ಮಂಡ್ಯ(ಫೆ. 16): ಸ್ವಂತ ಅಳಿಯನನ್ನೇ ಮುಗಿಸಲು ಸುಪಾರಿ ಕೊಟ್ಟಿದ್ದ ಅತ್ತೆ ಮಾವ ಕೊನೆಗೆ ಸುಪಾರಿ ಪಡೆದವರಿದಂಲೇ ದರೋಡೆಗೆ ಒಳಗಾಗಿದ್ದಾರೆ. ಅಲ್ಲದೆ, ಆ ದರೋಡೆಕೋರರ ಜೊತೆಯೇ ಇವರೂ ಜೈಲು ಪಾಲಾಗಿರೋ ಘಟನೆ ಸಕ್ಕರೆನಾಡಲ್ಲಿ ಬೆಳಕಿಗೆ ಬಂದಿದೆ. ಮಳವಳ್ಳಿಯ ಪುಟ್ಟತಾಯಮ್ಮ ಮತ್ತು ವೆಂಕಟೇಶ್ ದಂಪತಿ ಈಗ ಕೃಷ್ಣನ ಜನ್ಮಸ್ಥಾನ ಸೇರಿದ್ಧಾರೆ. ಇವರಿಂದ ಸುಪಾರಿ ಪಡೆದು ಇವರನ್ನೇ ದರೋಡೆ ಮಾಡಿದ್ದ ಇನ್ನೂ ಐವರು ಖದೀಮರೂ ಜೈಲು ಸೇರಿದ್ದಾರೆ. ಇದಕ್ಕೂ ಮುನ್ನ ಇವರು ಸಿಕ್ಕಿಬಿದ್ದ ಕಥೆ ಇನ್ನೂ ಕುತೂಹಲಕರವಾಗಿದೆ.
ಬೆಂಗಳೂರಿನ ಉದಯನಗರದ ಲೋಕೇಶ್, ಕೆಂಗೇರಿಯ ಶ್ರೀನಿವಾಸಪುರದ ಮೋಹನ್ ಮತ್ತು ಲೋಕೇಶ್ವರ ರಾವ್, ಮಳವಳ್ಳಿಯ ಕಲ್ಲಂಡಗಿ ವ್ಯಾಪಾರಿ ಕುಮಾರ್ ಮತ್ತು ಗಂಗಾಮತ ಬೀದಿಯ ಬಸವಯ್ಯ ಕೇರಿಯ ಮಹದೇವ ಈ ಐವರು ಸೇರಿ ಪುಟ್ಟತಾಯಮ್ಮ ಮತ್ತು ವೆಂಕಟೇಶ್ ದಂಪತಿಯ ಮನೆಯನ್ನು ದರೋಡೆ ಮಾಡುತ್ತಾರೆ. ಮಳವಳ್ಳಿಯ ಈ ದಂಪತಿ ಪೊಲೀಸ್ ಠಾಣೆಗೆ ದೂರು ಕೊಡುತ್ತಾರೆ. ದೂರು ಬಂದ ಎಂಟೇ ಗಂಟೆಯಲ್ಲಿ ಮಳವಳ್ಳಿ ಪೊಲೀಸರು ಪ್ರಕರಣವನ್ನು ಭೇದಿಸಿ ದರೋಡೆಕೋರರನ್ನು ಎಡೆಮುರಿ ಕಟ್ಟಿ ಬಂಧಿಸುತ್ತಾರೆ. ದರೋಡೆ ಮಾಡಿದ ಹಣ ಮತ್ತು ಚಿನ್ನದ ಸರವನ್ನು ಇವರಿಂದ ಪೊಲೀಸರು ಜಫ್ತಿ ಮಾಡುತ್ತಾರೆ.
ಇದನ್ನೂ ಓದಿ: ಆಯುಧ ಹಿಡಿದ ಕೈಯಲ್ಲಿ ಸ್ಟೆತಸ್ಕೋಪ್ - ಕೊಲೆ ಶಿಕ್ಷೆಗೆ ಗುರಿಯಾದಾತ ಈಗ ಜೀವದಾತ ವೈದ್ಯ
ಆದರೆ, ಬಂಧಿತ ದರೋಡೆಕೋರರನ್ನು ವಿಚಾರಣೆಗೊಳಪಡಿಸಿದಾಗ ಪೊಲೀಸರಿಗೆ ಈ ಪ್ರಕರಣದಲ್ಲಿ ಹೊಸ ಸುಳಿವು ಸಿಗುತ್ತದೆ. ಆರೋಪಿಗಳು ಬಾಯ್ಬಿಟ್ಟ ಸತ್ಯ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಪೊಲೀಸರಿಗೆ ದೂರು ಕೊಟ್ಟಿದ್ದ ಪುಟ್ಟತಾಯಮ್ಮ ಮತ್ತು ವೆಂಕಟೇಶ್ ಅವರು ತಮ್ಮ ಅಳಿಯನ ಕೊಲೆಗೆ ಸುಪಾರಿ ಕೊಟ್ಟಿದ್ದ ಸಂಗತಿ ಬೆಳಕಿಗೆ ಬರುತ್ತದೆ.
ಇದನ್ನೂ ಓದಿ: ಹೊಸಪೇಟೆ ಅಪಘಾತ ಪ್ರಕರಣ; ದಿಢೀರ್ ಬೆಳವಣಿಗೆಯಲ್ಲಿ ಪ್ರತ್ಯಕ್ಷನಾದ ಸಚಿವ ಆರ್. ಅಶೋಕ್ ಮಗ; ಬಲಗೊಂಡ ಅನುಮಾನ
ದರೋಡೆಕೋರರು ಹೇಳಿದ ಪ್ರಕಾರ ಪುಟ್ಟತಾಮಯ್ಯ ಮತ್ತು ವೆಂಕಟೇಶ್ ದಂಪತಿ ತಮ್ಮ ಅಳಿಯನ ಕೊಲೆಗೆ 5 ಲಕ್ಷ ರೂ ಸುಪಾರಿ ಕೊಟ್ಟಿದ್ದರಂತೆ. ಬೆಂಗಳೂರಿನಲ್ಲಿರುವ ತನ್ನ ಮಗಳು ಸುಷ್ಮಾಅನ್ಯ ಜಾತಿಯ ಯುವಕನ್ನು ಮದುವೆಯಾಗಿದ್ದ ಕಾರಣಕ್ಕೆ ಅಳಿಯ ಅರುಣಕುಮಾರ್ನನ್ನು ಕೊಲೆ ಮಾಡಿಸಲು 5 ಲಕ್ಷಕ್ಕೆ ಮಾತುಕತೆ ಮಾಡಿ 2 ಲಕ್ಷ ಮುಂಗಡ ಕೂಡ ನೀಡುತ್ತಾರೆ. ಉಳಿಕೆ ಹಣ ಕೆಲಸ ನಂತರ ನೀಡೋದಾಗಿ ಹೇಳಿರುತ್ತಾರೆ. ಆದ್ರೆ ಉಳಿಕೆ ಹಣ ನೀಡುವಂತೆ ಈ ದರೋಡೆಕೋರರು ಮನೆಗೆ ಬಂದು ಒತ್ತಾಯ ಮಾಡುತ್ತಾರೆ. ಹಣ ಕೊಡಲು ನಿರಾಕರಿಸಿದ್ದಕ್ಕೆ ಮನೆಯಲ್ಲಿ 40 ಸಾವಿರ ರೂ ನಗದು ಮತ್ತು ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಾರೆ. ಈ ಸಂಬಂಧ ಪುಟ್ಟ ತಾಯಮ್ಮ ಹಾಗೂ ವೆಂಕಟೇಶ್ ಎಂಬ ದಂಪತಿ ಮಳವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿಗಳ ಬಗ್ಗೆ ಕೊಟ್ಟ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸುಪಾರಿ ಸತ್ಯ ಹೊರಬಂದಿದೆ.
ಒಟ್ಟಾರೆ ದರೋಡೆ ಪ್ರಕರಣದಲ್ಲಿ ದೂರು ನೀಡಿದ್ದ ದಂಪತಿ ಇದೀಗ ದರೋಡೆಕೋರರ ಜೊತೆಗೆ ಶ್ರೀಕೃಷ್ಣನ ಜನ್ಮಸ್ಥಾನ ಸೇರಿದು ನಿಜಕ್ಕೂ ವಿಪರ್ಯಾಸವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ