• Home
  • »
  • News
  • »
  • state
  • »
  • Karawar: ಪೊಲೀಸ್ ಅಧಿಕಾರಿ ಮೇಲೆ ಹಲ್ಲೆಗೆ ಯತ್ನ; ಪುಂಡರ ಹೆಡೆಮುರಿ ಕಟ್ಟಿದ ಖಾಕಿ ಪಡೆ

Karawar: ಪೊಲೀಸ್ ಅಧಿಕಾರಿ ಮೇಲೆ ಹಲ್ಲೆಗೆ ಯತ್ನ; ಪುಂಡರ ಹೆಡೆಮುರಿ ಕಟ್ಟಿದ ಖಾಕಿ ಪಡೆ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಗುಂಪು ಚದುರಿ ಹೋಗದ ಹಿನ್ನಲೆಯಲ್ಲಿ ತಾವೇ ಕೆಳಗೆ ಇಳಿದು ಯಾಕೆ ಗಲಾಟೆ ಮಾಡುವುದಾಗಿ ಪ್ರಶ್ನಿಸಲು ಮುಂದಾದಾಗ, ಕಾರಿನಲ್ಲಿದ್ದವರು ಎಎಸ್‌ಪಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ‘ನಮಗೆ ಕೇಳಲು ನೀವ್ಯಾರು?’ ಎಂದು ಎಎಸ್‌ಪಿಯವರನ್ನೇ ಪ್ರಶ್ನೆ ಮಾಡಿದ್ದಾರೆ.

  • Share this:

ಕಾರವಾರ(ಮಾ.30): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಎಸ್.ಭದ್ರಿನಾಥ್ ಅವರ ಮೇಲೆ ಸ್ಥಳೀಯ ರಾಜಕೀಯ ಮುಖಂಡ ಹಾಗೂ ಮತ್ತವನ ತಂಡ ಕಾರು ಹರಿಸಲು ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೃತ್ಯದಲ್ಲಿ ಭಾಗಿಯಾದ ನಾಲ್ವರನ್ನ ಪೋಲಿಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.


ನಡೆದಿದ್ದು ಏನು?


ಅಂಕೋಲಾದ ಹಟ್ಟಿಕೇರಿ ಗ್ರಾಮದ ಬಳಿಯ ಐಆರ್‌ಬಿ ಟೋಲ್‌ನಲ್ಲಿ ಸೋಮವಾರ ಹೋಳಿಯ ದಿನ ಮಧ್ಯಾಹ್ನದ ವೇಳೆ ಗಲಾಟೆಯೊಂದು ನಡೆಯುತ್ತಿತ್ತು. ಟೋಲ್ ಗೇಟ್ ದಾಟುವಾಗ ಕಾರನ್ನು ತಡೆದರು ಎನ್ನುವ ಕಾರಣಕ್ಕೆ ಅಂಕೋಲಾದ ಉದ್ಯಮಿ ಸುರೇಶ್ ನಾಯಕ ಅಲಗೇರಿ ಹಾಗೂ ಕಾರಿನಲ್ಲಿದ್ದವರು ಟೋಲ್ ಗೇಟ್‌ನಲ್ಲಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಎಎಸ್‌ಪಿ ಭದ್ರಿನಾಥ್ ಅವರು ಅದೇ ಮಾರ್ಗವಾಗಿ ಕುಮಟಾಕ್ಕೆ ತೆರುಳುವಾಗ ಗಲಾಟೆಯಾಗುವುದನ್ನು ಕಂಡು ಸೈರನ್ ಹಾಕಿಕೊಂಡು ಗುಂಪು ಚದುರಿಸಿ ಹೋಗುವಂತೆ ತಿಳಿಸಿದ್ದಾರೆ. ಆದರೆ ಗುಂಪು ಚದುರಿ ಹೋಗದ ಹಿನ್ನಲೆಯಲ್ಲಿ ತಾವೇ ಕೆಳಗೆ ಇಳಿದು ಯಾಕೆ ಗಲಾಟೆ ಮಾಡುವುದಾಗಿ ಪ್ರಶ್ನಿಸಲು ಮುಂದಾದಾಗ, ಕಾರಿನಲ್ಲಿದ್ದವರು ಎಎಸ್‌ಪಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ‘ನಮಗೆ ಕೇಳಲು ನೀವ್ಯಾರು?’ ಎಂದು ಎಎಸ್‌ಪಿಯವರನ್ನೇ ಪ್ರಶ್ನೆ ಮಾಡಿದ್ದಾರೆ.


Ramesh Jarkiholi CD Case: ಆಡುಗೋಡಿ ಟೆಕ್ನಿಕಲ್ ಸೆಲ್​ನಲ್ಲಿ ಯುವತಿಯ ವಿಚಾರಣೆ; ಆರೋಪಿಯನ್ನು ಬಂಧಿಸುವಂತೆ ವಕೀಲ ಜಗದೀಶ್ ಆಗ್ರಹ


ಹೀಗಾಗಿ ಎಎಸ್‌ಪಿ ಅವರ ಕಾರನ್ನು ತಡೆಯಲು ಮುಂದಾದಾಗ ಚಾಲಕ ಕಾರನ್ನು ನಿಲ್ಲಿಸದೇ ಭದ್ರಿನಾಥ್ ಅವರನ್ನೇ ದಬ್ಬಿಕೊಂಡು ಮುಂದೆ ಸಾಗಿದ್ದಾರೆ. ಈ ಸಂದರ್ಭದಲ್ಲಿ ಎಎಸ್‌ಪಿ ಕೆಳಕ್ಕೆ ಬಿದ್ದಿದ್ದು, ಕೈಗೆ ಸಣ್ಣ ಗಾಯ ಕೂಡ ಆಗಿದೆ. ಇದಾದ ನಂತರ ಎಎಸ್‌ಪಿಯವರು ಕಾರ್ಯದ ನಿಮಿತ್ತ ಕುಮಟಾಕ್ಕೆ ತೆರಳುವ ಸಂದರ್ಭದಲ್ಲಿ ಅಂಕೋಲಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿ ಸಾಗಿದ್ದರು. ಇದೇ ವೇಳೆ ಟೋಲ್ ಸಿಬ್ಬಂದಿಯೋರ್ವ ಸಹ ಅಂಕೋಲಾ ಪೊಲೀಸ್ ಠಾಣೆಗೆ ಬಂದು ದೂರನ್ನೂ ನೀಡಿದ್ದ.


ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಈ ದೂರಿನನ್ವಯ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ವಿಷಯ ತಿಳಿದು ಆರೋಪಿತರನ್ನ ಹುಡುಕಾಟ ನಡೆಸಲು ಮುಂದಾದಾಗ ಸಾಕ್ಷಿತ್ ಹಾರ್ಡವೇರ್ ಬಳಿ ಇರುವುದಾಗಿ ತಿಳಿದು ಬಂದಿದೆ. ಆಗ ಸ್ಥಳಕ್ಕೆ ತೆರಳಿದ್ದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ಠಾಣೆಯವರೆಗೂ ಬೆತ್ತದ ರುಚಿ ತೋರಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ರಸ್ತೆಯಲ್ಲಿಯೇ ಆರೋಪಿತರಿಗೆ ಹೊಡೆದುಕೊಂಡು ಠಾಣೆಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ನೋಡಿ ಸಾರ್ವಜನಿಕರು ಕಂಗಾಲಾಗಿದ್ದರು ಎನ್ನಲಾಗಿದೆ.


ಅಲ್ಲದೇ ಠಾಣೆಗೆ ತಂದ ನಂತರವೂ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ ಎನ್ನಲಾಗಿದ್ದು, ಈ ವಿಷಯ ಕೆಲವೇ ಸಮಯದಲ್ಲಿ ಇಡೀ ಅಂಕೋಲಾ ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡಿದೆ. ಠಾಣೆಗೆ ಆರೋಪಿತರನ್ನ ಕರೆತಂದ ನಂತರ ಎಫ್‌ಐಆರ್ ದಾಖಲು ಮಾಡಲು ವಿಳಂಬವಾಗಿತ್ತು ಎನ್ನಲಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭದ್ರಿನಾಥ್ ತಮ್ಮ ಮೇಲೆ ಹಲ್ಲೆಗೆ ಯತ್ನಿಸಿರುವ ಬಗ್ಗೆ ದೂರು ನೀಡಿಲ್ಲ, ಟೋಲ್ ಸಿಬ್ಬಂದಿ ನೀಡಿದ ದೂರಿನನ್ವಯ ಬೊಮ್ಮಯ್ಯ ನಾಯಕ, ಸುರೇಶ್ ನಾಯಕ್ ಅಲಗೇರಿ, ಗೋಪಾಲ್ ಗಿರಿಯಣ್ಣ ನಾಯಕ್, ಸುರೇಶ್ ಗಿರಿಯಣ್ಣ ನಾಯಕ್ ಹಾಗೂ ಸುರೇಶ್ ನಾಯಕ ಅಲಗೇರಿಯವರ ಅಪ್ರಾಪ್ತ ಪುತ್ರನ ಮೇಲೆ ದೂರು ದಾಖಲಾಗಿದೆ. ಈ ಪೈಕಿ ಓರ್ವ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.


ಬೆತ್ತದ ರುಚಿಗೆ ಹೋಳಿ ಬಣ್ಣ ನಾಪತ್ತೆ


ಹೋಳಿ ಹಬ್ಬದ ಅಮಲಿನಲ್ಲಿ ಇದ್ದ ಈ‌ಪುಂಡರು ಎಎಸ್ಪಿ ಜತೆ ಜಗಳಕ್ಕೆ ಇಳಿದಿದ್ದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಕೊಂಚ ಆಯ ತಪ್ಪಿದ್ದರೂ ಕೂಡಾ ಎಎಸ್ಪಿ ಭದ್ರಿನಾಥ ಗಂಭೀರ ಸ್ವರೂಪದ ಗಾಯಕ್ಕೆ ಒಳಗಾಗುತ್ತಿದ್ದರು. ಈ ವಿಚಾರ ತಿಳಿದೊಡನೆ ಆರೋಪಿಗಳ ಹೆಡೆಮುರಿ ಕಟ್ಟಲು ಮುಂದಾದ ಪೋಲಿಸರು ಹೋಳಿ ಹಬ್ಬದ ಸಂಭ್ರಮಕ್ಕೆ ಮೈಗೆ ಹಚ್ಚಿ ಬಣ್ಣ ಕೂಡ  ಹಾರಿ ಹೋಗಿದೆ. ಆ ಪರಿಯಲ್ಲಿ ಪುಂಡರ ಆರ್ಭಟ ಬಿಡಿಸಿದ್ದಾರೆ ಪೋಲಿಸರು. ಪುಂಡತನ‌ ಮೆರೆದವರು ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ.

Published by:Latha CG
First published: