ಚನ್ನರಾಯಪಟ್ಟಣದಲ್ಲಿ ಸುಪಾರಿ ಕಿಲ್ಲರ್ಸ್? ಅಪರಿಚಿತರ ಬ್ಯಾಗ್​ನಲ್ಲಿ ಗನ್, ಚಾಕು, ಡ್ರ್ಯಾಗನ್ ಪತ್ತೆ; ಶಂಕಿತರ ಬಂಧನ

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಬ್ಯಾಗ್​ನಲ್ಲಿ ಮಾರಕ ಆಯುಧಗಳಿರುವುದು ಗೊತ್ತಾಗಿದೆ. ಮಂಗಳೂರಿನ ಘಟನೆಗೂ ಇಲ್ಲಿ ಪತ್ತೆಯಾದ ಬ್ಯಾಗ್​ಗೂ ಸಂಬಂಧ ಇಲ್ಲ. ಸುಪಾರಿ ಕೊಲೆಗೆ ಶಂಕಿತರು ಈ ಬ್ಯಾಗ್ ತಂದಿರಬಹುದು ಎಂದು ಪೊಲೀಸರು ಅನುಮಾನಿಸಿದ್ಧಾರೆ.

news18
Updated:January 21, 2020, 1:53 PM IST
ಚನ್ನರಾಯಪಟ್ಟಣದಲ್ಲಿ ಸುಪಾರಿ ಕಿಲ್ಲರ್ಸ್? ಅಪರಿಚಿತರ ಬ್ಯಾಗ್​ನಲ್ಲಿ ಗನ್, ಚಾಕು, ಡ್ರ್ಯಾಗನ್ ಪತ್ತೆ; ಶಂಕಿತರ ಬಂಧನ
ಚನ್ನರಾಯಪಟ್ಟಣ ಬಸ್ ನಿಲ್ದಾಣ
  • News18
  • Last Updated: January 21, 2020, 1:53 PM IST
  • Share this:
ಹಾಸನ(ಜ. 21): ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಬಸ್​ವೊಂದರಲ್ಲಿ ಅನುಮಾನಾಸ್ಪದ ಬ್ಯಾಗ್​ವೊಂದು ಕಾಣಿಸಿ ಜನರು ಭಯಭೀತಗೊಂಡ ಘಟನೆ ವರದಿಯಾಗಿದೆ. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅಪರಿಚಿತ ವ್ಯಕ್ತಿಗಳು ಈ ಬ್ಯಾಗನ್ನು ಬಸ್ಸಿನಲ್ಲಿ ಬಿಟ್ಟು ಹೋಗಿದ್ಧಾರೆ. ಇದರಲ್ಲಿ ಎರಡು ಗನ್, ಚಾಕು, ಡ್ರ್ಯಾಗನ್ ಸೇರಿ ವಿವಿಧ ವಸ್ತುಗಳಿದ್ದುದು ಕಂಡು ಬಂದಿದೆ.

ಪೊಲೀಸರು ಇಬ್ಬರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಯಾರದ್ದೋ ಕೊಲೆಗೆ ಸುಪಾರಿ ಪಡೆದಿರಬಹುದು ಎಂಬುದು ಪೊಲೀಸರ ಶಂಕೆ. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ರಾಮ್ ನಿವಾಸ್ ಸೆಪಟ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೆಂಗೇರಿಯ ಸಂತ ಫ್ರಾನ್ಸಿಸ್​ ಅಸೀಸಿ ಚರ್ಚ್​ ಮೇಲೆ ದುಷ್ಕರ್ಮಿಗಳ ದಾಳಿ

ಬಸ್​ನಲ್ಲಿ ಈ ಬ್ಯಾಗ್ ಪತ್ತೆಯಾದಾಗ ಪ್ರಯಾಣಿಕರಲ್ಲಿ ದಿಗಿಲು ಮೂಡಿತ್ತು. ನಿನ್ನೆಯಷ್ಟೇ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್​ಗಳು ಪತ್ತೆಯಾಗಿ ದೇಶಾದ್ಯಂತ ಸುದ್ದಿಯಾಗಿದೆ. ಈಗ ಆಗಂತುಕರು ಬಿಟ್ಟು ಹೋಗಿರುವ ಈ ಬ್ಯಾಗ್​ನಲ್ಲಿ ಬಾಂಬ್ ಇರಬಹುದೆಂದು ಜನರು ಶಂಕಿಸಿ ಭಯಗೊಂಡಿದ್ದರು. ಆದರೆ, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಬ್ಯಾಗ್​ನಲ್ಲಿ ಮಾರಕ ಆಯುಧಗಳಿರುವುದು ಗೊತ್ತಾಗಿದೆ. ಮಂಗಳೂರಿನ ಘಟನೆಗೂ ಇಲ್ಲಿ ಪತ್ತೆಯಾದ ಬ್ಯಾಗ್​ಗೂ ಸಂಬಂಧ ಇಲ್ಲ. ಸುಪಾರಿ ಕೊಲೆಗೆ ಶಂಕಿತರು ಈ ಬ್ಯಾಗ್ ತಂದಿರಬಹುದು ಎಂದು ಪೊಲೀಸರು ಅನುಮಾನಿಸಿದ್ಧಾರೆ. ಬಂಧಿತರಾಗಿರುವ ಇಬ್ಬರು ಆರೋಪಿಗಳ ವಿಚಾರಣೆಯಿಂದ ಹೆಚ್ಚಿನ ಮಾಹಿತಿ ಸಿಗಬಹುದು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ