ಮಂಡ್ಯದಲ್ಲಿ ಸಿನಿಮೀಯ ಶೈಲಿಯಲ್ಲಿ ನಡೆದ ಕಿಡ್ನಾಪ್ ಡ್ರಾಮ; ಮೂವರು ಯುವಕರ ಬಂಧನ

ನಾಗಮಂಗಲ ಪುರಸಭಾ ಸದಸ್ಯನ ಮಗನನ್ನು ಆತನ ಸ್ನೇಹಿತನ ಸಹಾಯದಿಂದ ಮೂವರು ಯುವಕರು ಅಪಹರಣ ಮಾಡಿ 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು.

news18
Updated:November 30, 2019, 11:20 AM IST
ಮಂಡ್ಯದಲ್ಲಿ ಸಿನಿಮೀಯ ಶೈಲಿಯಲ್ಲಿ ನಡೆದ ಕಿಡ್ನಾಪ್ ಡ್ರಾಮ; ಮೂವರು ಯುವಕರ ಬಂಧನ
ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು
  • News18
  • Last Updated: November 30, 2019, 11:20 AM IST
  • Share this:
ಮಂಡ್ಯ(ನ. 30): ಹಣದಾಸೆಗೆ ಬಿದ್ದ ಯುವಕರ ತಂಡವೊಂದು ತಮ್ಮದೇ ಊರಿನ ಶ್ರೀಮಂತ‌ರ ಮನೆಯ ಯುವಕನೋರ್ವನನ್ನು ಕಿಡ್ನಾಪ್ ಮಾಡಿ ಸಿಕ್ಕಿಬಿದ್ದಿರುವ ಘಟನೆ ಸಕ್ಕರೆನಾಡಿನಲ್ಲಿ ನಡೆದಿದೆ. ನಾಗಮಂಗಲ ಪಟ್ಟಣದ ಪುರಸಭಾ ಸದಸ್ಯ ತಿಮ್ಮಪ್ಪ ಎಂಬುವರ ಮಗ ಮಿಥುನ್ ಅಪಹರಣಕ್ಕೊಳಗಾಗಿದ್ದ ಯುವಕ. ಕಿಡ್ನಾಪ್ ಮಾಡಿದ ನಾಗಮಂಗಲದ ಶಬರೀಶ್, ಮಹೇಶ್ ಮತ್ತು ಕೌಶಿಕ್ ಇದೀಗ ಬಂಧಿತರಾಗಿದ್ದಾರೆ.

ನಾಗಮಂಗಲದ ಶಬರೀಶ್, ಮಹೇಶ್, ಮತ್ತು ಕೌಶಿಕ್ ಎಂಬುವರು ಮಿಥುನ್ ಸ್ನೇಹಿತ ಅಕ್ಷಯ್​ಗೆ ಹಣದಾಸೆ ತೋರಿಸಿ ಸಂಚು ರೂಪಿಸಿದ್ದಾರೆ. ಅಕ್ಷಯ್ ಮೂಲಕ ಮಿಥುನ್​ನನ್ನು ಮೈಸೂರಿನ ಹೊರ ವಲಯದಲ್ಲಿರುವ ಪೂಜಾರಿ ಫಿಶ್​ಲ್ಯಾಂಡ್ ಹೋಟೇಲ್​ಗೆ ಕರೆಸಿಕೊಂಡಿದ್ದಾರೆ. ನಂತರ ಆತನನ್ನು ಅಲ್ಲಿಂದ ಕಿಡ್ನಾಪ್ ಮಾಡಿದ್ದಾರೆ‌. ಬಳಿಕ ಆತನನ್ನು ಮೈಸೂರಿನ ಮನೆಯೊಂದರಲ್ಲಿ ಕೂಡಿ ಹಾಕಿ ಮಿಥುನ್ ಕಡೆಯಿಂದ ಫೋನ್ ಮಾಡಿಸಿ ಪೋಷಕರಿಗೆ 30 ಲಕ್ಷದ ಹಣದ ಬೇಡಿಕೆ ಇಟ್ಟಿದ್ದಾರೆ. ಕಡೆಗೆ ಮಿಥನ್ ಪೋಷಕರಿಂದ 50 ಲಕ್ಷ ಹಣವನ್ನು ನಾನು ಕೊಡಿಸ್ತಿನಿ. ಅದ್ರಲ್ಲಿ ನನಗೆ 20 ಲಕ್ಷ ವಾಪಸ್ ಕೊಡಿ ಎಂದು ಅವರೊಂದಿಗೆ ಮಾತುಕತೆ ನಡೆಸಿ ಚಾಣಾಕ್ಷ್ಯತನದಿಂದ ಮನೆಗೆ ಬಂದಿದ್ದಾನೆ.

ಇದನ್ನೂ ಓದಿ: ಹನಿಟ್ರ್ಯಾಪ್​ ಪ್ರಕರಣ: ಖಾಸಗಿ ವಿಡಿಯೋ ಡಿಲೀಟ್​ ಮಾಡಿಸಲು ಸಿಸಿಬಿ ಕಚೇರಿ ಬಳಿ ಶಾಸಕರ-ಅಧಿಕಾರಿಗಳ ದಂಡು!

ಎರಡು ದಿನ‌ ಆದರೂ ಹಣ ಬರದಿರುವುದಿಂದ ಆಕ್ರೋಶಗೊಂಡ ಅಪಹರಣಕಾರರು ಧಮಕಿ ಹಾಕಿ ಕೊಲೆಮಾಡುವ ಬೆದರಿಕೆ ಒಡ್ಡುತ್ತಿದ್ದಂತೆ ಮಿಥುನ್ ಪೋಷಕರು ನಾಗಮಂಗಲ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಶಬರೀಶ್, ಕೌಶಿಕ್, ಮಹೇಶ್ ಅವರನ್ನು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಕಾರು ಚಾಲಕ ಹಾಗೂ ಮಿಥುನ್ ಸ್ನೇಹಿತ ಅಕ್ಷಯ್ ತಲೆ ಮರೆಸಿಕೊಂಡಿದ್ದು ಇಬ್ಬರಿಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ಧಾರೆ. ಇದೇ ವೇಳೆ ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನದ ವಶಕ್ಕೆ ನೀಡಿದ್ದಾರೆ‌.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: November 30, 2019, 11:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading