ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನ ಮಾಡಿ ನಾಡಗೀತೆಗೆ ಅಪಮಾನ ಆರೋಪದಡಿ ರೋಹಿತ್ ಚಕ್ರತೀರ್ಥ (Rohit Chakratirtha) ಮತ್ತು ಲಕ್ಷ್ಮಣ ಅಕಾಶೆ ಕಾರ್ಕಳ ವಿರುದ್ದ ದೂರು ನೀಡಲಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ (Bengaluru Police Commissioner) ಪ್ರತಾಪ್ ರೆಡ್ಡಿ ಅವರಿಗೆ ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ದೂರು ನೀಡಿದ್ದಾರೆ. ನಾಡು ನುಡಿಯ ಹೆಮ್ಮೆ ಕುವೆಂಪುರ (Kuvempu) ಬಗ್ಗೆ ಅವಹೇಳನ ರೀತಿಯಲ್ಲಿ ಬರೆದು ಸಾಮಾಜಿಕ ಜಾಲಾತಾಣದಲ್ಲಿ ಹಾಕಲಾಗಿದೆ ಎಂದು ದೂರಲಾಗಿದೆ. ಲಕ್ಷ್ಮಣ ಎಂಬುವರು ಕುವೆಂಪುರ ಬಗ್ಗೆ ಕೆಟ್ಟ ಪದದಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಇಬ್ಬರ ವಿರುದ್ದ ಸಮಾಜ ಸ್ವಾಸ್ಥ ಕೆಡುವ ಪ್ರಚೋದನೆ ಎಸಗಿದ್ದಾರೆ ಎಂದು ಆರೋಪಿಸಿ ಕಮಿಷನರ್ ಗೆ ದೂರು ನೀಡಲಾಗಿದೆ.
ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಸಾಹಿತಿಗಳು ಪಠ್ಯಪುಸ್ತಕ ಮರು ಪರಿಷ್ಕರಣೆ ಜಾರಿಯಾಗಬಾರದು ಅಂತ ಆಗ್ರಹಿಸಿ ಸುಮಾರು 71ಕ್ಕೂ ಹೆಚ್ಚು ಸಾಹಿತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಕೆ.ಮರುಳಸಿದ್ದಪ್ಪ, ವಿಜಯಾ, ರಾಜೇಂದ್ರ ಚೆನ್ನಿ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಟಿ.ಆರ್.ಚಂದ್ರಶೇಖರ್, ಹಿ.ಶಿ. ರಾಮಚಂದ್ರೇಗೌಡ, ವಿ.ಪಿ. ನಿರಂಜನಾರಾಧ್ಯ, ಕಾಳೇಗೌಡ ನಾಗವಾರ, ಕುಂ.ವೀರಭದ್ರಪ್ಪ, ರಹಮತ್ ತರಿಕೆರೆ, ವಸಂತ ಬನ್ನಾಡಿ ಸೇರಿದಂತೆ 71 ಮಂದಿ ಒಪ್ಪಿಗೆ ಸೂಚಿಸಿದ್ದಾರೆ.
ಪತ್ರದಲ್ಲಿ ಸಾಹಿತಿಗಳ ಆರೋಪವೇನು? ಕನ್ನಡ ನಾಡಿನ ಅಸ್ಮಿತೆ, ಕನ್ನಡ ಭಾಷೆಯ ಘನತೆಗಳನ್ನು ಗಾಳಿಗೆ ತೂರುವ ರೋಹಿತ್ ಚಕ್ರತೀರ್ಥರವರ ಸಮಿತಿ, ಅದಕ್ಕೆ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಲ್ಲೊಬ್ಬರಾದ ಹಡಗೇವಾರ್ರವರ 'ನಿಜವಾದ ಆದರ್ಶ ಪುರುಷ ಯಾರಾಗಬೇಕು', ಬನ್ನಂಜೆ ಗೋವಿಂದಾಚಾರ್ಯರವರ 'ಶುಕನಾಸನ ಉಪದೇಶ' ಶತಾವಧಾನಿ ಗಣೇಶ್ ರವರ 'ಶ್ರೇಷ್ಠ ಭಾರತೀಯ ಚಿಂತನೆಗಳು, ಶಿವಾನಂದ ಕಳವೆಯವರ 'ಸ್ವದೇಶಿ ಸೂತ್ರದ ಸರಳ ಹಬ್ಬ' ಪಠ್ಯಗಳನ್ನು ಸೇರಿಸಲಾಗಿದೆ. ಯಾವ ಕಾರಣಕ್ಕೆ ಕನ್ನಡದ ಪ್ರಮುಖ ಲೇಖಕ, ಲೇಖಕಿಯರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಕಾರಣಗಳನ್ನು ಕೊಟ್ಟಿಲ್ಲ ಅಂತ ಪತ್ರದಲ್ಲಿ ಆರೋಪಿಸಲಾಗಿದೆ.
ಹೆಗಡೆವಾರ್ ಭಾಷಣ ಸೇರ್ಪಡೆಗೆ ವಿರೋಧ ಶಿಕ್ಷಣ ತಜ್ಞರಲ್ಲದ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಸಂಶೋಧನೆ ಕೈಗೊಳ್ಳದ ರೋಹಿತ್ ಚಕ್ರತೀರ್ಥ ಅವರನ್ನು ಯಾವ ಮಾನದಂಡದಲ್ಲಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ? ಈ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರ ನೀಡಿಲ್ಲ. ಈ ಸಮಿತಿ ಏಕಪಕ್ಷೀಯವಾಗಿ 10ನೇ ತರಗತಿಯ ಪಠ್ಯ ಪರಿಷ್ಕರಿಸಲಾಗಿದೆ’ ಎಂದಿದ್ದಾರೆ. ಹೆಡಗೇವಾರ್ ಅವರ ಭಾಷಣವನ್ನು ಸೇರಿಸುವುದರ ಕಾರಣ ಮಾತ್ರ ಹೇಳದೇ ಹೋದರೂ ಅರ್ಥವಾಗುತ್ತದೆ. ಒಟ್ಟಾರೆಯಾಗಿ ಇಲ್ಲಿ ಯಾವುದೇ ರೀತಿಯ ಪಾರದರ್ಶಕತೆ ಕಂಡು ಬರುತ್ತಿಲ್ಲ ಅಂತ ಸಾಹಿತಿಗಳು ಆರೋಪಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರ ವಿರುದ್ಧ ಆಕ್ರೋಶ ಆರ್ಎಸ್ಎಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದನ್ನು ಸಮರ್ಥಿಸಿಕೊಂಡಿರುವ ಸಚಿವರು, ಜವಾಬ್ದಾರಿಯುತ ಮತ್ತು ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಿಲ್ಲ ಅಂತ ಸಾಹಿತಿಗಳು ಆರೋಪಿಸಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಉಡಾಫೆಯಿಂದ ಮಾತನಾಡಿದ್ದಾರೆ ಪತ್ರದಲ್ಲಿ ದೂರಿದ್ದಾರೆ.
ವಿಪಕ್ಷಗಳಿಗೆ ಸಂಗೊಳ್ಳಿ ರಾಯಣ್ಣನ ಪಾಠ ಬೇಡ: ಬಿ.ಸಿ.ನಾಗೇಶ್ ವ್ಯಂಗ್ಯ ವಿಪಕ್ಷ ಅಧಿಕಾರದಲ್ಲಿದ್ದಾಗ ಒಂದು ಪೇಜ್ ಇದ್ದ ಟಿಪ್ಪು ಪಠ್ಯ ಆರು ಪೇಜ್ ಮಾಡಿದ್ರು. ಒಡೆಯರ್ ಪಠ್ಯ ಯಾಕೆ ಕಡಿತ ಮಾಡಿದ್ದು? ಆವಾಗ ಏಕೆ ಯಾರೂ ಪ್ರಶ್ನೆ ಮಾಡಲಿಲ್ಲ. ಮತ ಬ್ಯಾಂಕ್ ಗಾಗಿ ಹೀಗೆಲ್ಲ ಮಾಡಿದ್ರಾ? ಬರಗೂರು ರಾಮಚಂದ್ರಪ್ಪ (Baraguru Ramachandrappa) ತುಂಬಾ ಒಳ್ಳೆಯವರು. ಅವರಿಗೆ ಒತ್ತಡ ಹೇರಿ ಹೀಗೆಲ್ಲ ಮಾಡಿದ್ರಾ? ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಪ್ರಶ್ನಿಸಿದ್ದಾರೆ.
ಇದರ ಜೊತೆಗೆ ಈಗಾಗಲೆ ತೀವ್ರ ವಿವಾದ ಎಬ್ಬಿಸಿರುವ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಇನ್ನಷ್ಟು ದೊಡ್ಡದಾಗಿ ಲಕ್ಷಣ ಗೋಚರಿಸುತ್ತಿದೆ. ರೋಹಿತ್ ಚಕ್ರತೀರ್ಥ (Rohith Chakrathirtha) ನೇತೃತ್ವದ ಸಮಿತಿಯು ಇದೇ ಸಮಿತಿಗೆ ಪಿಯು ಪಠ್ಯ ಪುಸ್ತಕ ಪರಿಷ್ಕರಣೆಯ (2nd PU Text Book Revise) ಜವಾಬ್ದಾರಿಯನ್ನೂ ವಹಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ