• Home
  • »
  • News
  • »
  • state
  • »
  • Murder: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಹತ್ಯೆ; ಇಬ್ಬರು ಆರೋಪಿಗಳ ಬಂಧನ

Murder: ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಹತ್ಯೆ; ಇಬ್ಬರು ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನ್ಯ ಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಎಂ.ಡಿ ಶಾಬುದ್ದಿನ್ (19), ಎಂಡಿ ನವಾಜ್ (19) ಬಂಧಿತ ಆರೋಪಿಗಳು,

  • Share this:

ಕಲಬುರಗಿ (ಮೇ 27): ವಾಡಿಯಲ್ಲಿ ಯುವಕನ ಮರ್ಡರ್​​ ಕೇಸ್​ಗೆ (Murder Case) ಟ್ವಿಸ್ಟ್​​ ಸಿಕ್ಕಿದೆ. ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನನ್ನು ಹತ್ಯೆ ಮಾಡಲಾಗಿದೆ. ಚಿತ್ತಾಪೂರ ತಾಲೂಕಿನ ವಾಡಿ ಪಟ್ಟಣದಲ್ಲಿ ವಿಜಯ್​ ಕಾಂಬಳೆ (28) ಭೀಕರ ಕೊಲೆಯಾಗಿದೆ. ವಿಜಯ್​ ಕಾಂಬಳೆ (Vijay Kambale) ಕೊಲೆ ಹಿಂದೆ ಹಲವು ಅನುಮಾನವಿದೆ. ಪ್ರೇಮ ಪ್ರಕರಣದ (Love Case) ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಿದ್ದಾರೆ. ಕಬ್ಬಿಣದ ರಾಡ್ ನಿಂದ ಹೊಡೆದು, ಚಾಕುವಿನಿಂದ (Knife) ಇರಿದು ಆತನ ಕೊಲೆ ಮಾಡಲಾಗಿದೆ. ಈ ಸಂಬಂಧ ವಾಡಿ ಪೋಲಿಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.


ಪ್ರೀತಿಗೆ ಯುವತಿ ಮನೆಯವರು ವಿರೋಧ


ಗುರುವಾರ ಕಲಬುರಗಿ ಜಿಲ್ಲೆಯಲ್ಲಿ ಬೇರೆ ಧರ್ಮದ ಮಹಿಳೆಯನ್ನು ಪ್ರೀತಿಸುತ್ತಿದ್ದ 25 ವರ್ಷದ ಹಿಂದೂ ಯುವಕನ ಹತ್ಯೆಯ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ.  ಭೀಮಾನಗರ ಬಡಾವಣೆಯ ನಿವಾಸಿ ವಿಜಯ ಕಾಂಬಳೆ ಅನ್ಯ ಧರ್ಮದ ಮಹಿಳೆಯನ್ನು ಪ್ರೀತಿಸುತ್ತಿದ್ದ ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದ. ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.


ವಿಜಯ್​ ಕಾಂಬಳೆ ಮೇಲೆ ದಾಳಿ  


ವಿಜಯ್​ ಕಾಂಬಳೆಯನ್ನು ರೈಲ್ವೇ ನಿಲ್ದಾಣ ಬಳಿ ತಡೆದ ದುಷ್ಕರ್ಮಿಗಳು ಆತನ ಮೇಲೆ ಕಲ್ಲು, ಇಟ್ಟಿಗೆಯಿಂದ ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ರಕ್ತ ಸ್ರಾವದಿಂದ ವಿಜಯ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ವಾಡಿ ಪಟ್ಟಣದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪಟ್ಟಣದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ವಾಡಿ ಪೊಲೀಸರು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿದ್ದಾರೆ.


ಇದನ್ನೂ ಓದಿ: Belagavi: ಮತ್ತೆ ಎಂಇಎಸ್ ಪುಂಡಾಟ; ಕನ್ನಡ ಹಾಡು ಹಾಕಿದ್ದಕ್ಕೆ ಬೈಕ್​ಗೆ ಬೆಂಕಿ ಹಚ್ಚಿ ಹಲ್ಲೆ


ಕೊಲೆ ಸಂಬಂಧ ಇಬ್ಬರ ಬಂಧನ


ಅನ್ಯ ಕೋಮಿನ ಯುವತಿ ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಎಂ.ಡಿ ಶಾಬುದ್ದಿನ್ (19), ಎಂಡಿ ನವಾಜ್ (19) ಬಂಧಿತ ಆರೋಪಿಗಳು, ಕೊಲೆಯಾದ ವಿಜಯ್ ಕಾಂಬಳೆ, ಶಾಬುದ್ಧೀನ್ ಎಂಬಾತನ ಸಹೋದರಿಯನ್ನ ಕಳೆದ 2 ವರ್ಷದಿಂದ ಪ್ರೀತಿಸುತ್ತಿದ್ದ,


ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಾಬುದ್ದೀನ್ , ಸ್ನೇಹಿತರೊಂದಿಗೆ ವಾಡಿ ಪಟ್ಟಣದ ರೈಲ್ವೆ ನಿಲ್ದಾಣ ಬಳಿ ಕುಳಿತಿದ್ದ ವೇಳೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತ್ರ ಕಲಬುರ್ಗಿ ಯಲ್ಲಿ ತಲೆ ಮರೆಸಿಕೊಂಡಿದ್ದರು. ಕಲಬುರ್ಗಿಯಲ್ಲಿ ಇಬ್ಬರು ಆರೋಪಿಗಳನ್ನ  ಬಂಧಿಸಿದ ವಾಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ಲವ್ ಜಿಹಾದ್​ಗೆ ಯುವತಿ ಬಲಿ


ಉಡುಪಿ : ಲವ್ ಜಿಹಾದ್  ಕರಾವಳಿಯಲ್ಲಿ ಮತ್ತೆ ಸದ್ದು ಮಾಡಿದೆ.‌ ಮುಸ್ಲಿಂ ‌ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತ ಯುವತಿ ಇಲಿಪಾಷಾಣ ಸೇವಿಸಿ  ಆತ್ಮಹತ್ಯೆ ಅಣ್ಣ ನಾನು ತಪ್ಪು ಮಾಡಿದ್ದೇನೆ ಅಂತ ಸಾವಿನ ಕೊನೆ ಕ್ಷಣದಲ್ಲಿ ನೋವನ್ನ ಹೊರಹಾಕಿದ್ದಾಳೆ ಆ ಯುವತಿ.  ಯುವತಿಯ ಸಾವಿಗೆ ಕಾರಣನಾದ ಕಿರಾತಕ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ. ಉಡುಪಿಯಲ್ಲಿ ನಡೆದ ಲವ್ ಸೆಕ್ಸ್ ದೋಖಗೆ ಶಿಲ್ಪಾ ದೇವಾಡಿಗ ಬಲಿಯಾಗಿದ್ದಾರೆ.


ಇದನ್ನೂ ಓದಿ:  Text Book Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧ; ಮೇ 31ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರವೇ ಸಜ್ಜು


ಮದುವೆ ಮಾಡಿಕೊಳ್ಳಲು ಮತಾಂತರಕ್ಕೆ ಒತ್ತಾಯ

 ಕಳೆದ ಐದು ವರ್ಷಗಳ ಹಿಂದೆ ಮೂಡುಗೋಪಾಡಿ ನಿವಾಸಿ  ಅಜೀಜ್ (32) ಎಂಬಾತ ಶಿಲ್ಪಾಳ ಸ್ನೇಹ ಸಂಪಾದಿಸಿದ್ದ. ಮೊದಲೇ‌ ಮೋಸ ಮಾಡುವುದರಲ್ಲೇ ಚಾಲಾಕಿಯಾದ್ದ ಅಜೀಜ್, ಶಿಲ್ಪಾಳಿಗೆ ಪ್ರೀತಿ ಗೀತಿ ಅಂತ ಯಾಮಾರಿಸಿ ನಿರಂತರವಾಗಿ ದೈಹಿಕ ಸಂಪರ್ಕ ಹೊಂದಿದ್ದ. ಆಗಾಗ ಕೋಟೇಶ್ವರದಲ್ಲಿ ತನ್ನ ಫ್ಲಾಟ್ ಗೆ ಶಿಲ್ಪಾಳನ್ನು ಕರೆಯಿಸಿಕೊಳ್ತಿದ್ದ.  ಅಜೀಜ್, ಆಕೆಯ ಬೆತ್ತಲೆ ಫೋಟೋಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ, ಆಗಾಗ ಆಕೆಗೆ ಬೆತ್ತಲೆ ಫೋಟೋ ಕಳುಹಿಸುವಂತೆ, ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ, ಒತ್ತಾಯಿಸುತ್ತಿದ್ದ. ಕಳೆದ ಕೆಲವು ದಿನಗಳ ಹಿಂದೆ ಶಿಲ್ಪಾ ತನ್ನನ್ನು ಮದುವೆಯಾಗುವಂತೆ ಅಜೀಜ್  ಬಳಿ ಕೇಳಿದ್ರೆ ಆತ ಮತಾಂತರವಾಗುವಂತೆ ಒತ್ತಾಯ ಮಾಡಿದ್ದ.

ವಿಡಿಯೋ ವೈರಲ್​ ಮಾಡೋದಾಗಿ ಬೆದರಿಕೆ


ಕೊನೆ ಕೊನೆಗೆ ಮದುವೆ ಹಠ ಹಿಡಿದಾಗ ಮುಸ್ಲೀಂ ಧರ್ಮಕ್ಕೆ ಮತಾಂತರಕ್ಕೆ ಒತ್ತಾಯ ಮಾಡುತ್ತಿದ್ದ ಇದಕ್ಕೆ ಶಿಲ್ಪಾ ಒಪ್ಪದಿದ್ದಾಗ ಆಕೆ ಬೆತ್ತಲೆ ಫೋಟೋ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಬೆನ್ನಲ್ಲೆ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿರಂತರವಾಗಿ ಶಿಲ್ಪಾಳನ್ನು ದೈಹಿಕವಾಗಿ ಬಳಸಿಕೊಂಡಿದ್ದ ಅಜೀಜ್‌ಗೆ ಶಿಲ್ಪಾಳ ಪರಿಚಯಕ್ಕೂ ಮೊದಲೇ ಹಂಗಳೂರಿನ ಸಲ್ಮಾ (30) ಎಂಬ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದ.

Published by:Pavana HS
First published: