರ್​ 11ರಂದು ಕಾರಿನ (Car) ಹಿಂಬದಿ ಸೀಟಿನಲ್ಲಿ ಮೃತದೇಹ ಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು (Police) ಭೇದಿಸಿದ್ದು, ಮೃತ ವ್ಯಕ್ತಿಯ ಇಬ್ಬರು ಆರೋಪಿಗಳನ್ನು ಬಂಧನ (Arrest) ಮಾಡಿ ಜೈಲಿಗಟ್ಟಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಕೊಲೆಯ ಹಿಂದಿನ ಕಾರಣವೂ ಬೆಳಕಿಗೆ ಬಂದಿದೆ. ಕ್ಷುಲಕ ಕಾರಣಕ್ಕೆ ಜೊತೆಯಲ್ಲಿ ಕೂತು ಪಾರ್ಟಿ ಮಾಡುತ್ತಿದ್ದ (Friends Party) ವ್ಯಕ್ತಿಯನ್ನೇ ಆರೋಪಿಗಳು ಕೊಲೆಗೈದಿದ್ದಾರೆ. ಅಲ್ಲದೇ ಕೊಲೆಯಾದ ಬಳಿಕ ಮೃತದೇಹವನ್ನು ಬಿಟ್ಟು, ತಮಗೇನು ಗೊತ್ತೆ ಇಲ್ಲ ಅಂತ ಸ್ಥಳದಿಂದ ಎಸ್ಕೇಪ್​ ಆಗಿದ್ದ ಆರೋಪಿಗಳು ಸದ್ಯ ಜೈಲು (Jail) ಸೇರಿದ್ದಾರೆ.


ಏನಿದು ಪ್ರಕರಣ?


ಡಿಸೆಂಬರ್ 11ರಂದು ರಾಮನಗರ ಜಿಲ್ಲೆಯ ಮಾಗಡಿಯ ಕುದೂರಿನ ಬಾಣವಾಡಿ ಬಳಿ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಈ ಕುರಿತಂತೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಆತನ ಕಾರಿನಲ್ಲೇ ಪತ್ತೆಯಾದ ಮತದೇಹ ರಾಕೇಶ್​ ಶರ್ಮಾ ಎಂಬ  ಎಂದು ಗುರುತಿಸಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಪೊಲೀಸರು, ಪ್ರಕರಣ ವಿಚಾರಣೆ ಆರಂಭ ಮಾಡಿದ್ದರು.


ಇದನ್ನೂ ಓದಿ: Crime News: ಯುವತಿಯ ಖಾಸಗಿ ಫೋಟೋ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್; ಕಂಬಿ ಹಿಂದೆ ಸೇರಿದ ಆರೋಪಿ


ಘಟನೆ ದಿನ ಆಗಿದ್ದೇನು?


ಮೃತ ರಾಕೇಶ್​ ಶರ್ಮಾ ಸೇರಿದಂತೆ ಆನಂದ್, ರವಿ, ಶಿವಕುಮಾರ್, ದೀಪಕ್ ಶರ್ಮಾ ಪಾರ್ಟಿ ಮಾಡಲು ಬಾಣವಾಡಿ ಬಳಿ ಬಂದಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ಹಾಗೂ ರಾಕೇಶ್ ಶರ್ಮಾಗೆ ಗಲಾಟೆ ನಡೆದಿದೆ. ಪಾರ್ಟಿ ವೇಳೆ 40 ವರ್ಷ ವಯಸ್ಸಾದರೂ ನೀನು ಇನ್ನು ಏಕೆ ಮದುವೆ ಆಗಿಲ್ಲ ಎಂದು ಶಿವಕುಮಾರ್ ಪ್ರಶ್ನೆ ಮಾಡಿದ್ದು, ಇದರಿಂದ ಅಸಮಾಧಾನಗೊಂಡ ರಾಕೇಶ್​ ಶರ್ಮಾ, ನಿನ್ನ ಹೆಂಡತಿ ಇದ್ದಾಳೆ ಅದಕ್ಕೆ ಎಂದಿದ್ದನಂತೆ. ಈ ಮಾತಿನೊಂದಿಗೆ ಗರಂ ಆದ ಶಿವಕುಮಾರ್ ಹಾಗೂ ಸಂಗಡಿಗರು ರಾಕೇಶ್ ಶರ್ಮಾಗೆ ಥಳಿಸಿದ್ದಾರೆ. ಈ ವೇಳೆ ರಾಕೇಶ್ ಶರ್ಮಾ ಪ್ರಜ್ಞೆ ತಪ್ಪಿದ್ದ ಕಾರಣ ಆತನನ್ನು ಕಾರಿನ ಹಿಂದಿನ ಸೀಟ್​​​ನಲ್ಲಿ ಕೂರಿಸಿ ಸ್ಥಳದಿಂದ ಎಲ್ಲರು ಪರಾರಿಯಾಗಿದ್ದಾರೆ.


ಆರೋಪಿಗಳು


ಹೊಡೆತದ ತೀವ್ರತೆಯಿಂದ ರಾಕೇಶ್​ ಶರ್ಮಾ ಕಾರಿನಲ್ಲೇ ಮೃತಪಟ್ಟಿದ್ದರು. ಸದ್ಯ ಪ್ರಕರಣ ಸಂಬಂಧ ಪೊಲೀಸರು, ಆರೋಪಿಗಳಾದ ಶಿವಕುಮಾರ್, ದೀಪಕ್ ಶರ್ಮಾ ಅವರನ್ನು ಬಂಧನ ಮಾಡಿದ್ದು, ಉಳಿದ ಆರೋಪಿಗಳಾದ ರವಿ ಮತ್ತು ಆನಂದ್ ತಲೆಮರಿಸಿಕೊಂಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ತಲೆಮರಿಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.


ಗಂಟಲು ಸೀಳಿ ಯುವತಿ ಕೊಲೆ


ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ಯುವತಿ ಕತ್ತು ಸೀಳಿ ಕೊಲೆ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನಡೆದಿತ್ತು. 28 ವರ್ಷದ ಸಂತ್ರಸ್ತೆ ಚಾಂದ್ ಸುಲ್ತಾನ ಎಂಬಾಕೆ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಲೆಕ್ಕ ಪರಿಶೋಧಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಸಾದತ್ ಹರಿಹರ ಮೂಲದವನಾಗಿದ್ದು, ಮೃತ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.


ಸಂತೋಷ್ ಬಾಬು, ರಾಮನಗರ ಎಸ್​​ಪಿ


ಇದನ್ನೂ ಓದಿ: Cyber Crime: ಅಪ್ಪನ 92 ಲಕ್ಷ ಭೂ ಪರಿಹಾರದ ಹಣವನ್ನು ಆನ್​ಲೈನ್ ಗೇಮ್​ನಲ್ಲಿ ಕಳೆದ ಮಗ!


ಮೃತ ಚಾಂದ್ ಸುಲ್ತಾನ, ದಾವಣಗೆರೆ ವಿನೋಭ ನಗರದ ನಿವಾಸಿಯಾಗಿದ್ದು, ಬಡತನದಲ್ಲಿ ಹುಟ್ಟಿದ್ದ ಕಾರಣ ಛಲದಿಂದ ಓದಿ ಎಂಕಾಂ ಪದವಿಯನ್ನು ಪಡೆದಿದ್ದರು. ಅಲ್ಲದೇ ಸಿಎ ಗಾಗಿ ತರಬೇತಿಯನ್ನು ಪಡೆಯುತ್ತಿದ್ದಂತೆ. ಇತ್ತೀಚೆಗೆ ಸಹೋದ್ಯೋಗಿಯೊಂದಿಗೆ ಚಾಂದ್ ಮದುವೆ ನಿಶ್ಚಯವಾಗಿತ್ತು. ಆದರೆ ಆರೋಪಿ ಸಾದತ್ ಹಾಗೂ ಮೃತ ಯುವತಿಗೆ ಮದುವೆ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದರಂತೆ. ಆದರೆ ಕಾರಣಾಂತರಗಳಿಂದ ಇಬ್ಬರ ಮದುವೆ ರದ್ದಾಗಿತ್ತು ಎನ್ನಲಾಗಿದೆ. ಈ ನಡುವೆ ಚಾಂದ್ ಮದುವೆ ನಿಶ್ಚಯವಾಗಿದ್ದರಿಂದ ಆಕೆಯನ್ನೇ ಮದುವೆಯಾಗಬೇಕು ಅಂತ ಆರೋಪಿ ನಿರ್ಧರಿಸಿದ್ದನಂತೆ. ಆದರೆ ಇದಕ್ಕೆ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಆರೋಪಿ ಯುವತಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

Published by:Sumanth SN
First published: