ಕರಾವಳಿ ಮೀನುಗಾರ ನಾಪತ್ತೆ ಪ್ರಕರಣ: ಸುಳಿವು ಸಿಕ್ಕಿಲ್ಲ, ಅಧಿಕಾರಿಗಳ ಜತೆ ಮಾತಾಡಿದ್ದೇನೆ; ಎಂ.ಬಿ. ಪಾಟೀಲ್

ಉಡುಪಿಯ ಮಲ್ಪೆ ಬಂದರಿನಿಂದ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎಂಟು ಮಂದಿ ಮೀನುಗಾರರು ಡಿ. 13ರಂದು ಬೋಟ್​ ಸಮೇತ ನಾಪತ್ತೆಯಾಗಿದ್ದಾರೆ.

sushma chakre | news18
Updated:January 10, 2019, 9:21 PM IST
ಕರಾವಳಿ ಮೀನುಗಾರ ನಾಪತ್ತೆ ಪ್ರಕರಣ: ಸುಳಿವು ಸಿಕ್ಕಿಲ್ಲ, ಅಧಿಕಾರಿಗಳ ಜತೆ ಮಾತಾಡಿದ್ದೇನೆ; ಎಂ.ಬಿ. ಪಾಟೀಲ್
ಸಚಿವ ಎಂ.ಬಿ. ಪಾಟೀಲ್
sushma chakre | news18
Updated: January 10, 2019, 9:21 PM IST
ಜನಾರ್ದನ್ ಹೆಬ್ಬಾರ್

ಬೆಂಗಳೂರು (ಜ. 10): ಕಳೆದ ಡಿ. 13ರಂದು ಮಂಗಳೂರು ಕರಾವಳಿ ತೀರದ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿದ್ದ 8 ಮೀನುಗಾರರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅದಾಗಿ ಹೆಚ್ಚೂಕಡಿಮೆ ತಿಂಗಳೇ ಕಳೆದರೂ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ. ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಕರಾವಳಿ ಭಾಗದವರು ಪ್ರತಿಭಟನೆ ನಡೆಸಿದ್ದರು.

ಇಂದು ಕರಾವಳಿಯ ಮೀನುಗಾರರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಎಂ.ಬಿ. ಪಾಟೀಲ್​, ಮಂಗಳೂರು ಕರಾವಳಿ ತೀರದಿಂದ ಕಾಣೆಯಾಗಿರುವ ಮೀನುಗಾರರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹಿರಿಯ ಪೊಲೀಸ್​ ಅಧಿಕಾರಿಗಳ ಜೊತೆಗೆ ಮಾತಾಡಿದ್ದೇನೆ. ತನಿಖೆ ಇನ್ನು ನಡೆಯುತ್ತಿದೆ. ನಮ್ಮ ನೌಕಾಪಡೆಯವರು ರೇಡಿಯೋ ತರಂಗಗಳ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾಪತ್ತೆಯಾದ ಮೀನುಗಾರರ ಬಗ್ಗೆ ನಿರ್ಲಕ್ಷ್ಯ; ಸರ್ಕಾರದ ವಿರುದ್ಧ ನಾಳೆ ಮೀನುಗಾರರಿಂದ ಪಾದಯಾತ್ರೆ

ಇದು ಅತ್ಯಂತ ಸೂಕ್ಷ್ಮ ವಿಷಯವಾದ ಕಾರಣ ಹೆಚ್ಚಿನ ವಿವರ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಕೇಂದ್ರ ರಕ್ಷಣಾ ಪಡೆಯ ನೆರವನ್ನೂ ಪಡೆಯಲಾಗಿದೆ. ಜೊತೆಗೆ, ಮಹಾರಾಷ್ಟ್ರ ಗೃಹ ಸಚಿವರೊಂದಿಗೂ ಮಾತುಕತೆ ನಡೆಸಿ ಸಹಕಾರ ಕೋರಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಡಿ.13ರಂದು ಮಲ್ಪೆ ಬಂದರಿನಿಂದ 8 ಮೀನುಗಾರರು ನಾಪತ್ತೆಯಾಗಿದ್ದರು. ಈ ಮೀನುಗಾರರಿದ್ದ ಬೋಟ್​ ಸಮುದ್ರದಲ್ಲಿ ಕಣ್ಮರೆಯಾಗಿತ್ತು. ಹಡಗು ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು, ಕರಾವಳಿ ರಕ್ಷಣಾ ಪಡೆಯವರು ಮತ್ತು ನೌಕಾಪಡೆ ಯೋಧರು ಶೋಧ ಕಾರ್ಯಾಚರಣೆ ನಡೆಸಿದ್ದರು. ನಾಪತ್ತೆಯಾದವರನ್ನು ಬೋಟ್ ಮಾಲೀಕ ಚಂದ್ರ ಶೇಖರ, ಮೀನುಗಾರರಾದ ದಾಮೋದರ, ಲಕ್ಷ್ಮಣ್, ಸತೀಶ್, ರವಿ, ಹರೀಶ್, ರಮೇಶ್, ಜೋಗಯ್ಯ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಕೊಲೆಗೆ ಸಂಚು
Loading...

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ