Ramanagara: ಕೆರೆಗೆ ವಿಷಯುಕ್ತ ನೀರು, ಸಾವಿರಾರು ಮೀನುಗಳ ಸಾವು!

ಕಲುಷಿತ ನೀರು ತಿಟ್ಟಮಾರನಹಳ್ಳಿ ಗ್ರಾಮ ವ್ಯಾಪ್ತಿಯ ರಾಮಮ್ಮನ ಕೆರೆ ಸೇರುತ್ತಿರುವ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ವಿಷಯುಕ್ತದಿಂದಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೆರೆಯಲ್ಲಿ ಸತ್ತು ಬಿದ್ದಿರುವ ಮೀನುಗಳು

ಕೆರೆಯಲ್ಲಿ ಸತ್ತು ಬಿದ್ದಿರುವ ಮೀನುಗಳು

  • Share this:
ರಾಮನಗರ(ಏ.22) : ಜಿಲ್ಲೆಯ ಚನ್ನಪಟ್ಟಣ ನಗರಸಭೆ ವ್ಯಾಪ್ತಿಯ ಬಡಾವಣೆಗಳ ಕಲುಷಿತ ನೀರು ತಿಟ್ಟಮಾರನಹಳ್ಳಿ ಗ್ರಾಮ ವ್ಯಾಪ್ತಿಯ ರಾಮಮ್ಮನ ಕೆರೆ ಸೇರುತ್ತಿರುವ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು
(Fish)ವಿಷಯುಕ್ತದಿಂದಾಗಿ (Poisonous) ಸಾವನ್ನಪ್ಪಿರುವ ಘಟನೆ ನಡೆದಿದೆ. ಅದೇ ಗ್ರಾಮದ ಸಂಪತ್ ಕುಮಾರ್ ಎಂಬಾತ ಮೀನುಗಾರಿಕೆ ಇಲಾಖೆ (Fisheries Department) ವತಿಯಿಂದ ಟೆಂಡರ್ ನಿಂದ ಮೀನುಸಾಕಾಣೆಗಾಗಿ ಕೆರೆಯನ್ನ 26.30.000 ₹ ಲಕ್ಷ ರೂಪಾಯಿಗೆ ದತ್ತು ಪಡೆದಿದ್ದು ಈಗ ಸಂಪೂರ್ಣ ನಷ್ಟ (Loss) ಅನುಭವಿಸಿದ್ದೇನೆಂದು ನ್ಯೂಸ್ 18 ಮೂಲಕ ಬೇಸರ ವ್ತಕ್ತಪಡಿಸಿದ್ದಾರೆ.


1 ಲಕ್ಷ ಮೀನಿನ ಮರಿಗಳನ್ನ  ಕೆರೆಗೆ ಬಿಟ್ಟಿದ್ದು ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪಿವೆ‌. ಅದರಲ್ಲಿಯೂ ಇನ್ನೇನು ಕೆಲವೇ ದಿನಗಳಲ್ಲಿ ಬಲೆ ಹಾಕಬೇಕಿದ್ದ ದಪ್ಪ ಮೀನುಗಳೇ ಹೆಚ್ಚಾಗಿ ಸಾವನ್ನಪ್ಪಿವೆ.

ಕೊಳಚೆ ನೀರಿನಿಂದ ಮೀನುಗಳ ಸಾವು

ಇನ್ನು ಇದಕ್ಕೆ ಪ್ರಮುಖವಾಗಿ ಚನ್ನಪಟ್ಟಣ ನಗರದ ಬಡಾಮಕಾನ್, ಎಲೇಕೇರಿ, ಕೋಟೆ ಸೇರಿ ಹಲವು ಬಡಾವಣೆಯ ಕೊಳಚೆ ನೀರು ಕೆರೆ ಸೇರಿತ್ತಿದ್ದು ನೀರೆಲ್ಲವೂ ಕಲುಷಿತ ಆಗ್ತಿದೆ. ಅದರಿಂದಾಗಿ ಮೀನುಗಳು ಸತ್ತಿವೆ ಎಂದು ಸಂಪತ್ ಕುಮಾರ್ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಸ್ಥಳೀಯ ಜನರು ಇದೇ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ನೀರು ಫಿಲ್ಟರ್ ಮಾಡಲಾಗ್ತಿದೆ ಎನ್ನುತ್ತಿರುವ ಪೌರಾಯುಕ್ತರು

ಈ ಬಗ್ಗೆ ನಗರಸಭೆಯ ಪೌರಾಯುಕ್ತರು ಮಾತ್ರ ಕೊಳಚೆ ನೀರು ಕೆರೆ ಸೇರುತ್ತಿದೆ, ಆದರೆ ಅದನ್ನ ಫಿಲ್ಟರ್ ಮಾಡಲಾಗ್ತಿದೆ ಎನ್ನುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ವರ್ಗ ಯಾವುದೇ ಕ್ರಮವಹಿಸಿಲ್ಲ, ನ್ಯೂಸ್ 18 ಈ ಬಗ್ಗೆ ಪ್ರಶ್ನೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.

ಮೀನುಗಾರಿಕೆ ಇಲಾಖೆಯಲ್ಲಿ ಬೇಜವ್ದಾರಿ ಅಧಿಕಾರಿಗಳ ವರ್ಗ :

ಕೆರೆಗೆ ಸೇರುತ್ತಿರುವ ಚನ್ನಪಟ್ಟಣ ನಗರದ ಕಲುಷಿತ ನೀರಿನಿಂದಾಗಿ ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೀನುಗಳ ಸಾವನ್ನಪ್ಪಿವೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರದಲ್ಲೇ ಇಂತಹ ಘಟನೆ ನಡೆದಿದೆ. ತಿಟ್ಟಮಾರನಹಳ್ಳಿ ಗ್ರಾಮದ ರಾಮಮ್ಮನ ಕೆರೆಗೆ ಚನ್ನಪಟ್ಟಣ ನಗರದ ಕೊಳಚೆ ನೀರು ಹೆಚ್ಚಾಗಿ ಹರಿದು ಬರುತ್ತಿದೆ.

ಚನ್ನಪಟ್ಟಣ ನಗರಕ್ಕೆ ಅಂಟಿಕೊಂಡಿರುವ ರಾಮಮ್ಮನ ಕೆರೆಗೆ ನಗರದವಕೋಟೆ, ಎಲೇಕೇರಿ, ಜೆ.ಸಿ.ರಸ್ತೆ, ಡಿ.ಟಿ.ರಾಮು ವೃತ್ತ ಸೇರಿ ನಗರದ ಹಲವು ಬಡಾವಣೆಯ ಕೊಳಚೆ ನೀರು ಕೆರೆಯಲ್ಲಿ ಸಂಗ್ರಹವಾಗ್ತಿದೆ. ಜೊತೆಗೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೊಳಚೆ ನೀರಿನ ಜೊತೆಗೆ ವೈದ್ಯಕೀಯ ಸಲಕರಣೆಗಳು ಸಹ ಕೆರೆಗೆ ಸೇರುತ್ತಿವೆ. ಇದರಿಂದಾಗಿ ಕೆರೆಯ ನೀರೆಲ್ಲವೂ ಸಹ ಸಂಪೂರ್ಣ ವಿಷಯುಕ್ತವಾಗ್ತಿದೆ.

ಇದನ್ನೂ ಓದಿ: Second PU Exam: ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ; ಹಿಜಾಬ್​ಗಿಲ್ಲ ಅವಕಾಶ, ಸಮವಸ್ತ್ರ ಪಾಲನೆ ಕಡ್ಡಾಯ

26.30.000 ₹ ಲಕ್ಷ ರೂಪಾಯಿಗೆ ಟೆಂಡರ್ ನಲ್ಲಿ ಕೆರೆ ದತ್ತು ಪಡೆಯಲಾಗಿತ್ತು.‌ ಮೀನು ಸಾಕಾಣಿಕೆ ಮಾಡಲು ಸಂಪತ್ ಕುಮಾರ್ ಎಂಬುವರಿಂದ ದತ್ತು ಪಡೆದಿದ್ದರು. ತಿಟ್ಟಮಾರನಹಳ್ಳಿ ಗ್ರಾಮದ ಸಂಪತ್ ಕುಮಾರ್ ರಿಂದ ಮೀನು ಸಾಕಾಣಿಕೆ ಮಾಡಲಾಗ್ತಿದೆ. 1 ಲಕ್ಷ ಮೀನಿನ ಮರಿ ಬಿಟ್ಟಿದ್ದ ಸಂಪತ್ ಕುಮಾರ್ ಗೆ ಈಗ ಸಾವಿರಾರು ಸಂಖ್ಯೆಯಲ್ಲಿ ಮೀನುಗಳ ಸಾವನ್ನಪ್ಪಿರುವುದು ಬೇಸರ ತರಿಸಿದೆ.

ಸ್ಟಿಂಗ್ ಆಪರೇಷನ್ ನಲ್ಲಿ ಡೇಂಜರ್ ಕೆರೆಯ ಅಸಲಿ ಕಥೆ ಬಯಲು

ವಿಷಯುಕ್ತ ನೀರಿನಿಂದ ಮೀನುಗಳ ಸಾವನ್ನಪ್ಪಿವೆ ಎಂದಿದ್ದಾರೆ. ಜೊತೆಗೆ ಕೆರೆಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ನ್ಯೂಸ್ 18 ಸ್ಟಿಂಗ್ ಆಪರೇಷನ್ ನಲ್ಲಿ ಡೇಂಜರ್ ಕೆರೆಯ ಅಸಲಿ ಕಥೆ ಬಯಲು ಮಾಡಿದ್ದಾರೆ ಸ್ಥಳೀಯ ಜನರು.‌ ಇನ್ನು ಮೀನುಗಾರಿಕೆ ಇಲಾಖೆಯ ದಿವ್ಯ ನಿರ್ಲಕ್ಷ್ಯ ಎದ್ದುಕಾಣ್ತಿದೆ. ಈ ಪ್ರಕರಣ ಸಂಬಂಧ ಯಾವುದೇ ಕ್ರಮ ಇಲ್ಲ,  ಪ್ರತಿಕ್ರಿಯೆ ನೀಡಲು ಅಧಿಕಾರಿಗಳ ವರ್ಗ ಹಿಂದೇಟು ಹಾಕ್ತಿದ್ದಾರೆ.

ಇದನ್ನೂ ಓದಿ: Bengaluru Rain: ಕಳೆದ 7 ವರ್ಷಗಳಲ್ಲೇ ಈ ಬಾರಿಯ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಲ್ಲಿ ಹೆಚ್ಚು ಮಳೆ, ಕಾರಣವೇನು?

ಈ ಬಗ್ಗೆ ಇಲಾಖೆಯ ಅಧಿಕಾರಿಗಳ ವರ್ಗಕ್ಕೆ ಪ್ರಶ್ನೆ ಮಾಡಿದರೆ ನಾವು ಮಾತನಾಡಲ್ಲ ಅಂತಾರೆ, ಹಾಗಾದರೆ ಮೀನುಗಾರಿಕೆ ಇಲಾಖೆ ಯಾಕೆ ಎಂಬುದು ಪ್ರಶ್ನೆ ಉದ್ಭವಿಸಿದೆ.
Published by:Divya D
First published: