ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಂದ ಕೊಲೆ (Murder) ಮಾಡುತ್ತಿರುವ ಘಟನೆಗಳು ವರದಿಯಾಗಿದೆ. ಹಾಗೆಯೇ ಕೆಲವೊಮ್ಮೆ ಕೆಲ ಪ್ರಕರಣಗಳಲ್ಲಿ ಆರೋಪಿಗಳು ಕೈಗೆ ಸಿಗುವುದಿಲ್ಲ ಎನ್ನುವ ರೀತಿಯಲ್ಲಿ ಕೊಲೆಯಾಗಿರುತ್ತದೆ. ಆದರೆ ಪೊಲೀಸರು (Police) ಮಾತ್ರ ಸಣ್ಣ ಸುಳಿವನ್ನು ಬಿಟ್ಟು ಕೊಡದೆ ಪರಾರಿಯಾಗಿದ್ದ ಆರೋಪಿಗಳನ್ನು ಸಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ. ಇಂತಹದೇ ಒಂದು ಪ್ರಕರಣ ಬೆಂಗಳೂರಿನಲ್ಲಿ (Bengaluru) ಸಹ ವರದಿಯಾಗಿದ್ದು, ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರಿನ ಬನಶಂಕರಿಯ ಸರಬ.ಡೆ ಪಾಳ್ಯದ ಯುವಕ ದಿವಾಕರ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು ರಾಮನಗರ ಜಿಲ್ಲೆಯ ಂಆಗಡಿ ಕೆರೆಯಲ್ಲಿ ಮೂಟೆ ಕಟ್ಟಿ ಬಿಸಾಡಿದ್ದರು. ಈ ಮೂಟೆಯ ಸಣ್ಣ ಜಾಡು ಹಿಡಿದು ಹೋದ ಪೊಲೀಸರು ಪಾಪಿಗಳನ್ನು ಬಂಧಿಸಿದ್ದಾರೆ.
ಚಿನ್ನ ನೀಡುವುದಾಗಿ ನಂಬಿಸಿ ಕೊಲೆ
ಜನವರಿ 20 ರಂದು ಚಿನ್ನ ಖರೀದಿಸಲು ತೆರಳಿದ್ದ ದಿವಾಕರ್ ಮನೆಯಿಂದ 5 ಲಕ್ಷ ರೂಗಳನ್ನು ತೆಗೆದುಕೊಂಡು ಹೊಗಿದ್ದ, ಆದರೆ ದಿವಾಕರ್ ವಾಪಾಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮಗನನ್ನ ಪತ್ತೆ ಹಚ್ಚುವಂತೆ ಪೊಲೀಸರ ಬಳಿ ದೂರು ನೀಡಿದ್ದಾರೆ. ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೆರೆಯಲ್ಲಿ ಮೊಟೆಯ ಒಳಗೆ ಶವ ಪತ್ತೆಯಾಗಿದೆ.
ಇದನ್ನೂ ಓದಿ: ನಾವು ಕುಡಿದು ಬಿಟ್ಟ ನೀರನ್ನು ತಮಿಳುನಾಡಿನವರು ಕುಡೀತಾರೆ: ಹೊಗೇನಕಲ್ ಯೋಜನೆ ಬಗ್ಗೆ Minister Somanna ಹೇಳಿಕೆ
ಇನ್ನು ಆರೋಪಿಗಳು ಕಡಿಮೆ ಬೆಲೆಯಲ್ಲಿ ಚಿನ್ನ ಕೊಡುವುದಾಗಿ ನಂಬಿಸಿ ಸುಂಕದ ಕಟ್ಟೆಗೆ ಕರೆಸಿಕೊಂಡಿದ್ದರು., ಅಲ್ಲಿ ಹಣದ ಸಮೇತ ಬಂದ ದಿವಾಕರ್ನ್ನ ಕೊಲೆ ಮಾಡಿ ಮೂಟೆಯಲ್ಲಿ ಕಟ್ಟಿ ಕರೆಗೆ ಎಸೆದು ಪರಾರಿಯಾಗಿದ್ದಾರೆ.
ಮೂಟೆಯಲ್ಲಿ ಸಿಕ್ಕಿತ್ತು ಐಡಿ ಕಾರ್ಡ್
ಇದನ್ನೂ ಓದಿ: ಲಿಫ್ಟ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ವೈದ್ಯ ಅಮಾನತು
ಪೊಲೀಸರಿಗೆ ಮಾಗಡಿ ಕೆರೆಯಲ್ಲಿ ಮೂಟೆ ಸಿಕ್ಕಿದಾಗ ಅದರಲ್ಲಿ ಒಂದು ಐಡಿ ಕಾರ್ಡ್ ಲಭಿಸಿತ್ತು. ಆ ಕಾರ್ಡ್ನಲ್ಲಿ ದಿವಾಕರ್ ಎನ್ನುವ ಹೆಸರು ಹಾಗೂ ಮನೆ ವಿಳಾಸ ಇತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರು ದಿವಾಕರ್ ಕೊಲೆಯಾಗಿರುವುದನ್ನ ಕಂಡುಕೊಂಡು, ಆ ಮೂಲಕ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ದಿವಾಕರ್ನ ಕತ್ತು ಹಿಸುಕಿ ಕೊಂದಿದ್ದ ಮಂಜುನಾಥ್ ಮತ್ತು ರಾಜು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ