ದೊಡ್ಡಬಳ್ಳಾಪುರ: ಶಾಸ್ತ್ರ ಕೇಳಿ ಮನೆ ದರೋಡೆಗೆ ತೆರಳಿದ ಯುವಕರು ಮಾಡಿದ್ದು ಕೊಲೆ; ಆರೋಪಿಗಳು ಅರೆಸ್ಟ್
ಎಲ್ಲಾ ಆರೋಪಿಗಳು ಬೆಂಗಳೂರಿನ ಯಲಹಂಕ ತಾಲ್ಲೂಕಿನ ಅಳ್ಳಾಳಸಂದ್ರ ನಿವಾಸಿಗಳು. ದರೋಡೆ ಮಾಡುವುದಕ್ಕೂ ಮೊದಲು ಇವರು ಶಾಸ್ತ್ರ ಕೇಳಿದ್ದರು. ಶಾಸ್ತ್ರ ಹೇಳು ವ್ಯಕ್ತಿ ಮನೆಯೊಂದನ್ನು ತೋರಿಸಿ, 50 ಕೋಟಿ ಹಣ ಇದೆ. ನೀವು ದರೋಡೆ ಮಾಡಬಹುದು ಎಂದಿದ್ದ.
ದೊಡ್ಡಬಳ್ಳಾಪುರ (ಸೆಪ್ಟೆಂಬರ್ 17): ದೊಡ್ಡಬೆಳವಂಗಲ ಠಾಣಾ ವ್ಯಾಪ್ತಿಯಲ್ಲಿ ಕಳೆದ ತಿಂಗಳು ನಡೆದಿದ್ದ ಒಂಟಿ ಮನೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಜಿಪಿ ಸೀಮಂತ್ ಕುಮಾರ್ ಸಿಂಗ್, “ಈ ಪ್ರಕರಣ ನಮಗೆ ತುಂಬ ಕ್ಲಿಷ್ಟ ಮತ್ತು ಕಷ್ಟಕರವಾಗಿತ್ತು. ಆರೋಪಿಗಳು ಪ್ರೊಫೆಷನಲ್ ದರೋಡೆಕೋರರಾಗಿರಲಿಲ್ಲ ಬದಲಾಗಿ ದುಡ್ಡಿನಾಸೆ, ನಿಧಿ ಶಾಸ್ತ್ರ, ಜ್ಯೋತಿಷ್ಯ ಕೇಳಿ ಯುವಕರ ತಂಡ ಇದೇ ಮೊದಲ ಬಾರಿಗೆ ದರೋಡೆಗೆ ಯತ್ನಿಸಿತ್ತು.ಸಣ್ಣ ಸುಲಿವು ಸಿಗದೆ ಸತತ 21 ದಿನ ನಮ್ಮ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರು, ಸದ್ಯ ಎಂಟು ಮಂದಿ ಆರೋಪಿಗಳಲ್ಲಿ ಆರು ಮಂದಿಯನ್ನ ಬಂಧಿಸಿದ್ದೇವೆ,” ಎಂದರು.
ಎಲ್ಲಾ ಆರೋಪಿಗಳು ಬೆಂಗಳೂರಿನ ಯಲಹಂಕ ತಾಲ್ಲೂಕಿನ ಅಳ್ಳಾಳಸಂದ್ರ ನಿವಾಸಿಗಳು. ದರೋಡೆ ಮಾಡುವುದಕ್ಕೂ ಮೊದಲು ಇವರು ಶಾಸ್ತ್ರ ಕೇಳಿದ್ದರು. ಶಾಸ್ತ್ರ ಹೇಳು ವ್ಯಕ್ತಿ ಮನೆಯೊಂದನ್ನು ತೋರಿಸಿ, 50 ಕೋಟಿ ಹಣ ಇದೆ. ನೀವು ದರೋಡೆ ಮಾಡಬಹುದು ಎಂದಿದ್ದ. ಅದಾಗಿ ಮೂರು ತಿಂಗಳು ಹೊಂಚು ಹಾಕಿ ಮನೆಗೆ ನುಗ್ಗಿದ್ದಾರೆ. ನಮ್ಮ ಕಾರು ಅಪಘಾತದಲ್ಲಿ ತಂದೆ ತಾಯಿ ಸಾವನ್ನಪ್ಪಿದ್ದಾರೆ. ಅವರ ಬಾಯಿಗೆ ನೀರು ಬಿಡಬೇಕೆಂದ ಬೇಡಿ ಮನೆ ಬಾಗಿಲು ತೆರೆಯುತ್ತಿದ್ದಂತದೆ ಒಳ ನುಗ್ಗಿದ್ದಾರೆ. ತಾಯಿ ಕಿರುಚಾಟ ಕೇಳಿ ಹೊರ ಬಂದ ಮಗನಿಗೆ ಮಚ್ಚು ಬೀಸಿ ಎಸ್ಕೇಪ್ ಆಗಿದ್ದರು. ಈಗ ಈ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆ ಪ್ರಕರಣವನ್ನು ಭೇದಿಸಿದ ಸಿಬ್ಬಂದಿಗೆ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ ಚನ್ನಣ್ಣನವರ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಲಕ್ಷ್ಮಿ ಗಣೇಶ್, ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ರಾಘವ ಎಸ್ ಗೌಡ, ಜಿಲ್ಲೆಯ ಸಬ್ಇನ್ಸ್ ಪೆಕ್ಟರ್ ಗಳು, ಸಿಬ್ಬಂದಿಗಳು ಇದ್ದರು.ಕ್ಲಿಷ್ಟ ಪ್ರಕರಣ ಬೇಧಿಸಿದ ದೊಡ್ಡಬಳ್ಳಾಪುರ ಠಾಣೆ ಪೇದೆ ಪಾಂಡುರಂಗ, ಹುಸ್ಸೇನ್, ರಂಗಸ್ವಾಮಿ ಸೇರಿದಂತೆ ಪಿ.ಎಸ್.ಐ ಗಳಾದ ಮಂಜೇಗೌಡ, ಗಜೇಂದ್ರ, ಸೋಮಶೇಖರ್, ಶಂಕರಪ್ಪ ನೇತೃತ್ವದ ತಂಡಕ್ಕೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಡ್ರಗ್ಸ್ ತಡೆ ಬಗ್ಗೆ ಬಗ್ಗೆ ಮಾಹಿತಿ:
ಡ್ರಗ್ಸ್ ಹಾಗೂ ಮಾದಕ ವಸ್ತುಗಳು ಕುರಿತು ಕಾಲೇಜು-ವಿದ್ಯಾಸಂಸ್ಥೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟ ಕುರಿತು ಆಡಳಿತ ಮಂಡಳಿಗಳ ಜೊತೆ ಸಭೆ ನಡೆಸಲಾಗುವುದು. ಡ್ರಗ್ಸ್ , ಗಾಂಜಾ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿದ್ದೇವೆ. ಪೆಡ್ಲರ್ ಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಐಜಿಪಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ