ರಾಮನಗರ: ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 18 ದನಗಳನ್ನು ರಕ್ಷಣೆ ಮಾಡಲಾಗಿದೆ. ನಗರದ ಟೌನ್ ಪೊಲೀಸ್ ಠಾಣೆಯ ಮುಂಭಾಗವೇ ಆರೋಪಿಗಳಾದ ಸಿದ್ದಿಕ್ ಅಹ್ಮದ್ ಮತ್ತು ನಾಗರಾಜ್ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಕ್ಯಾಂಟರ್ನಲ್ಲಿ ಈ ಜಾನುವಾರುಗಳನ್ನಿರಿಸಿ ಕಸಾಯಿಖಾನೆಗೆ ಸಾಗಿಸುತ್ತಿದ್ದರೆನ್ನಲಾಗಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕೂಡಲೇ ಅಲರ್ಟ್ ಮಾಡಿದ್ದಾರೆ. ಟೌನ್ ಪೊಲೀಸ್ ಠಾಣೆ ಮುಂಭಾಗ ಹೋಗುತ್ತಿದ್ದ ಈ ವಾಹನವನ್ನು ವೇದಿಕೆ ಕಾರ್ಯಕರ್ತರು ತಡೆದು ನಿಲ್ಲಿಸಿದ್ದಾರೆ. ಬಳಿಕ ಇಬ್ಬರು ವ್ಯಕ್ತಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ವಾಹನದೊಳಗಿದ್ದ 18 ಜಾನುವಾರುಗಳ ರಕ್ಷಣೆ ಮಾಡಿದ್ದಾರೆ.
ಈ ವಾಹನದಲ್ಲಿ 15 ಸೀಮೆ ಹಸು ಮತ್ತು 3 ಎಮ್ಮೆಗಳಿದ್ದವು. ನಾಗಮಂಗಲದಿಂದ ಈ ಪ್ರಾಣಿಗಳನ್ನು ಹೊತ್ತು ತಮಿಳುನಾಡಿನ ಡೆಂಕಣಿಕೋಟೆಯ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಮೈಸೂರಿನ ಶಾಂತಿನಗರ ನಿವಾಸಿ ಸಿದ್ದಕ್ ಅಹ್ಮದ್ ಅವರು ವಾಹನ ಚಲಾಯಿಸುತ್ತಿದ್ದರೆ, ಮಂಡ್ಯದ ಶ್ರೀರಂಗಪಟ್ಟಣ ನಿವಾಸಿ ನಾಗರಾಜು ಈ ಕ್ಯಾಂಟರ್ ವಾಹನದ ಕ್ಲೀನ್ ಆಗಿದ್ದ. ಇವರಿಬ್ಬರು ಸದ್ಯಕ್ಕೆ ಪೊಲೀಸರ ವಶದಲ್ಲಿದ್ದಾರೆ. ಚನ್ನಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.