Congress Protest: ಪೇಸಿಎಂ ಪೋಸ್ಟರ್ ಅಂಟಿಸಿದ ಸಿದ್ದು, ಡಿಕೆಶಿ, ಸುರ್ಜೇವಾಲರನ್ನು ವಶಕ್ಕೆ ಪಡೆದ ಪೊಲೀಸರು!

ಪೇಸಿಎಂ ಪೋಸ್ಟರ್ ಅಂಟಿಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಇದೇ ವೇಳೆ ಪೋಸ್ಟರ್ ಅಂಟಿಸುತ್ತಿದ್ದ ನಲಪಾಡ್​ ಅವರನ್ನು ಪೊಲೀಸರು ಹೊತ್ತೊಯ್ದಿದ್ದಾರೆ.

ಪೋಸ್ಟರ್​ ಅಂಟಿಸಿದ ಕಾಂಗ್ರೆಸ್ ನಾಯಕರು

ಪೋಸ್ಟರ್​ ಅಂಟಿಸಿದ ಕಾಂಗ್ರೆಸ್ ನಾಯಕರು

  • Share this:
ಬಿಜೆಪಿ ಸರ್ಕಾರದ (BJP Government) 40 ಪರ್ಸೆಂಟ್​ ಕಮಿಷನ್ ಆರೋಪ ಮಾಡ್ತಿರೋ ಕಾಂಗ್ರೆಸ್, ಪ್ರತಿಭಟನೆ ಮೂಲಕ ಮತ್ತೆ ಸಮರ ಸಾರಿದೆ. ಪೇಸಿಎಂ ಪೋಸ್ಟರ್ (PayCM Poster)​ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ನಾವೇ ಪೋಸ್ಟರ್​ ಅಂಟಿಸಿದ್ದು ಹೇಳಿಕೆ ನೀಡಿದ ಮೇಲೆ ಬಿಜೆಪಿ (BJP) ಅವರು ಕೈ ನಾಯಕರ (Congress Leaders) ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇತ್ತ ಕಾಂಗ್ರೆಸ್​ ನಾಯಕರು ಮತ್ತೆ ಪೇಸಿಎಂ ಪೋಸ್ಟರ್ ಅಂಟಿಸಿ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ವೋಲ್ವೋ ಕಚೇರಿ ಎದುರು ರೇಸ್ ಕೋರ್ಸ್ ಕಾಂಪೌಂಡ್ ಗೆ ಪ್ರತಿಭಟನಾರ್ಥವಾಗಿ ಪೇಸಿಎಂ ಪೋಸ್ಟರ್ ಅಂಟಿಸಲಿದ್ದರು. ಪೋಸ್ಟರ್​ ಅಂಟಿಸಿದ್ದ ಕೆಲವೇ ಕ್ಷಣಗಳಲ್ಲಿ ಅದನ್ನು ಪೊಲೀಸರು (Police) ಕಿತ್ತು ಎಸೆದಿದ್ದಾರೆ.

ಪೇಸಿಎಂ ಪೋಸ್ಟರ್​ ಅಂಟಿಸಿದ ಡಿಕೆಶಿ , ಸಿದ್ದು

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಮತ್ತಿತರ ಮುಖಂಡರು ಪ್ರತಿಭಟನೆ ಜಾಥಾದಲ್ಲಿ ಭಾಗಿಯಾಗಿದ್ದಾರೆ. ಇಂದು ಸಂಜೆ 4:45ಕ್ಕೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ವೋಲ್ವೋ ಕಚೇರಿ ಎದುರು ರೇಸ್ ಕೋರ್ಸ್ ಕಾಂಪೌಂಡ್ ಗೆ ಪ್ರತಿಭಟನಾರ್ಥವಾಗಿ ಪೇ ಸಿಎಂ ಪೋಸ್ಟರ್ ಅಂಟಿಸಿದ್ದಾರೆ.



ಈಗ ನಮ್ಮ ಮೇಲೆ ಕೇಸ್ ಹಾಕಲಿ – ಡಿಕೆಶಿ

ಇದೇ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಪೋಸ್ಟರ್ ಹಾಕಿದ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಈಗ ನಮ್ಮ ಮೇಲೆ ಕೇಸ್ ಹಾಕಲಿ, ಸಿದ್ದರಾಮಯ್ಯ ಮೇಲೆ ಕೇಸ್ ಹಾಕಲಿ ಎಂದು ಸವಾಲು ಹಾಕಿದ್ರು. ನಾವು ಯಾವುದೇ ಜಾತಿ ಧರ್ಮದ ವಿರುದ್ದ ಹೋರಾಟ ಮಾಡ್ತಾ ಇಲ್ಲ. ನಾವು ಯಾವುದೇ ಜಾತಿಯ ಸಿಎಂಗೆ ಅವಮಾನ ಮಾಡುತ್ತಿಲ್ಲ. ನಾವು ನಮ್ಮ ಮುಖ್ಯಮಂತ್ರಿಗಳ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿ ಕಾಂಗ್ರೆಸ್ ಭವನದತ್ತ ನಾಯಕರು ತೆರಳಿದ್ದಾರೆ.

ಇದನ್ನೂ ಓದಿ: H D Kumaraswamy: ಸಚಿವ ಅಶ್ವತ್ಥ ನಾರಾಯಣ ತಲೆದಂಡ ಆಗಲೇಬೇಕು; 3 ಬೇಡಿಕೆ ಮುಂದಿಟ್ಟ ಎಚ್​ಡಿಕೆ!

ಕ್ಷಣಾರ್ಧದಲ್ಲಿ ಪೋಸ್ಟರ್​ ಕಿತ್ತು ಹಾಕಿದ ಪೊಲೀಸರು

ಕಾಂಗ್ರೆಸ್​ ನಾಯಕರು ಅಂಟಿಸಿದ ಕ್ಷಣಾರ್ಧದಲ್ಲಿ ಪೊಲೀಸರು ಪೋಸ್ಟರ್​ ಕಿತ್ತು ಹಾಕಿದ್ದಾರೆ. ಈ ವೇಳೆ ಕೆಲ ಕಾಲ ಪೊಲೀಸರು ಹಾಗೂ ನಾಯಕರ ನಡುವೆ ವಾದ-ವಿವಾದ ಕೂಡ ನಡೆದಿದೆ. ಈ ವೇಳೆ ಶಾಸಕ ರಂಗನಾಥ್​ ಅವರನ್ನು ಪೊಲೀಸರು ಹಿಡಿದು ಎಳೆದಾಡಿದ್ದಾರೆ. ಅವರು ಶಾಸಕರು ಅನ್ನೋದು ಗೊತ್ತಾಗದೆ ಪೊಲೀಸರು ಎಳೆದಿದ್ದಾರೆ. ಇದಕ್ಕೆ ರಂಗನಾಥ್ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲ ಕಿಡಿ

ಪೇಸಿಎಂ ಪೋಸ್ಟರ್ ಅಂಟಿಸಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ರೇಸ್ ಕೋರ್ಸ್ ರಸ್ತೆಯಲ್ಲಿ ಎಂ.ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಇದೇ ವೇಳೆ ಪೋಸ್ಟರ್ ಅಂಟಿಸುತ್ತಿದ್ದ ನಲಪಾಡ್​ ಅವರನ್ನು ಪೊಲೀಸರು ಹೊತ್ತೊಯ್ದಿದ್ದಾರೆ.

ಇದನ್ನೂ ಓದಿ: H D Kumaraswamy: ಸಚಿವ ಅಶ್ವತ್ಥ ನಾರಾಯಣ ತಲೆದಂಡ ಆಗಲೇಬೇಕು; 3 ಬೇಡಿಕೆ ಮುಂದಿಟ್ಟ ಎಚ್​ಡಿಕೆ!

 ಸರಣಿ ಟ್ವೀಟ್ ಮೂಲಕ ವಾಗ್ದಾಳಿ

ಪೇಸಿಎಂ ಮತ್ತು 40 ಪರ್ಸೆಂಟ್ ಸರ್ಕಾರ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಶುಕ್ರವಾರವೂ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ಮುಂದುವರಿಸಿದೆ. ಮುಖ್ಯಮಂತ್ರಿ ಹುದ್ದೆಗೆ ₹2,500 ಕೋಟಿ ನೀಡಬೇಕು ಎಂದವರು ಬೇರೆ ಯಾರೂ ಅಲ್ಲ ಸ್ವತಃ ಬಿಜೆಪಿ ಶಾಸಕ ಯತ್ನಾಳ್. 40 ಪರ್ಸೆಂಟ್ ಸರ್ಕಾರದ ಸಿಎಂ ಕೂಡ ಪುಗಸಟ್ಟೆ ಬಂದಿಲ್ಲ ಪೇ ಮಾಡಿಯೇ ಬಂದಿದ್ದು ಅಲ್ಲವೇ ಬಿಜೆಪಿ ಸರ್ಕಾರ? ಈ ಬಗ್ಗೆ ಬಿಜೆಪಿಗರು ಮಾತಾಡುವುದಿಲ್ಲವೇಕೆ? ಮೌನವಿದೆ ಎಂದರೆ ಅಲ್ಲಿ ಸತ್ಯವಿದೆ ಎಂದರ್ಥವಲ್ಲವೇ ಮಾನ್ಯ ಪೇಸಿಎಂ ಅವರೇ? ಎಂದು ಕಿಡಿಕಾರಿದೆ.
Published by:ಪಾವನ ಎಚ್ ಎಸ್
First published: